ನೆನಪಿನ ನಲ್ಲೆಯೊಡನೆ ಪಿಸುಮಾತು · ಹುಸೇನಿ ಪದ್ಯಗಳು - 16 · ಹುಸೇನಿ_ಪದ್ಯಗಳು

ನೆನಪಿನ ನಲ್ಲೆಯೊಡನೆ ಪಿಸುಮಾತು… (ಹುಸೇನಿ ಪದ್ಯಗಳು – 16)

ನಿನ್ನ ಮೌನ
ದೊಳಗಿನ ಮಾತಿನ
ಅರ್ಥ ಹುಡುಕುವುದರಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ…
__

ಇನ್ನೂ ಒಂದು ಜನ್ಮ
-ವಿರುವುದಾದರೆ
ಹಗಲಿರುಳೆನ್ನದೆ
ನಿನ್ನ ಕೆನ್ನೆಯ ಚುಂಬಿಸೋ
ಮುಂಗುರಳಾಗಿ
ಹುಟ್ಟಬೇಕೆಂಬ ಆಸೆ ಕಣೇ..!
__

ಹೂತು ಹಾಕಿದ್ದ
ಆ ನಿನ್ನ ಬೇಡದ
ನೆನಪುಗಳು
ನಿನ್ನೆಯ ಮಳೆಗೆ
ಟಿಸಿಲೊಡೆಡಿವೆ…
__

ಹೇಯ್ ಮಾತಿನಮಲ್ಲಿ,
ಆ ನಿನ್ನ ಕಣ್ಣಂಚಿನ ಕುಡಿ
ನೋಟಕು , ಗಾಢ ಮೌನಕೂ
ಏನೋ ಹೇಳಕ್ಕಿದೆಯಂತೆ
ಕೊಂಚ ಅವಕ್ಕೂ ಮಾತು
ಕಲಿಸಬಾರದೇ …?
__

ನಿನ್ನ ಕಣ್-ಸನ್ನೆಯ
ಭಾಷೆಯ ಮೀರಿಸದ
ಹೊರತು
ಭಾವನೆಗಳಿಗೆ ಅಕ್ಷರದ(ಭಾಷೆಯ, ಮಾತಿನ)
ರೂಪ ಕೊಡುವವರ
ಬಗ್ಗೆ ನನಗೆ
ಪರಿತಾಪವಿದೆ…
__

ಮಳೆ ನಿಂತರೂ
ತೊಟ್ಟಿಕ್ಕುವ
ಹನಿ,
ನೀನು..

Leave a comment

ಸರಳ ರೇಖೆಗಳು

ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – II

ರೇಖೆ -೬

ಗಗನದಿ ಹಾರುವ ಹಕ್ಕಿಯ ಏಣಿ ಹಾಕಿ ಹಿಡಿಯಲು ಹೋರಟ ನಾನೊಬ್ಬ ಮೂರ್ಖ…!

ರೇಖೆ -೭

ತಪ್ಪಿನ ವಿರುದ್ದ ಬೆರಳು ತೋರಿಸುವುದು ಧಿಕ್ಕಾರವಾದರೆ ನಾನು ಧಿಕ್ಕಾರಿಗಳ ಹಿಂಬಾಲಕ..

ರೇಖೆ -೮

ಸಂತಸಕ್ಕೆ ಹತ್ತು ಕಾರಣಗಳಿದ್ದರೂ ಒಂದೇ ಒಂದು ಕಾರಣಕ್ಕೆ ದುಃಖಿತರಾಗುವ ಬದಲು ದುಃಖಕ್ಕೆ ಹತ್ತು ಕಾರಣಗಳಿದ್ದರೂ ಒಂದೇ ಒಂದು ಕಾರಣಕ್ಕೆ ಸಂತಸ ಪಡುವ “ನಮ್ಮತನ”ವನ್ನು ಬೆಳೆಸೋಣ …

ರೇಖೆ -೯

ನಮ್ಮ “ಕಡಿಮೆ ತೂಕ”ದ ಮಾತು ಮತ್ತೊಬ್ಬರ ಹೃದಯವನ್ನು “ಭಾರ” ಮಾಡಬಹುದು .. ಅಂತಹ ಮಾತಿಗೆ ಕಡಿವಾಣ ಹಾಕೋಣ…

ರೇಖೆ -೧೦

ಪರಿಚಿತರಾಗಲು, ಬೆರೆಯಲು, ಅರಿಯಲು, ಕೊನೆಗೆ ಅಗಲಲು ಮಾತ್ರ ವಿಧಿಸಲ್ಪಟ್ಟ ಈ ಜಗದ ನಿಯಮವನ್ನು ನಾನು ಎಲ್ಲದಕ್ಕಿಂತ ಹೆಚ್ಚಾಗಿ ದ್ವೇಷಿಸುತ್ತೇನೆ …

(ಇವೆಲ್ಲವೂ ಯಾವುದೊ ಮೂಡಿನಲ್ಲಿ ಫೇಸ್ಬುಕ್ ನಲ್ಲಿ ಹಾಕಿದ ಸ್ಟೇಟಸ್ಗಳು… 🙂 )

Leave a comment