ನಾನೆಂಬ ಅಹಂ

ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬರೆಯುವ ವೇಳೆ ‘ಈ ಕ್ಷಣ’ ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..

14237699_1155557847839456_8547636511193526244_nನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ.ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. “ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ”, ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..

ಬ್ಲಾಗಲ್ಲಿ ನಾನು ಉಪಯೋಗಿಸಿದ ಚಿತ್ರಗಳೆಲ್ಲವೂ ಅಂತರ್ಜಾಲದಿಂದ ಪಡೆದುದು.. ಆ ಅನಾಮಧೇಯ ಕಲಾವಿದರಿಗೆ ಅನಂತ ಕೃತಜ್ಞತೆಗಳು.

ಸಂಪದದಲ್ಲಿ ನನ್ನ ಬ್ಲಾಗ್ ಗಾಗಿ ಇಲ್ಲಿ ಕ್ಲಿಕ್ಕಿಸಿ..

ನೆನಪಿನ ಸಂಚಿಯ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕಳುಹಿಸಿ :  touch2hussain@gmail.com

ಸದಾ ನಿಮ್ಮವನೇ,
ಹುಸೇನಿ ~

Advertisements

76 comments on “ನಾನೆಂಬ ಅಹಂ

 1. ಕನ್ನಡದ ಉಳಿವಿನೆಡೆಗೆ ಇಟ್ಟಿರು ನಿಮ್ಮ ಹೆಜ್ಜೆ ಸಾರ್ಥಕವಾಗಲಿ. ತುಂಬ ಸೂಗಸಾದ ಪದಪುಂಜ ಮೂಡಲಿ.

  ಇಂತಿ ನಿಮ್ಮ ಕಾಣದ ಸ್ನೇಹಿತ
  ಚಂದ್ರಶೇಖರ ಚಿಕ್ಕಲ್ಲೂರು.

  Like

 2. hiiiiii Huseeeen,,,,,,

  Nimma kannadabhimankke nanu chiraruni,,,

  ‘ Bhavanegalige Beleye ellada endina e bhumiyalli,,, Antarangada Bhavanegalannu akshara rupakke taruva nimma koushalyakke Kannadigara paravagi KOTI NAMANA,,,,,,’

  Nanaganisiddu……..” E Nisargakku savalesuyuva *BADADIRUVA HUVENDARE*……..adu Nimma Bhavanegalannu andada reeti aksharadalli aralisuva Nimma koushalyavonde Geleya,,,,,,”

  Nanna Hrudayapurvaka Shubhashayagalondige…..

  Enti Nimma Kanada Geleya…..Manju Davanagere

  Like

 3. Hi Huseni,

  Nanna hesaru Ashok…Ooru shimoga…Evaga bangalore alli IT company alli kelsa madtha eddini….

  Naanu ondu kannada video album madbeku antha plan madidini…..nimma blog alli kavana nodi kushi ayithu….

  Naanu ondu sanna team katutta eddini…. professionals alladha swlapa janarannu kudisi..album madbeku…

  Yaarigu Payment kodallu nanindha aagolla….But studio and video making, technical stuffs ge naanu invest maadalu ready eddini…

  Aa album ge neeenu 4 song annu baredu kodalu sadyave…?

  Regards,
  Ashoka K.S
  Ph: +91 8904314414

  Like

 4. “ನೆನಪಿನ ಸಂಚಿ”ಯೊಳಗೆ ಕೈ ಹಾಕಲು ನನಗೊಂದು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
  “ಹುಸೇನಿ” ಈ ಹೆಸರು ಕೇಳಿದಾಗ ಇವರಿಗೆ ಕನ್ನಡ ಬರುತ್ತಾ?ಅನ್ನುವ ಸಂಶಯ ಬರುವುದು ಸ್ವಾಭಾವಿಕ. ಆದರೆ ನೀವು ಅದಕ್ಕೆ ಅಪವಾದ. ಕನ್ನಡದ ಸುಂದರವಾದ ಹೂ ಸೇನೆಯ ಸೇನಾಧಿಪತಿ ಆಗಿದ್ದೀರಿ. “ಸಂಚಿ” ಈ ಪದ ಇದೂ ಕೂಡ ಹಳ್ಳಿಯ ಸೊಗಡು ಸೂಸುತ್ತಿದೆ. ಸಂಚಿಯೊಳಗೆ ಮನದ ಸಂಚಿಯ ಭಾವನೆಗಳ ಭೋಗ೯ರೆತ ಸದಾ ತುಂಬಿ ಉಕ್ಕುಕ್ಕಿ ಹರಿಯಲಿ. ಮುಸ್ಸಂಜೆಯ ಹೊತ್ತಲ್ಲಿ ಹಚ್ಚಿದೆ ಸಂಧ್ಯಾದೀಪ ಮೆಚ್ಚುಗೆಯೊಂದಿಗೆ ನಿಮ್ಮೊಳಗಿನ “ನಮ್ಮೂರು” ಅನ್ನುವ ಅಭಿಮಾನ ಕಂಡೆ; ಸದಾ ಹಸಿರಾಗಿರಲಿ! ನಿಮ್ಮ ಪರಿಚಯದ ಲಯಬದ್ದ ತೂಕದ ಮಾತು ಎಂಥವರಾದರೂ ತಲೆದೂಗಲೆ ಬೇಕು. ಸೊಗಸಿದೆ ಬಿಚ್ಚಿಟ್ಟುಕೊಂಡ ಮನದ ಮಾತು.☺👍

  Liked by 1 person

  • ಧನ್ಯವಾದಗಳು ನಿಮ್ಮ ಪ್ರೀತಿಗೆ,
   ‘ಹುಸೇನಿ’, ನನ್ನ ನೆನಪಿನ ಚಿತ್ತಾರದ ‘ನೆನಪಿನ ಸಂಚಿ’ ನನಗೆ ಕೊಟ್ಟ ಹೆಸರು. ನನ್ನ ಓದುಗ ಗೆಳೆಯರು ಪ್ರೀತಿಯಿಂದ ಕರೆದ ಹೆಸರು.. ಅದಕ್ಕಾಗಿ ಆ ಹೆಸರಿನಲ್ಲೇ ನನ್ನ ಕರೆಯುವುದನ್ನು ಹೆಚ್ಚು ಇಷ್ಟಪಡುತ್ತೇನೆ.. ಒಂದಷ್ಟು ಕತೆಗಳು, ಕವಿತೆಗಳು(?), ಆಳಕ್ಕಿಳಿದಷ್ಟೂ ವಿಶಾಲವಾಗುವ ಬಾಲ್ಯದೊಂದಿಗೆ ಬೆಸೆಯುವ ತೊರೆಯ ತೀರದ ನೆನಪುಗಳು, ಮತ್ತೊಂದಿಷ್ಟು ಅಸಂಬದ್ದ ಆಲಾಪಗಳು… ನೆನಪಿನ ಸಂಚಿಗೆ ನಿಮಗೆ ಹಾರ್ದಿಕ ಸ್ವಾಗತ!

   Liked by 1 person

 5. sir Your blog Design writings soo excellent really i like it.
  i want 1 information can u help me i’m working As a Govt Primary School Teacher I’m also running 1 blog. your blog title images is very nice creative pls inform me How to create? that type images for Blog header. i’m waiting for your reply sir.
  my blog address is
  http://www.nammaashale.blogspot.in
  My email id – nammaashale@gmail.com

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s