ಮನಸಿನ ಹಾ(ಪಾ)ಡು · ಮರಳಿ ಮತ್ತೆ ಬಾ ನೀನು ..

ಮರಳಿ ಮತ್ತೆ ಬಾ ನೀನು ..

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ಕನಸೆಂಬ ಕುದುರೆಗೆ ನಿನ್ನ
ಒಲವಿನ ತೇಪೆಯ ಹಚ್ಚಿ..
ಮನಸ್ಸನ್ನು ಎಲ್ಲೆ ಮೀರಲು ಬಿಟ್ಟು..
ಸಂತಸದ ಅಲೆಯಲ್ಲಿ ತೇಲುತ್ತಿದ್ದ
ಆ ಕಾಲದ ನೆನಪಿದೆಯಾ ಗೆಳತಿ…?

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ಬೀಸುವ ಗಾಳಿಗೆ ತಂಪಿಲ್ಲ..
ನೇಸರನ ರಶ್ಮಿಯಲ್ಲೂ ಹೊಳಪಿಲ್ಲ..
ಮೊದಲ ಮಳೆಗೆ ತೊಯ್ದ ಮಣ್ಣಿಗೆ
ಸುಗಂಧವೇ ಇಲ್ಲ…

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ಹೋದ ದಾರಿಯಲಿ, ನಿಂತ ತೀರದಲಿ..
ಬರೀ ನಿನ್ನದೇ ನೆನಪು…
ಬಿದಿಗೆ ಚಂದ್ರಮನಿಗೂ ಇಲ್ಲ
ಮೊದಲಿನ ಹೊಳಪು…

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ನೀನು ಹೋದ ನಂತರ ವಸಂತ ಕಾಲ
ಬಂದಿಲ್ಲ..ಹೂವು ಚಿಗುರೊಡೆದು,
ಕಾಯಿಯಾಗಿಲ್ಲ!
ಕಾನನದ ಸುಮವು ಕಂಪನ್ನು
ಸೂಸಿಲ್ಲ…

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ನಿನ್ನದಲ್ಲದ ನಲಿವು ನನಗೆ ಬೇಡ…
ನಿನ್ನದಲ್ಲದ ನೋವು ಕೂಡ..
ಒಡೆದ ಹೃದಯದಲಿ, ಬಿಚ್ಚಿಟ್ಟ ಭಾವನೆಯಲಿ
ಕಾಯುತ್ತಿರುವೆ ನಾನು…
ನಿರಾಶೆ ಮಾಡಬೇಡ…

ಎಲ್ಲೋ ಕಳೆದು ಹೋದೆ ನೀನು…
ಮರಳಿ ಮತ್ತೆ ಬಾ ನೀನು…

ಉಸಿರಾಗಬೇಡ ನೀನು...!

ಉಸಿರಾಗಬೇಡ ನೀನು…!

ಬಯಕೆಗಲೇ  ಇಲ್ಲದ ಜೀವಕ್ಕೆ ಕನಸಾದೆ ನೀನು ,
ಆದರೆ ಕನಸಾಗಬೇಡ..
ಕನಸ್ಸಲ್ಲಿ ಎಲ್ಲವೂ ಬಂದು ಹೋಗುವುದು…

ಮಾತೇ  ಇಲ್ಲದ  ತುಟಿಗಳ ಮೇಲೆ ಮಾತಾದೆ ನೀನು…
ಆದರೆ ಮಾತಾಗಬೇಡ..
ಕೊಟ್ಟ ಮಾತು ತಪ್ಪುವುದು…

ನಗು ಮರೆತ ಮೊಗದಲ್ಲಿ ಮಂದಹಾಸವಾದೆ  ನೀನು…
ಆದರೆ ಮಂದಹಾಸವಾಗಬೇಡ…
ಮಂದಹಾಸದಲ್ಲೂ ಮೋಸವಿರುವುದು…

ಭಾವವೇ ಇಲ್ಲದ ನನಗೆ ಭಾವನೆಯಾದೆ ನೀನು
ಆದರೆ ಭಾವನೆಯಾಗಬೇಡ…
ಭಾವನೆಯೂ ತಾಳಕ್ಕೆ ತಕ್ಕೆ ಕುಣಿಯುವುದು..

ಕತ್ತಲು ತುಂಬಿದ ನನ್ನ ಬಾಳಿನ ಬೆಳಕಾದೆ ನೀನು..
ಆದರೆ ಬೆಳಕಾಗಬೇಡ…
ಸೂರ್ಯನೂ ಸಂಜೆಯಾದಾಗ ಮರೆಯಾಗುವನು…

ಪ್ರೀತಿ ಕಾಣದ ಜೀವಕ್ಕೆ ಒಲವಾದೆ ನೀನು..
ಆದರೆ ಒಲವಾಗಬೇಡ …
ಒಲವು ಕೂಡ ನೋವು ನೀಡುವುದು…

ಹಸಿರಿಲ್ಲದ ನನ್ನ ಬಾಳಿನ ಉಸಿರಾದೆ ನೀನು..
ಆದರೆ ಉಸಿರಾಗಬೇಡ ..
ಉಸಿರು ಕೂಡ ಒಂದು ದಿನ ನಿಲ್ಲುವುದು…

ಬೆಳಕು ..

ಬೆಳಕು ..

ನಂಬಿಕೆ ಹರಡಲಿ..
ವಿಶ್ವಾಸ ಬೆಳಗಲಿ..
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯ ಬೆಳಕು ಹರಿಯಲಿ…

ಸಹೋದರತೆ ಹರಡಲಿ…
ವಾತ್ಸಲ್ಯತೆ ಬೆಳಗಲಿ…
ಜಾತೀವಾದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ..

ಧರ್ಮ ಹರಡಲಿ..
ನ್ಯಾಯವು ಬೆಳಗಲಿ…
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃಧಿಯ ಬೆಳಕು ಹರಿಯಲಿ…

ಆತ್ಮವಿಶ್ವಾಸ ಹರಡಲಿ ..
ಆಶಾಜ್ಯೋತಿ ಬೆಳಗಲಿ ..
ಅಜ್ಞಾನವೆಂಬ ಕತ್ತಲು ಸರಿದು ,
ವಿಜ್ಞಾನದ ಬೆಳಕು ಹರಿಯಲಿ ..

ಪ್ರೀತಿ... · ಮನಸಿನ ಹಾ(ಪಾ)ಡು

ಪ್ರೀತಿ…

ಕನಸಿದು , ಕನವರಿಕೆಯಿದು,
ಕಥೆಯಿದು ,ಕಾವ್ಯವಿದು ,
ಕತ್ತಲ ಹೃದಯಕ್ಕೆ ತುಂಬೋ ಬೆಳಕಿದು  ಪ್ರೀತಿ..

ಕೊಡುವ ಕಾಣಿಕೆಯಿದು,
ಪಡೆಯೋ ಭಾಗ್ಯವಿದು,
ನೊಂದ ಮನಸ್ಸಿನ ಸ್ವಾಂತನವಿದು ಪ್ರೀತಿ..

ನೋವಿದು, ನಲಿವಿದು,
ಚಿತ್ರ ವಿಚಿತ್ರವಿದು,
ಭಾವತಿರೀಕಕ್ಕೂ ಕಾರಣವಿದು ಪ್ರೀತಿ

ಬದುಕಿದು, ಬೆಸುಗೆಯಿದು,
ಬಂಧವಿದು , ಬಂಧನವಿದು
ಬರಡು ಭೂಮಿಯಲ್ಲೂ ಚಿಮ್ಮೊ ನೀರ ಕಾರಂಜಿಯಿದು ಪ್ರೀತಿ…