ಕಾಡುವ ಹನಿಗಳು · ನೆನಪಿನ ಹನಿ · ಮೌನದ ತುದಿಯ ಮಾತಗಳು...

ಮೌನದ ತುದಿಯ ಮಾತುಗಳು…

ಈ ಸಾಮಾಜಿಕ ಜಾಲತಾಣಗಳು ಅಪರೂಪಕ್ಕೆ ಒಳ್ಳೆಯ ಗೆಳೆಯ ಗೆಳತಿಯರನ್ನು ಕೊಡುತ್ತದೆ. ಅಂತಹುದೇ ಗೆಳತಿಯೊಬ್ಬಳ ಜೊತೆ ಒಂದಿಷ್ಟು ಸಂದೇಶ ವಿನಿಮಯ ನಡೆಯಿತು.. ಆ ಸಂದೇಶಗಳ ನಡುವೆ ಮೌನದ ವಿಲಾಪಗಳ ಬಗ್ಗೆನೂ ಚರ್ಚಿತವಾಯ್ತು 🙂

A )
ಆ ಒಂದು ಪರಿಧಿ
ಮೀರಿದ ನಂತರ
ಉಳಿದ ಮಾತೆಲ್ಲಾ
ಈಗ ‘ಮೌನ’…

B)
ನಿನ್ನ ಮೌನಗಳ
ಆಯ್ದು ಹಾಡಾಗಿಸುತ್ತೇನೆ
ಹಾಡುತ್ತಲೇ ಕಳೆಯಬೇಕು
ಈ ನೀರವ ರಾತ್ರಿಗಳ

A)
ನನ್ನ ಮೌನಗಳು – ಎದೆಯೊಳಗಿನ
ಲವಾರಸಗಳು..
ನಿನ್ನ ಸುಟ್ಟೀತೆಂಬ ಭಯವೆನಗೆ
ಆಟ ಬೇಡ …

B)
ಈ ಕತ್ತಲೆಯೂ
ಕವಿತೆ
ಬರಿಯುತ್ತಿದೆ
ನೋಡು ನಿನ್ನ
ಮೌನದ ತುದಿಗೆ ಮಾತಾಗಲು

A)
ನಿನ್ನ ಅಬ್ಬರದ ಮಾತಿನ
ನಡುವಿನ ಕ್ಷಣದ
ಮೌನ
ಅದು ಮಾತ್ರ ನನ್ನದಾಗಿ ತೆಗೆದುಕ್ಕೊಳ್ಳಲೇ?

B)
ಆರಿಲ್ಲ ಉಸಿರ ಪಸೆ ಹಾಡಾಗುವ
ನಿನ್ನ ಅತಂರಂಗದ
ಮೌನಗಳಿಗೆ
ಮಾತು ಕಲಿಸುತ್ತೇನೆ ಬಾ

B)
ನಾ ಹೊರಡ್ಲಾ?

A)
ಹೋಗು
ನಾ ತಡೆಯೋದಿಲ್ಲ,
ಹೋಗುವಾಗ ಇಲ್ಲೆಲ್ಲಾ
ಹರಡಿ ಬಿದ್ದಿರುವ ನನ್ನ ನಿನ್ನ
ಮೌನವನ್ನೂ
ಆಯ್ದುಕೋ

B)
ಬೇಡ ನಾನು
ಮಾತಿನ ಮಲ್ಲಿ
ನಿನ್ನ ಮೌನಗಳೂ ಮಾತು ಕಲಿತರೇ
Chat Conversation End

Leave a comment