ಅಂದು
ಬಾಳ ಕತ್ತಲ ಕೂಪಕ್ಕೆ
ತಳ್ಳಿದವಳಿಂದು
ನನ್ನ ಗೋರಿಯ ಮೇಲೆ
ಹಣತೆ ಹಚ್ಚಿ ಹೋಗಿದ್ದಾಳೆ…
Archives
All posts for the month January, 2014
ಕೊನೆ ಮಾಡು ಎಂದರೆ
ಹೇಗೆ ?
ನೀಲ್ಗಡಲ ಅಲೆಯ ತಡೆಯಬಹುದು;
ಪರಧಿಯಾಚೆಗೂ ಹರಹು ಚಾಚಿದ
ಪ್ರೀತಿ ನನ್ನದು.
ಬಂದು ನನ್ನನ್ನೊಮ್ಮೆ
ಇಡಿಯಾಗಿ ಓದಿ ಹೋಗು;
ನನ್ನೊಳಗೂ,ಹೊರಗೂ
ನಿನ್ನ ನೆನಪುಗಳಿಲ್ಲವೆಂದು
ಸಾರಿ ಸಾರಿ ಹೇಳಬೇಕಿದೆ..
“ಖಲೀಫ಼ರೇ, ನೀವ್ಯಾಕೆ ಹಾಗೆ ಮಾಡಿದಿರಿ.. ? ದೀಪ ಹೊತ್ತಿಸಿ ಏನೋ ಬರೆಯುತ್ತಿದ್ದ ನೀವು ಆ ವ್ಯಕ್ತಿ ಬಂದು ಮಾತುಕತೆಗೆ ತೊಡಗಿದೊಡನೆ ಬೆಳಕು ಆರಿಸಿದಿರಿ. ಮಾತುಕತೆ ಮುಗಿಸಿ ಆ ವ್ಯಕ್ತಿ ಹೊರಟಾಗ ನೀವು ಮತ್ತೆ ದೀಪ ಹೊತ್ತಿಸಿ ಬರೆಯತೊಡಗಿದಿರಿ. ಮಾತುಕತೆ ವೇಳೆ ನೀವು ಬೆಳಕು ಆರಿಸಿದ್ದು ಯಾಕೆಂದು ಅರ್ಥವಾಗಲಿಲ್ಲವಲ್ಲಾ ….!” . ವ್ಯಕ್ತಿಯೊಬ್ಬರು ಇಸ್ಲಾಂನ ಎರಡನೇ ಖಲೀಫಾ ಉಮರುಲ್ ಫಾರೂಕ್ ರಲ್ಲಿ ಪ್ರಶ್ನಿಸಿದರು.
ಆ ಉರಿಯುತ್ತಿದ್ದ ದೀಪದ ಎಣ್ಣೆ ನನ್ನ ಸ್ವಂತದ್ದಲ್ಲ. ಅದು ರಾಜ್ಯಕ್ಕೆ ಸೇರಿದ್ದು ಆಡಳಿತಕ್ಕೆ ಸಂಬಧಪಟ್ಟ ವಿಷಯಗಳನ್ನು ಬರೆಯುವಾಗ ನಾನದನ್ನು ಉಪಯೋಗಿಸಬೇಕು. ಇಲ್ಲಿ ನಡೆದ ಮಾತುಕತೆ ನಮ್ಮ ವೈಯುಕ್ತಿಕ ವಿಷಯ. ವೈಯುಕ್ತಿಕ ಕಾರ್ಯಕ್ಕೆ ನಾನು ರಾಜ್ಯದ ಸೊತ್ತನ್ನು ಬಳಸಿದರೆ ದೇವರ ಮುಂದೆ ಹೇಗೆ ಉತ್ತರಿಸಲಿ..? ದೇಶಕ್ಕೆ ನ್ಯಾಯ ವಿಧಿಸುವ ನಾನೇ ನ್ಯಾಯವನ್ನು ಗಾಳಿಗೆ ತೂರುವುದೇ …?.
ಇದು ಖಲೀಫಾರ ಉತ್ತರವಾಗಿತ್ತು . ಎಂತಹ ಸೂಕ್ಷ್ಮ ಗ್ರಾಹಿ ನ್ಯಾಯ ವ್ಯವಸ್ಥೆ, ಎಂತಹ ನಿಸ್ವಾರ್ಥತೆ, ಎಂತಹ ನ್ಯಾಯ ರಕ್ಷಣೆ..
ಇಂತಹ ನಾಯಕನ ಆಡಳಿತ ನಮ್ಮ ದೇಶಕ್ಕೆ ಬೇಕು ಎಂದು ಗಾಂಧೀಜಿಯವರು ಹೇಳಿದ್ದಲ್ಲಿ ಆಶ್ಚರ್ಯವಾದರೂ ಏನಿದೆ ಹೇಳಿ .