ನೆನಪಿನ ಹನಿ · ಹುಸೇನಿ_ಪದ್ಯಗಳು

ಅಪೂರ್ಣ ಸಾಲುಗಳು .. 1


ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …
ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ ನಂತರದ ಭಾವ-ಭಂಗತೆಯೋ ಕಾರಣವಾಗಿರಬಹುದಾದ ಈ ಅಪೂರ್ಣಸಾಲುಗಳಿಗೆ ಮುಕ್ತಿ ಕೊಡುತ್ತಿದ್ದೇನೆ 🙂

1.
ಮೋಡ ಮುಸುಕಿದ ಅರ್ಧ ಚಂದಿರ, ಮೈಚಾಚಿ ಮಲಗಿದ ರಸ್ತೆ, ಕರಿಮೋಡದಂಚಿನ ಮಿಂಚಿನಸೆಲೆ, ನಸುಕಿನಲ್ಲಿ ಬಿರಿಯಲಣಿಯಾಗುತ್ತಿರುವ ನೈದಿಲೆ ಮತ್ತು ಮೆಲ್ಲುಸಿರಿನ ಪಿಸುಮಾತಿನ ಜೊತೆ ನೀನು, ಎದೆಯ ತಿದಿಯಲ್ಲಿ ಗರ್ಭಗಟ್ಟಿದ ಕನಸುಗಳು ಈ ರಾತ್ರಿಯ ವಿಶೇಷಗಳು..

2.
ಹಲವು ರಾತ್ರಿಗಳು ನಿನ್ನ ರೂಪ ಪಡೆದು ದೇದೀಪ್ಯಮಾನವಾಗಿ ಹೊಳೆಯುತ್ತದೆ.. ಆ ರಾತ್ರಿಗಳಲ್ಲಿ ಹೊಸ ಹಾಡು, ಹೊಸ ಚೈತನ್ಯ, ಹೊಸ ಹಂಬಲಗಳೊಂದಿಗೆ ನನ್ನದು ಮರು ಹುಟ್ಟು…

3.
ಸಂಜೆಯಾಗುತ್ತದೆ
ಅವಳಂತಹದ್ದೇ ಸಂಜೆ
ಸಂಜೆಯಿಂದ ಅವಳ
ಅವಳಿಂದ ಸಂಜೆಯ
ಬೇರ್ಪಡಿಸುವ ಆಟಕ್ಕಿಳಿದವನಿಗೆ
ಎದೆ ಬಯಲಿನಲ್ಲಿ
ಇಬ್ಬನಿ ನಲಿಯುವ
ಮುಂಜಾನೆ ದೊರೆಯುತ್ತದೆ.
ಮತ್ತೆ ಸಂಜೆಯಾಗುವವರೆಗೂ
ಮುಗುಳ್ನಗಿಸುವ ಮುಂಜಾವು ದೊರೆಯುತ್ತದೆ.

4.
ಯಾ ರೂಹಿ…
ನೀನು ಅನಂತ ಗೋಲ;
ಅಖಂಡ ರಾಶಿ ತಾರೆಗಳ,ಕಾಯಗಳ,
ಗ್ರಹಗಳ ತುಂಬಿಕೊಂಡು
ನನ್ನೆದೆ ಬಾಂದಳದಿ ನಿಗೂಢವಾಗಿ
ಮಿನುಗುತ್ತಿದ್ದಾನೆ

5.
…..ಕೆಲವು ಬಂಧಗಳು ಹಾಗೆಯೇ ಅಲ್ಲೆಲ್ಲೋ ಮೀಟಿದ ತಂತಿಯ ನಾದದಿಂದ ಹೊಮ್ಮಿದ ರಾಗಕ್ಕೆ ಇಲ್ಲೆಲ್ಲೋ ಒಂದು ಹೃದಯ ತಲೆದೂಗುತ್ತದೆ. ಅಲ್ಲೆಲ್ಲೋ ಕಾಪಿಟ್ಟ ಮೋಡ ಇಲ್ಲಿ ಹನಿಯುತ್ತದೆ,ಮುಂಜಾನೆಯೊಂದು ಶುಭ ಹಾರೈಕೆ, ಮುಸ್ಸಂಜೆಯಲ್ಲೊಂದಿಷ್ಟು ಹರಟೆಗಳು, ರಾತ್ರಿಯ ನಿಶೀತತೆಯಲ್ಲಿ ಅಂತರಾಳದ ತಪನೆಗೊಂದಿಷ್ಟು ತಂಪುಕೊಡುವ ಮಾತುಕತೆಗಳು,ಇಷ್ಟಗಳನ್ನೂ ಕಷ್ಟಗಳನ್ನು ಹರವಿಕೊಂಡು ಬದುಕಿನ ಅರ್ಥ ಕಂಡುಕೊಳ್ಳುವ ಪ್ರಯತ್ನಗಳು. ಇಹದ ಭವ ಬಂಧಗಳಾಚೆಗಿನ ಖಾಲಿ ಅವಕಾಶದಲ್ಲಿ ಮೂಡುವ ಆತ್ಮೀಯತೆ ಅದು. ಮನಸ್ಸಿಂದ ಮನಸ್ಸಿಗೆ ನಿಸ್ತಂತು ಸಂವಹನ ಅದು. ಬದುಕ ಪ್ರೀತಿ ಮತ್ತು ಬದುಕಿಗೆ ಸ್ಫೂರ್ತಿ ಎರಡನ್ನೂ ಬಸಿದು ಕೊಡುವ ಈ ಆತ್ಮೀಯತೆಗೆ ಮಿಗಿಲಾದ್ದು ಇಲ್ಲಿ ಇರುವುದಾದರೂ ಏನು… ?

~ಹುಸೇನಿ

12 thoughts on “ಅಪೂರ್ಣ ಸಾಲುಗಳು .. 1

   1. ಮನದ ಮರೆಯಲ್ಲಿ ಅವಿತು ಕುಳಿತಿದ್ದ ಮರೆತ ನೆನಪು ಎಡೆಬಿಡದೆ ಕಾಡುತಿದೆ ನಿನ್ನ ನೋಡಿದಾಕ್ಷಣದಿಂದ….

    Like

 1. ನಿಮ್ಮ ನೆನಪಿಸಿಕೊಳ್ಳುವ ಸಂಬಂಧದಲ್ಲಿ ನಾನೂ ಒಬ್ಬಳು. ನಿಮ್ಮ ಬರಹಗಳು ಮನ ತಾಕುತ್ತವೆ.👌👌

  Like

   1. ಬಹಳ ಬಹಳ ಸಂತೋಷ ಹುಸೇನಿ. ಯಾವತ್ತೂ ಏನೇ ತೊಂದರೆ ಬಂದರೂ ಬರೆಯೋದು ಬಿಡಬೇಡಿ. ಓದುಗರಿಗೆ ನಿರಾಸೆ ಮಾಡಬೇಡಿ. ಸದಾ ಬರೆಯುತ್ತಿರಿ. ಶುಭವಾಗಲಿ💐

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s