ನೆಲ ಸೇರಿತು!

ನೆಲ ಸೇರಿತು!

ಇಂದು ಸಂಜೆಯೂ ನೀನು
ನೆನಪಾಗಿ, ಮನದೊಳಗಿನ ಮೂಕ ವೇದನೆಗೆ
ಮಾತು ಬರದಾಯಿತು!
ಮಂದಹಾಸವೊಂದು ಮೊಗದಲಿ ಮೂಡಿ
ನನ್ನನ್ನೇ ಅಣಕಿಸಿದಂತಾಯಿತು!

ಕಣ್ಣ ಗುಡ್ಡೆಯಲ್ಲಿ ಮಡುಗಟ್ಟಿದ ಕಣ್ಣೀರು
ಕೆನ್ನೆಯ ದಾಟಿ ನೆಲ ಸೇರಿತು!!

ನೆರಳಾಗಿ..!

ನೆರಳಾಗಿ …!

ನೆರಳಾಗಿ ನೀನು ನನ್ನೊಡನೆ
ಇರಬೇಕೆಂದು ಬಯಸಿದ್ದೆ ..!
ಆ ನೆರಳನ್ನೇ ಪ್ರೀತಿಸಿದ್ದೆ…!
ರಾತ್ರಿಯ ಕರಾಳತೆಯಲ್ಲಿ ಕಳೆದು
ಹೋಗುವುದೆಂದು ಅರಿತಿದ್ದರೂ..!
ಜೀವನ ದಾರಿಯಲಿ

ಜೀವನ ದಾರಿಯಲಿ..

ಇರುಳು ತುಂಬಿದ ನನ್ನ ಜೀವನ ದಾರಿಯಲಿ
ಮಿಂಚಂತೆ ಬೆಳಕಾಗಿ ನೀ ಬಂದಾಗ
ನಾನೊಂದು ಕ್ಷಣ ಜಗ ಮರೆತೆ…

ಮತ್ತೆ ಕತ್ತಲು ತುಂಬಿದ ರಾತ್ರಿಗೆ ಜೊತೆ ಯಾರು ?
ನಿಶ್ಶಬ್ದತೆಯೂ..ನೀರವತೆಯೂ ಅಲ್ಲದೆ…!!

ಪ್ರಣಯದ ಉನ್ಮಾದತೆ

ಪ್ರಣಯದ ಗಂಧವಿತ್ತು..!

ಬೆಳದಿಂಗಳ ರಾತ್ರಿಯಲಿ
ಹೊಳೆವ ನಕ್ಷತ್ರಗಳ
ಸೌಂದರ್ಯಕೆ ಮನಸೋತು,
ತಂಪನ್ನು ಹೊತ್ತು ಬೀಸಿ ಬಂದ ಗಾಳಿಯಲೂ
ಪ್ರಣಯದ ಉನ್ಮಾದತೆಯಿತ್ತು..!!
ಮರಳಿ ಕೊಡಬೇಕು..!

ಮರಳಿ ಕೊಡಬೇಕು..!

ನಿನ್ನ ದಾರಿಯಲ್ಲಿ ಇನ್ನೆಂದೂ
ನಾನು ಬರಲಾರೆ,
ಆದರೆ..!
ನಿನ್ನ ನೆನಪುಗಳು ನೋವನ್ನು
ಕೊಡದ ಹೃದಯವನ್ನು
ನೀನನಗೆ ಮರಳಿ ಕೊಡಬೇಕು..!