ಮಳೆ ಹುಡುಗನ ಮರ್ಮರಗಳು - ೧

ಮಳೆ ಹುಡುಗನ ಮರ್ಮರಗಳು – ೧

hand-in-rain

೧)
ಮಳೆ ಹೊಯ್ದಷ್ಟೂ ಕನಸುತ್ತೇನೆ
ಭಾವದ ಹಕ್ಕಿಯ ರೆಕ್ಕೆಗಳಿಗೆ
ಅಕ್ಷರವನ್ನು ಕಟ್ಟಿ
ಜಗದಗಲ ಹಾರುತ್ತೇನೆ…

೨)
ಇಲ್ಲಿ ನಿಲ್ಲದ ಗಾಳಿ ಮಳೆ
ಮೊದಲ ಪ್ರೇಮದ ಹೈಕ್ಳು
ಗರಿ ಬಿಚ್ಚಿ ಸಂಭ್ರಮಿಸಿದರೆ
ಮುಖವಾಡದವರು ಹೆದರಿ
ಬಾಗಿಲು ಮುಚ್ಚಿದ್ದಾರೆ…

೩)
ಈ ಮಳೆಯಲ್ಲಿ ನೆನೆದವರೆಷ್ಟೋ..
ಹನಿಗಳು ದಕ್ಕಿಸಿಕೊಂಡವರೆಷ್ಟೋ..
ಕಳೆದ ಮಳೆಗೆ ನೆನೆದಿದ್ದ ಪ್ರೇಮಿ
ಈ ಮಳೆಗೂ ಮೈಯೊಡ್ಡಿದ್ದಾನೆ…
ನಡುವೆ ಕಣ್ಣೀರು ಸಂಗಮಿಸಿದ್ದು
ಯಾರಿಗೂ ತಿಳಿಯದಂತೆ….

೪)
ಮಳೆ ಬರಲಿ,
ಕರೆಂಟೂ ಕೈಕೊಡಲಿ..
ಚಿಮಿಣಿ ದೀಪಕ್ಕೆ ನಿನ್ನ ಮಚ್ಚೆಗಳು ಮತ್ತಷ್ಟು ಹೊಳೆಯಲಿ
ಅಂದಹಾಗೆ,
ಈ ಜೋಪಡಿಗೂ ಮಳೆಹಾನಿ
ಪರಿಹಾರ ಸಿಗಬಹುದಾ ?

Leave a comment