ಹುಸೇನಿ ಪದ್ಯಗಳು - 28 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 28

rice

1)
ಪ್ರೇಮ ಕವಿಯೊಬ್ಬನ ಮದುವೆಯಾದ
ಹುಡುಗಿಗೆ,
ಹೂವು, ಮೋಡ ಮತ್ತು ಚಂದಿರನ
ಮೇಲೆ ಸವತಿ ಮತ್ಸರ !
2)
ದೇವ
ಅಗುಳಿನ ಮೇಲೆ ಬಡವನೊಬ್ಬನ
ಹೆಸರು ಬರೆದಿದ್ದ;
ಕಾಳ ಸಂತೆಯ ಕೊಳ್ಳೆ-
ಖದೀಮ ಅದನ್ನು ಬದಲಿಸಿದ.

3)
ಅವನು ಸರ್ವಜ್ಞಾನಸಂಪನ್ನ
ಸ್ವರ್ಗದ ಆಸೆಗೆ ಎಲ್ಲ ತೊರೆದು-
ಹಿಮಾಲಯಕ್ಕೆ ಹೋರಟ,
ನಾನು ಅಲ್ಪ;
ತಾಯಿಯ ಪಾದ ಹುಡುಕಿ ಹೊರಟೆ..

_ಹುಸೇನಿ

Leave a comment