ಮನಸಿನ ಹಾ(ಪಾ)ಡು · ವ್ಯಸನ ವ್ಯೂಹ

ವ್ಯಸನ ವ್ಯೂಹ

The India of My Dreams1

‘ನನ್ನ ದೇಶ, ನನ್ನ ಜನ,
ಜಾತ್ಯಾತೀತತೆ, ಕೋಮುವಾದ,
ಸುಧಾರಿತ ಭಾರತ’ದ ಬಗ್ಗೆ ಮಾತನಾಡುವ
ಅವನು ಅದಾಗಲೇ ಒಂದು ಪ್ಯಾಕೆಟ್ ಸಿಗರೆಟ್ ಸುಟ್ಟಿದ್ದ;
ಭವಿಷ್ಯದ ಭಾರತದ ಶ್ವಾಸಕೋಶ ಕಪ್ಪಾಗಿತ್ತು.

‘ಇಂಡಿಯಾ ದ ಸೂಪರ್ ಪವರ್’
ನಕ್ಷತ್ರ ಹೋಟೆಲಿನಲ್ಲೊಂದು ವಿಐಪಿ ಮೀಟಿಂಗು
ಸ್ವದೇಶೀ ಭಕ್ಷ್ಯಗಳ ಜೊತೆ ಠಣಗುಟ್ಟಿದ ಗ್ಲಾಸಿನೊಳಗೆ
ವಿದೇಶಿ ಮಧ್ಯಗಳು; ಭ್ರಮನಿರಸ ಕನಸಿನ ಭಾರತ
ನಶೆಯಲ್ಲಿ ತೂರಾಡುತ್ತಿತ್ತು.

ಮಧ್ಯ ರಾತ್ರಿ, ಬಸ್ಸಿನೊಳಗೆ ಹೊಕ್ಕ ಒಂಟಿ
ಹುಡುಗಿ, ಹಸಿ ಮಾಂಸ ತಿಂದು ತೇಗಿ ಕೊನೆಗೆ
ಕಬ್ಬಿಣದ ರೋಡಿನಿಂದ ಆ ಭಾಗವನ್ನೇ ತಿವಿದ
ಕಂಭೂತ ನರಭಕ್ಷಕರು;
ರಾಮರಾಜ್ಯ ಭಾರತದ ಪುರುಷತ್ವ
ಸ್ತ್ರೀ ಕುಲಕ್ಕೆ ಮತ್ತಷ್ಟು ಮಾರಿಯಾಗಿತ್ತು.

ವ್ಯಸನ ವ್ಯೂಹವ ತೊಡೆಯಬೇಕು, ನಮ್ಮೊಳಗಿನ
ಭಾರತ ಜಾಗೃತವಾಗಬೇಕು, ನೆಮ್ಮದಿಯ ನಾಳೆಗೆ;
ಹುಟ್ಟಬೇಕು ಮತ್ತೆ ಭಗತ, ಅಝಾದರು
ಮೊದಲು ನನ್ನೊಳಗೆ ಮತ್ತೆ ನಿಮ್ಮೊಳಗೆ…

-ಹುಸೇನಿ

Leave a comment

ಕನ್ನಡಿ ಕವಿತೆಗಳು‬ · ಕಾಡುವ ಹನಿಗಳು

ಕನ್ನಡಿ ಕವಿತೆಗಳು‬

kannadi
೧)
ಈಗ ನಾ ನೋಡಿ ಬಂದ
ಕನ್ನಡಿಯ ಬಿಂಬ
ಇನ್ನು ಅಲ್ಲೇ ಇರಬಹುದಾ ?

೨)
ಒಡೆದು ಚೆಲ್ಲಿ ಬಿದ್ದ
ಕನ್ನಡಿಯೊಳಗೆ
ನನ್ನ ಹಲವು ಮುಖವಾಡಗಳು.

೩)
ನಗುಮೊಗವ ತೋರಿದ
ನೀನು, ಒಡಲಿನ
ತಪನೆಯ ಅಡಗಿಸಿದೆ..
ಕನ್ನಡಿಯೇ.. ನೀನು ಅರೆಪಾರಕ…?

೪)
ಹಿಂದೆಲ್ಲ ಕನ್ನಡಿಯನ್ನು
ಅತಿ ಇಷ್ಟ ಪಡುತ್ತಿದ್ದವಳು
ಈಗೀಗ ದ್ವೇಷಿಸುತ್ತಿದ್ದಾಳೆ..

೫)
ಜಗವರಿತವನಿಗೆ
ಸ್ವಂತ ಮುಖ ತೋರಿದ್ದು
ಕನ್ನಡಿ..

Leave a comment

ಬಿರಿಯದ ಮೊಗ್ಗು · ಬಿರಿಯದ ಮೊಗ್ಗು -12

ಬಿರಿಯದ ಮೊಗ್ಗು -12

ಮೊರೆತ, ಕೊರೆತ, ಮತ್ತದೇ ಸೆಳೆತ!
ಭೋರ್ಗೊರೆದು ಬಂದು
ಹೆಜ್ಜೆ ಗುರುತನಳಿಸುವಷ್ಟು ಆಕ್ರೋಶ
ಈ ಶರಧಿ ತೀರದ ತುಂಬಾ..

Leave a comment