ಬಿಂದು · ಬಿಡಿ ಭಾವಗಳು · ಬಿರಿಯದ ಮೊಗ್ಗು · ಹುಸೇನಿ_ಪದ್ಯಗಳು · Kannada Love letters

ಗತ ಸಾಲುಗಳು – ೧

ಹೆಸರೇ ಸೂಚಿಸುವಂತೆ ಇದು ಎಂದೋ ಬರೆದು ಮರೆತು ಹೋದ ಸಾಲುಗಳು. I’m grateful to Facebook Memories for reminding me of these lines.

Written on April 28, 2014

ಕನಸಿನೆಣ್ಣೆ ತುಂಬಿ
ತುಳುಕಿದೆ,
ಬಾಳ ದೀಪಬೆಳಗಲಿಲ್ಲ….

~

ಇರಲಿ ನಿನ್ನ ಮೊಗದಲ್ಲೊಂದು
ಮುಗುಳ್ನಗು,
ನಕಲಿಯಾದರೂ,
ನನ್ನ ಮುಖವಾಡದಂತೆ …

~

ಆ ಸಮುದ್ರ ತಟ
ಇಂದೂ
ಬಾಯಾರಿಯೇ
ಇತ್ತು

ಹುಸೇನಿ ~

ಕನ್ನಡಿ · ಬಿಡಿ ಭಾವಗಳು · ಬಿರಿಯದ ಮೊಗ್ಗು · ಹುಸೇನಿ_ಪದ್ಯಗಳು · Hanigavana · Honey'ಗವನ · kannada haiku

Kannada kavanagalu

ಕನ್ನಡಿ

೧)
ಈಗ ನಾ ನೋಡಿ ಬಂದ
ಕನ್ನಡಿಯ ಬಿಂಬ
ಇನ್ನು ಅಲ್ಲೇ ಇರಬಹುದಾ ?

೨)
ಒಡೆದು ಚೆಲ್ಲಿ ಬಿದ್ದ
ಕನ್ನಡಿಯೊಳಗೆ
ನನ್ನ ಹಲವು ಮುಖವಾಡಗಳು..

೩)
ನಗುಮೊಗವ ತೋರಿದ
ನೀನು, ಒಡಲಿನ
ತಪನೆಯ ಅಡಗಿಸಿದೆ..
ಕನ್ನಡಿಯೇ.. ನೀನು ಅರೆಪಾರಕ…?

೪)
ಹಿಂದೆಲ್ಲ ಕನ್ನಡಿಯನ್ನು
ಅತಿ ಇಷ್ಟ ಪಡುತ್ತಿದ್ದವಳು
ಈಗೀಗ ದ್ವೇಷಿಸುತ್ತಿದ್ದಾಳೆ..

೫)
ಜಗವರಿತವನಿಗೆ
ಸ್ವಂತ ಮುಖ ತೋರಿದ್ದು
ಕನ್ನಡಿ..

೬)
ಅವಳ ‘ಮುಖಗಳು’
ಇನ್ನೂ ಕನ್ನಡಿಯ
ಎಣಿಕೆಗೆ ಸಿಗಲಿಲ್ಲ

ಹುಸೇನಿ ~

ಬಿಡಿ ಭಾವಗಳು · ಹುಸೇನಿ ಪದ್ಯಗಳು - 15 · ಹುಸೇನಿ_ಪದ್ಯಗಳು

ಬಿಡಿ ಭಾವಗಳು (ಹುಸೇನಿ ಪದ್ಯಗಳು – 15)

abc-1

೧.
ಬತ್ತಿ ಸುಟ್ಟು ಹೋಯಿತು
ಎಣ್ಣೆಯೂ ಕರಗಿತು
ಹರಡಿದ್ದ ಬೆಳಕು ಮಾತ್ರ
ಸತ್ಯ..

೨.
ನೀನು
ನನ್ನ
ಕತ್ತಲಿನ ಬೆಳಕು
ಬೆಳಕಿನ ಕತ್ತಲು

೩.
ನೀನೆಂಬ
ಕಾಲ್ಪನಿಕತೆಯನ್ನೇ
ಬದುಕಾಗಿಸಿದ
ನನಗಿಂದು
ವಾಸ್ತವದ ಹಂಗಿಲ್ಲ

೪.
ನಾನು,
ದಿಕ್ಕೆಟ್ಟು ಓಡುವ
ಕನಸುಗಳ ರಭಸಕ್ಕೆ
ಎದೆಯೊಡ್ಡಿ ನಿಂತವನು…

೫.
ಕಾದು
ಕಾವಾಗಬೇಕು.
ಜೀವ ತಳೆಯಲು,
ಪ್ರೀತಿ ಹುಟ್ಟಲು …


ನಿಮ್ಮ ನಲ್ನುಡಿ