ಹುಸೇನಿ ಪದ್ಯಗಳು – 36 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 36

last-leaf1

1)
ಕಿವಿಗೊಟ್ಟೆಯಾ…?
ಆ ಕಾನನದಿ ಮುದಿ ಮರದ ಕೊನೆಯ ತರಗೆಲೆ ಉದುರಿದ ಶಬ್ದ..
ಕಿವಿಗೊಟ್ಟೆಯಾ…?
ನನ್ನ ಎದೆ ಬಿರಿದ ಶಬ್ದ..

2)
ಅಬ್ಬಾ !
ಇನ್ನೆಷ್ಟು ಮಾತನಾಡಲಿ,
ಒಳಗುದಿ ನೀ ತಿಳಿಯಲೇ
ಇಲ್ಲ,
ಇನ್ನು ‘ಮೌನ’
ಪರ್ವ..

3)
ಬಾಲ್ಯದಲ್ಲಿ
ಮತ್ತೆ ಮತ್ತೆ ನನ್ನ ಎಡವಿ
ಬೀಳಿಸುತ್ತಿದ್ದ ಕಾಲು ದಾರಿ
ಕಲಿಸಿಕೊಟ್ಟದ್ದು
ಬಿದ್ದರೆ ಎದ್ದೇಳುವ ಛಲದ ಪಾಠ..

4)
ಇದು ನೀರಿಂಗದ ಒಣ
ಮರುಭೂಮಿ, ಸುಮ್ಮನೆ
ಹನಿಯದಿರು ಮಳೆಯೇ
ಪಾಚಿಗಟ್ಟಿ ಕೊಳೆತು ನಾರಬಹುದು!

5)
ಮುಗ್ಧವಾಗಿ ತಬ್ಬದಿರು
ಹೂವೇ
ನಾನು ಮುಳ್ಳು ಬೇಲಿ..

ಹುಸೇನಿ ~

Leave a comment