ಡೈರಿ

ಡೈರಿ-1

ದಿನಾ ಆಫೀಸಿಗೆ ಹೋಗಲು ಬಸ್ಸು ಕಾಯುವ ತಂಗುದಾಣದಲ್ಲಿ ಹಲವು ಮಂದಿ ಕುರುಡರು ಬಂದು ಇಳಿಯುತ್ತಾರೆ. ಹತ್ತಿರದಲ್ಲೆ ಕೇರಳ ಸಿವಿಲ್ ಸರ್ವಿಸ್ ಸ್ಟೇಷನ್ ಪಕ್ಕ ಅಂಧರ ಅಕಾಡೆಮಿಯೊಂದಿದೆ. ಬಸ್ಸು ಇಳಿದು ರಸ್ತೆ ದಾಟಿ ಹೋಗಬೇಕು. ರಸ್ತೆ ದಾಟಲು ಬಸ್ಸಿಗೆ ಕಾಯುವ ಮಂದಿಯೇ ಆಸರೆ. ನಾನೂ ಅದೆಷ್ಟೋ ಅಂಧರನ್ನು ರಸ್ತೆ ದಾಟಿಸಿದ್ದೇನೆ. ಹೀಗೆ ಅವರ ಕೈಯನ್ನು ಹಿಡಿದು ದಾಟಿಸುವಾಗ ಆವರ ಮೊಗದಲ್ಲೊಂದು ಧಿಡೀರಾಗಿ ಮೂಡುವ ಸಂಭ್ರಮವನ್ನು ಕಂಡಿದ್ದೇನೆ. ಸಮಾಜದಲ್ಲಿ ಎಲ್ಲರಿಂದಲೂ ತಿರಸ್ಕೃತರಾಗಿದ್ದರಿಂದಲೋ   ಎನೋ … ಅವರ ಕೈ ಹಿಡಿಯುವಾಗ ಅವರಲ್ಲಿ ಬದುಕಿನ ಸ್ಪೂರ್ತಿಯ ಸೆಳೆಯ ಕಿಡಿಯೊಂದು ಹಠಾತ್ತನೆ ಮೂಡುತ್ತದೆ. ಏನೋ ಕಳೆದುಕೊಂಡದ್ದನ್ನು ಮರಳಿ ಪಡೆದ ಸಂತಸ ಅವರ ಮೊಗದಲ್ಲಿ ಕಾಣುತ್ತೇನೆ. ಇತ್ತೀಚಿಗೆ ಪ್ರತೀ ದಿನ ಒಬ್ಬರನ್ನಾದರೂ ರಸ್ತೆ ದಾಟಿಸಿ ನಂತರ ಆಫೀಸಿಗೆ ಬಸ್ಸು ಹತ್ತುತ್ತೇನೆ.

ಅವರ ದಿನದಲ್ಲಿ ಒಂದಷ್ಟು ಘಳಿಗೆಯಾದರೂ ನಾವು -ನಿಮ್ಮೊಂದಿಗೆ ಇದ್ದೇವೆ ಎಂಬ ಭಾವನೆಯನ್ನು ಮೂಡಿಸಲು ಸಾದ್ಯವಾಯಿತೆಂಬ ಖುಷಿ ಇಡೀ ದಿನ ನನ್ನ ಪಾಲಿಗಿರುತ್ತದೆ. 

Add Comments

ಸರಳ ರೇಖೆಗಳು · ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – III

ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – III

ರೇಖೆ -೧೧
ಇನ್ನೊಬ್ಬರ ಸಂತೋಷವನ್ನು ಬರೆಯುವ ‘ಪೆನ್ಸಿಲ್ ‘ ಆಗುವುದಕ್ಕಿಂತ.. ಮತ್ತೊಬ್ಬರ ನೋವನ್ನು ಅಳಿಸೋ ‘ರಬ್ಬರ್’ ಆಗೋಣ..

ರೇಖೆ -೧೨
ಮಾತಿನೊಳಗಿನ ಮೌನವನ್ನೂ .. ನಗೆಯ ಹಿಂದಿನ ನೋವನ್ನು ತಿಳಿಯುವುದೇ ನಿಜವಾದ ಗೆಳೆತನ…

ರೇಖೆ -೧೩
ಕಳೆದುಕೊಂಡಿದ್ದನ್ನೆಲ್ಲ ನೆನಪಿಸಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ.. ಅದೆಂದೂ ವಾಪಾಸ್ ಬರುವುದಿಲ್ಲ .. ಆದರೆ ಭವಿಷ್ಯದಲ್ಲಿ ನಂಬಿಕೆ ಇಟ್ಟು ಕಾರ್ಯಪ್ರವೃತ್ತವಾದರೆ ಕಳೆದುಕೊಂಡಿದ್ದಕ್ಕಿಂತ ದೊಡ್ಡದನ್ನು ಪಡೆಯಬಹುದು.. ಏನಂತೀರ ಗೆಳೆಯರೇ ?

ರೇಖೆ -೧೪
ಬದುಕು ಕಲಿಸಿದ ತಾಯಿಗಿಂತ “ಅವಳು” ಇಷ್ಟವಾಗುವ ಹುಚ್ಚುತನಕ್ಕೆ ಪ್ರೀತಿ ಅನ್ನಲಾರೆ…

ರೇಖೆ -೧೫
ಸೌಂದರ್ಯದ ಕನಸುಕಂಡು .. ಜೀವನ ಹಾಳು ಮಾಡುವುದಕ್ಕಿಂತ ಜೀವನದ ಬಗ್ಗೆ ಕನಸು ಕಂಡು ಜೀವನಕ್ಕೆ ಸೌಂದರ್ಯ ತುಂಬೋಣ.. ಏನಂತೀರ?

Leave a comment