ಡೈರಿ

ಡೈರಿ-1

ದಿನಾ ಆಫೀಸಿಗೆ ಹೋಗಲು ಬಸ್ಸು ಕಾಯುವ ತಂಗುದಾಣದಲ್ಲಿ ಹಲವು ಮಂದಿ ಕುರುಡರು ಬಂದು ಇಳಿಯುತ್ತಾರೆ. ಹತ್ತಿರದಲ್ಲೆ ಕೇರಳ ಸಿವಿಲ್ ಸರ್ವಿಸ್ ಸ್ಟೇಷನ್ ಪಕ್ಕ ಅಂಧರ ಅಕಾಡೆಮಿಯೊಂದಿದೆ. ಬಸ್ಸು ಇಳಿದು ರಸ್ತೆ ದಾಟಿ ಹೋಗಬೇಕು. ರಸ್ತೆ ದಾಟಲು ಬಸ್ಸಿಗೆ ಕಾಯುವ ಮಂದಿಯೇ ಆಸರೆ. ನಾನೂ ಅದೆಷ್ಟೋ ಅಂಧರನ್ನು ರಸ್ತೆ ದಾಟಿಸಿದ್ದೇನೆ. ಹೀಗೆ ಅವರ ಕೈಯನ್ನು ಹಿಡಿದು ದಾಟಿಸುವಾಗ ಆವರ ಮೊಗದಲ್ಲೊಂದು ಧಿಡೀರಾಗಿ ಮೂಡುವ ಸಂಭ್ರಮವನ್ನು ಕಂಡಿದ್ದೇನೆ. ಸಮಾಜದಲ್ಲಿ ಎಲ್ಲರಿಂದಲೂ ತಿರಸ್ಕೃತರಾಗಿದ್ದರಿಂದಲೋ   ಎನೋ … ಅವರ ಕೈ ಹಿಡಿಯುವಾಗ ಅವರಲ್ಲಿ ಬದುಕಿನ ಸ್ಪೂರ್ತಿಯ ಸೆಳೆಯ ಕಿಡಿಯೊಂದು ಹಠಾತ್ತನೆ ಮೂಡುತ್ತದೆ. ಏನೋ ಕಳೆದುಕೊಂಡದ್ದನ್ನು ಮರಳಿ ಪಡೆದ ಸಂತಸ ಅವರ ಮೊಗದಲ್ಲಿ ಕಾಣುತ್ತೇನೆ. ಇತ್ತೀಚಿಗೆ ಪ್ರತೀ ದಿನ ಒಬ್ಬರನ್ನಾದರೂ ರಸ್ತೆ ದಾಟಿಸಿ ನಂತರ ಆಫೀಸಿಗೆ ಬಸ್ಸು ಹತ್ತುತ್ತೇನೆ.

ಅವರ ದಿನದಲ್ಲಿ ಒಂದಷ್ಟು ಘಳಿಗೆಯಾದರೂ ನಾವು -ನಿಮ್ಮೊಂದಿಗೆ ಇದ್ದೇವೆ ಎಂಬ ಭಾವನೆಯನ್ನು ಮೂಡಿಸಲು ಸಾದ್ಯವಾಯಿತೆಂಬ ಖುಷಿ ಇಡೀ ದಿನ ನನ್ನ ಪಾಲಿಗಿರುತ್ತದೆ. 

Add Comments