ಹುಸೇನಿ ಪದ್ಯಗಳು – 38 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 38

alone_beach_nenapina sanchi

೧)
ನಿನ್ನೆಲ್ಲಾ ನೆನಪ ಗುಡ್ಡ ಹಾಕಿ
ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ
ಹೊಗೆ ಶ್ವಾಸದಲ್ಲಿ ಲೀನವಾಯ್ತು,
ನಾಳೆಯ ನನ್ನ ಉಸಿರಿಗೆ
ನಿನ್ನ ಗಂಧವಿರಬಹುದಾ .. ?

೨)
ನೀನಿಲ್ಲದೇ ಆ ತೀರ ಮೌನವಾಗಿತ್ತು.
ಮರಳನ್ನು ಮಾತನಾಡಿಸ ಹೊರಟೆ,
ಅವು ಶತಮಾನಗಳ
ನೀರಡಿಕೆಯಿಂದ ಬಳಲಿತ್ತು.

೩)
ನಿನ್ನ ಬದಲು ಆ ಕ್ಷಣದ
ನಿನ್ನ ಸ್ನಿಗ್ಧ ನಗುವಷ್ಟನ್ನೇ ತುಂಬಿಕೊಂಡೆ.
ಈ ಬದುಕು ಕಳೆಯಲು
ಅಷ್ಟೇ ಸಾಕೆನಿಸಿತು.

೪)
ಸಾವಿನ ಮನೆಯಲ್ಲಿ
ಅಗರಬತ್ತಿಯ ಸುವಾಸನೆ
ಮಂಕಾಗಿದ್ದ ಮುಖಗಳಲ್ಲಿ
ನವ ಚೈತನ್ಯ ತುಂಬುತ್ತಿದೆ..

ಹುಸೇನಿ ~

ಟೈಮ್ ಪಾಸ್ ಹನಿಗಳು

ಟೈಮ್ ಪಾಸ್ ಹನಿಗಳು

ನಿನ್ನ
ಮಾತು
ಮುತ್ತು
ಮೌನ
ಮತ್ತು
__

ನೀನು
ನನ್ನ
ಕತ್ತಲಿನ ಬೆಳಕು
ಬೆಳಕಿನ ಕತ್ತಲು

__

ಈ ಸುರಿದ ಮಳೆಗೆ
ನಾ ನಿನ್ನ ನೆನೆದಿದ್ದೇನೆ
ಹುಡುಗಿ!
__

ಮೇಘ
ನು ಭುವಿ
ಯ ಸೇರಿದ
ಹುಟ್ಟಿದ ಮಕ್ಕಳು
ಹಸಿರು…

(ಈ ಸಾರಿ ಕ್ಷಮಿಸಿಬಿಡಿ ಇನ್ನೆಂದೂ ಇಷ್ಟು ಕೆಟ್ಟದಾಗಿ ಗೀಚೋದಿಲ್ಲ 😦 )

Leave a comment

ನೆನಪಿನ ನಲ್ಲೆಯೊಡನೆ ಪಿಸುಮಾತು · ಹುಸೇನಿ ಪದ್ಯಗಳು - 16 · ಹುಸೇನಿ_ಪದ್ಯಗಳು

ನೆನಪಿನ ನಲ್ಲೆಯೊಡನೆ ಪಿಸುಮಾತು… (ಹುಸೇನಿ ಪದ್ಯಗಳು – 16)

ನಿನ್ನ ಮೌನ
ದೊಳಗಿನ ಮಾತಿನ
ಅರ್ಥ ಹುಡುಕುವುದರಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ…
__

ಇನ್ನೂ ಒಂದು ಜನ್ಮ
-ವಿರುವುದಾದರೆ
ಹಗಲಿರುಳೆನ್ನದೆ
ನಿನ್ನ ಕೆನ್ನೆಯ ಚುಂಬಿಸೋ
ಮುಂಗುರಳಾಗಿ
ಹುಟ್ಟಬೇಕೆಂಬ ಆಸೆ ಕಣೇ..!
__

ಹೂತು ಹಾಕಿದ್ದ
ಆ ನಿನ್ನ ಬೇಡದ
ನೆನಪುಗಳು
ನಿನ್ನೆಯ ಮಳೆಗೆ
ಟಿಸಿಲೊಡೆಡಿವೆ…
__

ಹೇಯ್ ಮಾತಿನಮಲ್ಲಿ,
ಆ ನಿನ್ನ ಕಣ್ಣಂಚಿನ ಕುಡಿ
ನೋಟಕು , ಗಾಢ ಮೌನಕೂ
ಏನೋ ಹೇಳಕ್ಕಿದೆಯಂತೆ
ಕೊಂಚ ಅವಕ್ಕೂ ಮಾತು
ಕಲಿಸಬಾರದೇ …?
__

ನಿನ್ನ ಕಣ್-ಸನ್ನೆಯ
ಭಾಷೆಯ ಮೀರಿಸದ
ಹೊರತು
ಭಾವನೆಗಳಿಗೆ ಅಕ್ಷರದ(ಭಾಷೆಯ, ಮಾತಿನ)
ರೂಪ ಕೊಡುವವರ
ಬಗ್ಗೆ ನನಗೆ
ಪರಿತಾಪವಿದೆ…
__

ಮಳೆ ನಿಂತರೂ
ತೊಟ್ಟಿಕ್ಕುವ
ಹನಿ,
ನೀನು..

Leave a comment

ಬಿಡಿ ಭಾವಗಳು · ಹುಸೇನಿ ಪದ್ಯಗಳು - 15 · ಹುಸೇನಿ_ಪದ್ಯಗಳು

ಬಿಡಿ ಭಾವಗಳು (ಹುಸೇನಿ ಪದ್ಯಗಳು – 15)

abc-1

೧.
ಬತ್ತಿ ಸುಟ್ಟು ಹೋಯಿತು
ಎಣ್ಣೆಯೂ ಕರಗಿತು
ಹರಡಿದ್ದ ಬೆಳಕು ಮಾತ್ರ
ಸತ್ಯ..

೨.
ನೀನು
ನನ್ನ
ಕತ್ತಲಿನ ಬೆಳಕು
ಬೆಳಕಿನ ಕತ್ತಲು

೩.
ನೀನೆಂಬ
ಕಾಲ್ಪನಿಕತೆಯನ್ನೇ
ಬದುಕಾಗಿಸಿದ
ನನಗಿಂದು
ವಾಸ್ತವದ ಹಂಗಿಲ್ಲ

೪.
ನಾನು,
ದಿಕ್ಕೆಟ್ಟು ಓಡುವ
ಕನಸುಗಳ ರಭಸಕ್ಕೆ
ಎದೆಯೊಡ್ಡಿ ನಿಂತವನು…

೫.
ಕಾದು
ಕಾವಾಗಬೇಕು.
ಜೀವ ತಳೆಯಲು,
ಪ್ರೀತಿ ಹುಟ್ಟಲು …


ನಿಮ್ಮ ನಲ್ನುಡಿ

ಒಬ್ಬಂಟಿಯಾದುದು.. · ನೆನಪಿನ ಹನಿ

ಒಬ್ಬಂಟಿಯಾದುದು..

beautiful_eye_small

ನಿನ್ನ ಕಣ್ಣಂಚಿನ
ದೇದೀಪ್ಯಮಾನ
ಬೆಳಕಿನಿಂದ
ನನ್ನೀ
ಹೃದಯ
ಚಲಿಸುತ್ತಿದ್ದರಿಂದೇನೋ
ನೀ
ಅಗಲಿದಾಗ
ಏಕಾಂತತೆಯ
ಕಾರಿರುಳಲ್ಲಿ
ನಾನು
ಒಬ್ಬಂಟಿಯಾದುದು..


ಹೇಗಿದೆ ಹೇಳಿ

ಕಣ್ಣಲ್ಲೇ ಇರುವೆ

ಕಣ್ಣಲ್ಲೇ ಇರುವೆ…!

Tear-Falling

ಇಂದು
ನೀ ನನ್ನ
ಅಗಲಿ ಹೋದರೂ..
ನಿನ್ನ
ನೆನಪುಗಳಿಂದ
ಮಾಸಿ ಹೋದರೂ..
ಎಂದಾದರೂ
ನಾ ನಿನ್ನ
ನೆನಪುಗಳಲ್ಲಿ
ಮೂಡಿದರೆ
ಹುಡುಕದಿರು ನೀನನ್ನ..
ಮತ್ತೆಲ್ಲಿಯೂ..
ನಾನಿನ್ನ
ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!


ಹೇಗಿದೆ ಹೇಳಿ

ಕಾಡುವ ಹನಿಗಳು -೧೧ · ಹುಸೇನಿ ಪದ್ಯಗಳು - 13 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 13

Roses-for-a-lost-love-a29108270

೧.
ನೆನಪಿನ ಪುಟಗಳಲ್ಲಿ ಅಡರಿ ಬಿದ್ದ
ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ
ನಿನ್ನ ರೂಪವಿತ್ತು..
ಇಂದು ನನ್ನ ವಿರಹಕ್ಕೂ…!
೨.
ದುಃಖ ಸತ್ಯಗಳು
ನನ್ನ ನೋಡಿ
ನಗುತಿದೆ;
ದುಃಖ ಮರೆಯಲು
ನಾನೂ..! 

೩.
‘ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?’
ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ.
‘ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!’
ಉತ್ತರಿಸಿತು ಕಣ್ಣು.

೪.
ಎಲೆಗಳು ಪರಸ್ಪರ ತಾಕದಿರಲು
ದೂರ ದೂರದಲಿ ನೆಟ್ಟ
ಮರದ ಬೇರುಗಳು
ಭೂಗರ್ಭದಲಿ ಬಿಗಿದಪ್ಪಿದವು..!


ಹೇಗಿದೆ ಹೇಳಿ

ಕಾಡುವ ಹನಿಗಳು -೧೦ · ಹುಸೇನಿ ಪದ್ಯಗಳು – 12 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 12

images (1)

೧.
ನನ್ನ ನಿನ್ನ ನಂಟು
ಬಿಲ್ಲು-ಬಾಣದಂತಂದೆ ನೀನು;
ಗಮ್ಯ ಸೇರಲು ಬಾಣ
ಬಿಲ್ಲನ್ನು ತೊರೆಯಲೇಬೇಕು..
೨.
ಇಲ್ಲಿರುವುದು ಬರೀ
ಛಾಯೆ;
ನನ್ನೊಳಗೆ ಪದವಾಗದೆ
ಉಳಿದದ್ದು ಕವಿತೆ..
೩.
ನಿನ್ನೆಯೊಳಗಿನ ನೀನು
ನನ್ನ ಇಂದನ್ನು ನುಂಗಿದೆ;
ಕಾಡಬೇಡ ಹೀಗೆ,
ನಗುವ ನಾಳೆಯನು
ನಾ ನೋಡಬೇಕಿದೆ..

೪.
ಕಂಡ ಕನಸು ಮಾಸಿ
ಹೋಗಬಹುದು;
ಕಾದು ಕುಳಿತ
ಮನಸ್ಸಿನ ನೋವು..?


Leave a Comment

ಕನ್ನಡ ಬ್ಲಾಗಲ್ಲಿ ನೋಡಲ್ಲಿ ಇಲ್ಲಿ ಕ್ಲಿಕ್ಕಿಸಿ
nano-mecchuge

ಹುಸೇನಿ ಪದ್ಯಗಳು – 10 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 10


ಎಲ್ಲೆಲ್ಲೋ ಹುಡುಕಿದೆ ನಿನ್ನ,
ನನ್ನೆದೆ ಮಿಡಿತದ
ತಾಳವನ್ನರಿಯದೆ…!
***

ಸಾಗರ ತಡಿಯಲ್ಲಿ
ಮುತ್ತಿನ ಚಿಪ್ಪಿನೊಳ
ರತ್ನದಂತೆ ನನ್ನೆದೆಯಲಿ
ನಿನ್ನ ನೆನಪುಗಳು…!
***

ನಿನ್ನ ನೆನಪುಗಳ
ಪೋಣಿಸಿ ಬರೆದ
ಕವಿತೆಯ ನೀ ಮೆಚ್ಚಿ ಮುತ್ತಿಟ್ಟೆ
ನೋಡು, ಅದಕ್ಕೀಗ ವಯ್ಯಾರ…!
***

ನನ್ನ ನಿನ್ನ ನಡುವೆ ಆಡದೆ
ಉಳಿದ ಮಾತುಗಳು
ಬೆಂಕಿಯುಂಡೆಯಾಗುವ ಮೊದಲೇ
ನಾ ನಿನ್ನೊಳಗೆ ಸ್ಪೋಟಿಸಬೇಕಿದೆ…!


Leave a Comment

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ