ಮನಸಿನ ಹಾ(ಪಾ)ಡು · ಮೌನದ ಹಾಡು · ಹುಸೇನಿ_ಪದ್ಯಗಳು

ಮೌನದ ಹಾಡು …

night-light-installations-2


ಮಾತಾಗುತ್ತಾಳೆ, ಮಾತಿನಲ್ಲೇ
ಮೌನದ ಹಾಡೊಂದು
ಗುನುಗುತ್ತದೆ,
ತಡೆಯುತ್ತಾಳೆ, ಬಲವಂತವಾಗಿ
ಅಥವಾ, ……
ಮಣ್ಣು ಬೀಜದ
ಕತೆಗೆ ಕೊಪಗೊಳ್ಳುತ್ತಾಳೆ,
ಸೃಷ್ಟಿ ಹಾಡು ಕರ್ಕಶವಂತೆ!
ಪದಗಳಲಿ
ಒಳಗುದಿಗಳನೆಲ್ಲ
ಬಗೆದು ಬಗೆದು
ಬೆತ್ತಲಾಗಿದ್ದು ನಿಜವೇ ಸರಿ.
ಕತ್ತಲಲ್ಲಿ ಬೆತ್ತಲಾಗೋದು
ಸುಲಭ!
ಒಂಟಿತನಗಳು ಅಲ್ಲೇ ತಾನೇ ಗರ್ಭಕಟ್ಟಿ
ಹುಟ್ಟೋದು?!
ದೂರ ನಿಲೀಗಾಸದ ನೀಲಿಮೆ ನಾನು
ಮುಗಿಯುತ್ತೇನೆ, ಮುಂಚೆ ಆಸೆಯೊಂದೇ
ಪರದೆಯೊಳಗೆ ಹನಿವ
ಕಣ್ಣುಗಳ ಮಿಂಚಿನ
ಬೆಳಕಿನ(ಕತ್ತಲಿನ)ಹಾಡು ಗುನುಗಬೇಕು,
ರಾಗ
ಹರಿಯಬೇಕು ಸರಾಗ,
ನದಿಯಾಗಿ, ಸಮುದ್ರವಾಗಿ, ಮತ್ತೆ
ಬದುಕಾಗಿ.. !
ಹೌದು ಬದುಕಾಗಿ…

ಹುಸೇನಿ ~

Leave a comment

ಅನುಸಂಧಾನ · ಹುಸೇನಿ ಪದ್ಯಗಳು - 32 · ಹುಸೇನಿ_ಪದ್ಯಗಳು

ಅನುಸಂಧಾನ (ಹುಸೇನಿ ಪದ್ಯಗಳು – 32)

ಅನುಸಂಧಾನ -2

ನನ್ನ ಮೌನಗಳ ತುದಿಗೆ
ಬೆರಗು ಮೂಡಿ ಮಾತು ಕಲಿತಿವೆ .
ಎಷ್ಟೋಂದು ಕಟ್ಟಿಟ್ಟ ಮಾತುಗಳು
ಹಾಗೇ ಉಳಿದಿವೆ .
ನಾಳೆಗಿಷ್ಟು ಬಿಚ್ಚಿಡುವ
ಮಲಗು
ಮಾತು ಮಾತಾಡಲಿ ಮೌನಗಳೊಂದಿಗೆ..

ಅನುಸಂಧಾನ-1

ನಿನ್ನ ಮುಗಿಯದ ಮಾತಿನ ತುದಿಯ
ಮೌನದೊಳಗಿಂದ
ಕವಿತೆಯೊಂದು ಇಣುಕುತ್ತಿತ್ತು;
ಅದ ನೋಡಿದ ನನ್ನ ಸಮಸ್ತ ಕವಿತೆಗಳು
ಅಪಮಾನ ತಾಳಲಾರದೆ
ಅಸುನೀಗಿದವು …

Leave a comment

ಬಿಂದು · ಬಿಂದು – 9

ಬಿಂದು – 9

ಕೆಲವರು ಹಾಗನ್ನುತ್ತಾರೆ
ಕವಿತೆಗಳಲ್ಲಿ
ನೀನು ಸಭ್ಯತೆಯ ಎಲ್ಲೆಯನ್ನು
ಮಿರದಿರು..
ಆದರೇನು ಮಾಡಲಿ
ನಕ್ಕರೆ
ಹುಳುಕು ಹಲ್ಲು ಕಾಣುತ್ತದೆ..

ಹುಸೇನಿ ~

ಕಾಡುವ ಹನಿಗಳು · ಬಿಂದು · ಬಿಂದು – 7

ಬಿಂದು – 7

ನೀವು
ನಿಮ್ಮ ದೊಡ್ಡ ಜಗತ್ತಿನಲ್ಲಿ,
ತುಂಬಾ ಸಣ್ಣದು
ಮಾಡಿಕೊಂಡ ಹೃದಯದಲ್ಲಿ
ನೋಡಿದರೆ ನಾನು ನಿಲುಕುವುದಿಲ್ಲ..
ಸಮಸ್ಯೆ ನನ್ನದಲ್ಲ

-ಹುಸೇನ್

ಅಮ್ಮಂದಿರ ಹನಿ -5 · ಕಾಡುವ ಹನಿಗಳು · ನೆನಪಿನ ಹನಿ

ಅಮ್ಮಂದಿರ ಹನಿ -5

“ಅಮ್ಮ”
ಭಾವತಂತವೊಂದು ಮೀಟಿ
ರಾಗವಾಗುವ,
ಹಾಡಿನಾಚೆಗೂ ಇರುವ
ಶುಭದ ಹಾದಿಯನ್ನು
ತೆರೆಯುವ ಎರಡಕ್ಷರದ
ಕ ವಿ ತೆ

ಹುಸೇನಿ~

ಅಮ್ಮಂದಿರ ಹನಿ -6 · ಕಾಡುವ ಹನಿಗಳು · ನೆನಪಿನ ಹನಿ

ಅಮ್ಮಂದಿರ ಹನಿ -6

ಅಮ್ಮನ ದಿನ
ಕಳೆಯಿತು; ಸಿಂಗರಿಸಿದ್ದ
ಬಣ್ಣದ ಕಾಗದಗಳು
ಕಳೆಗುಂದಿತು;
ಮಗ ತರಾತುರಿಯಲ್ಲಿದ್ದಾನೆ
ಅಮ್ಮನನ್ನು ಮತ್ತೆ ವೃದ್ದಾಶ್ರಮಕ್ಕೆ
ತಲುಪಿಸಬೇಕು….

ಹುಸೇನಿ~

ಕಾಡುವ ಹನಿಗಳು · ನನ್ನ ಬದುಕಿನ ಸಂಭ್ರಮ ಮತ್ತು ನಿಮ್ಮ ಸಾವಿನ ಹಂಬಲ · ನೆನಪಿನ ಹನಿ

ನನ್ನ ಬದುಕಿನ ಸಂಭ್ರಮ ಮತ್ತು ನಿಮ್ಮ ಸಾವಿನ ಹಂಬಲ ..

ನೀನು ನನ್ನ ಬದುಕು ಎಂದರು, ಆಮೇಲೆ ಸಾವಿನ ದಾರಿಯನ್ನೂ ಕಂಡುಕೊಂಡರು. ನಾ ಬದುಕಾಗಿದ್ದರೆ ನಿನ್ನ ಸಾವು ನನ್ನ ಸಾವು(ಅಥವಾ ಕೊಲೆ)ಯಲ್ಲವೇ… ?.
ಸಾವು ಅಂದರೆ ಎಲ್ಲದರ ಅಂತ್ಯ, ಹಾಗಾದರೆ ಎಲ್ಲವೂ ಅಂತ್ಯಗೊಂಡತಲ್ಲವೇ..?(ನಾನೂ, ನನ್ನೊಂದಿಗಿನ ಎಲ್ಲಾ ಕೊಂಡಿಗಳೂ)

೧)
ನಾನು ಹೀಗೇ
ನಿಮ್ಮಗಳ ಸಾವಿನಾ-
ಚೆಗಿನ ಅವಕಾಶದಲ್ಲಿ
ಬಿರಿದು ಘಮಿಸುತ್ತೇನೆ
ನಿನ್ನೆಗಳ ನೆನಪೇ
ಇಲ್ಲದಂತೆ….

೨)
ನನ್ನನ್ನೂ ಮೀರಿದ
ಸಾವಿನ ಹಂಬಲದ
ಜೊತೆ ಮಾತ್ರ ನಿನಗೆ
ಕಾಪಠ್ಯ ರಹಿತ
ಒಲವಿದೆ..

೩)
ಎಷ್ಟು ಮೊಗೆದು
ಕೊಟ್ಟರೇನಂತೆ?
ನಿನ್ನ ಸಾವಿನ ಹಂಬಲವನ್ನು
ಗೆಲ್ಲಲಾಗದ
ಸಾರವಿಲ್ಲದ ಪ್ರೀತಿ ನನ್ನದು…

ಕಾಡುವ ಹನಿಗಳು · ನೆನಪಿನ ಹನಿ · ಮೌನದ ತುದಿಯ ಮಾತಗಳು...

ಮೌನದ ತುದಿಯ ಮಾತುಗಳು…

ಈ ಸಾಮಾಜಿಕ ಜಾಲತಾಣಗಳು ಅಪರೂಪಕ್ಕೆ ಒಳ್ಳೆಯ ಗೆಳೆಯ ಗೆಳತಿಯರನ್ನು ಕೊಡುತ್ತದೆ. ಅಂತಹುದೇ ಗೆಳತಿಯೊಬ್ಬಳ ಜೊತೆ ಒಂದಿಷ್ಟು ಸಂದೇಶ ವಿನಿಮಯ ನಡೆಯಿತು.. ಆ ಸಂದೇಶಗಳ ನಡುವೆ ಮೌನದ ವಿಲಾಪಗಳ ಬಗ್ಗೆನೂ ಚರ್ಚಿತವಾಯ್ತು 🙂

A )
ಆ ಒಂದು ಪರಿಧಿ
ಮೀರಿದ ನಂತರ
ಉಳಿದ ಮಾತೆಲ್ಲಾ
ಈಗ ‘ಮೌನ’…

B)
ನಿನ್ನ ಮೌನಗಳ
ಆಯ್ದು ಹಾಡಾಗಿಸುತ್ತೇನೆ
ಹಾಡುತ್ತಲೇ ಕಳೆಯಬೇಕು
ಈ ನೀರವ ರಾತ್ರಿಗಳ

A)
ನನ್ನ ಮೌನಗಳು – ಎದೆಯೊಳಗಿನ
ಲವಾರಸಗಳು..
ನಿನ್ನ ಸುಟ್ಟೀತೆಂಬ ಭಯವೆನಗೆ
ಆಟ ಬೇಡ …

B)
ಈ ಕತ್ತಲೆಯೂ
ಕವಿತೆ
ಬರಿಯುತ್ತಿದೆ
ನೋಡು ನಿನ್ನ
ಮೌನದ ತುದಿಗೆ ಮಾತಾಗಲು

A)
ನಿನ್ನ ಅಬ್ಬರದ ಮಾತಿನ
ನಡುವಿನ ಕ್ಷಣದ
ಮೌನ
ಅದು ಮಾತ್ರ ನನ್ನದಾಗಿ ತೆಗೆದುಕ್ಕೊಳ್ಳಲೇ?

B)
ಆರಿಲ್ಲ ಉಸಿರ ಪಸೆ ಹಾಡಾಗುವ
ನಿನ್ನ ಅತಂರಂಗದ
ಮೌನಗಳಿಗೆ
ಮಾತು ಕಲಿಸುತ್ತೇನೆ ಬಾ

B)
ನಾ ಹೊರಡ್ಲಾ?

A)
ಹೋಗು
ನಾ ತಡೆಯೋದಿಲ್ಲ,
ಹೋಗುವಾಗ ಇಲ್ಲೆಲ್ಲಾ
ಹರಡಿ ಬಿದ್ದಿರುವ ನನ್ನ ನಿನ್ನ
ಮೌನವನ್ನೂ
ಆಯ್ದುಕೋ

B)
ಬೇಡ ನಾನು
ಮಾತಿನ ಮಲ್ಲಿ
ನಿನ್ನ ಮೌನಗಳೂ ಮಾತು ಕಲಿತರೇ
Chat Conversation End

Leave a comment