ಜಾರಿ ಬೀಳುವವರೆಗಾದರೂ..!

ಜಾರಿ ಬೀಳುವವರೆಗಾದರೂ..!

ಮುಂಗುರುಳು ಮಂಜಾನೆಯ
ಮಂಜನು ಇಷ್ಟಪಟ್ಟ ಮಂದಾರ ಹೂವೇ..
ಮರೆಯಬಾರದೀ ಮಂಜ ಹನಿಯ..
ನಿನ್ನ ಎಸಳಿನಿಂದ ಜಾರಿ ಬೀಳುವವರೆಗಾದರೂ..!
ತಪ್ಪಿ ಹೋದ ದಾರಿ..!

ತಪ್ಪಿ ಹೋದ ದಾರಿ..!

ನನ್ನ ದಾರಿಯಲ್ಲಿ ನಿನ್ನ ಕಣ್ಣೀರಿನ
ಒಂದು ಹನಿಯೂ ಬೀಳಬಾರದೆಂಬ ಶ್ರಮದಲಿ..
ನಿನ್ನ ಸೇರುವ ದಾರಿ ನನಗೆ ತಪ್ಪಿ ಹೋಯ್ತು..!
ಮಾರಾಟಕ್ಕಿಲ್ಲ..!

ಮಾರಾಟಕ್ಕಿಲ್ಲ..!

ಹೃದಯವ ಅಡವಿಟ್ಟ ದುಡ್ಡಿಗೆ
ಪ್ರೀತಿಯ ಖರೀದಿಗೆ ಹೊರಟೆ..
ಆದರೆ..!
ಈಗ ಅವಳು ಹೇಳುತ್ತಾಳೆ..
ಹೃದಯ ಇಲ್ಲದವರಿಗೆ ಪ್ರೀತಿ ಮಾರಾಟಕಿಲ್ಲವೆಂದು..!
ನೆನಪುಗಳು ಜೊತೆಗೂಡಿ..

ನೆನಪುಗಳು ಜೊತೆಗೂಡಿ..

ಎಂದಾದರೂ ಸಿಗೋಣ ಎಂದು ಉಸುರಿ ನೀನು ಅಗಲಲು..
ನಮ್ಮ ನಡುವೆ ಒಂದು ಕನಸಿನ
ದೂರ ಮಾತ್ರ ..ಎಂದು ತಿಳಿದಿರಲಿಲ್ಲ..!
ನಿನ್ನೆ ಕೂಡ ನನ್ನ ಕನಸಲಿ ನೀ ಬರುವೆ ಎಂದುಕೊಂಡೆ..
ಆದರೆ ನಿನ್ನ ನೆನಪುಗಳು ಜೊತೆಗೂಡಿ
ಮಲಗುವುದ ಮರೆತು ಹೋದೆ..!!

ಕಾಯುತ್ತಿದ್ದೇನೆ..!

ಕಾಯುತ್ತಿದ್ದೇನೆ..!

ಅರ್ಧದಲಿ ಮುರಿದು ಬಿದ್ದ
ಹಗಲು ಕನಸಂತೆ ನೀನು ನನ್ನಿಂದ ಅಗಲಲು..
ಇರುಳು ತುಂಬಿದ ಜೀವನವೆಂಬ ಈ ಕವಲು ದಾರಿಯಲಿ
ನಾನಿಂದೂ ನಿನ್ನ ಕಾಲ್ಗೆಜ್ಜೆ ದನಿಗಾಗಿ
ಕಾಯುತ್ತಿದ್ದೇನೆ..!
ವಿಧಿ..!!

ವಿಧಿ..!!

ವಿಧಿ ನನ್ನನ್ನು ನಿನ್ನಿಂದ ದೂರ ಮಾಡಬಹುದು,
ನಿನ್ನ ನೆನಪನ್ನು ಮಾಯಿಸಬಲ್ಲದು..
ಆದರೆ…!
ನನ್ನ ಪ್ರೀತಿ ವಿಧಿಯ ಮುಂದೆ ಸೋಲುವುದಾದರೆ
ಆ ವಿಧಿ ನನ್ನ ಮರಣ ಮಾತ್ರವಾಗಿದೆ..!!
ಹೇಗೆ ಮರೆಯಲಿ..?

ಹೇಗೆ ಮರೆಯಲಿ..?

ಬಚ್ಚಿಟ್ಟ ಭಾವನೆಯಲಿ.. ಸುತ್ತಿಟ್ಟ ಕನಸಲಿ,
ಮೈ ಮರೆತು ಯೋಚಿಸಿದಾಗ ಮಿಂಚಂತೆ
ನೆನಪಾಗುವ ಪ್ರೇಯಸಿ…ಮರೆಯಲೇನು ನಿನ್ನ ?

ಹೃದಯದಲಿ ನೀನಿದ್ದರೆ ಮರೆಯಬಹುದಿತ್ತೇನೋ..
ಆದರೆ..!
ಹೃದಯವೇ ನೀನಾದರೆ ಹೇಗೆ ತಾನೆ ಮರೆಯಲಿ…??

ನಿನ್ನ ಹೆಸರು..

ನಿನ್ನ ಹೆಸರು..

ಮಂಜು ಆವರಿಸಿದ ಗಾಜಿನ ಮೇಲೆ
ಹಾಗೆ ಸುಮ್ಮನೆ ಒಂದು ಹೆಸರ ಬರೆದೆ..
ಆಮೇಲೆ ಸುರಿದ ಮಳೆಗೋ,ಬೀಸಿದ ಗಾಳಿಗೋ,
ಸುಡು ಬಿಸಿಲಿಗೋ ಆ ಹೆಸರನ್ನ ಮಾಯಿಸಲು ಸಾಧ್ಯವಾಗಿಲ್ಲ.!
ಕಾಲಕ್ಕೂ ಮಾಯಿಸಲು ಸಾಧ್ಯವಾಗದೆ
ನಾನು ನಿನ್ನ ಹೆಸರು ಬರೆದದ್ದು
ನನ್ನ ಹೃದಯದಲ್ಲಾಗಿತ್ತು…!
ನೆನಪುಗಳಾಗಿ..!

ನೆನಪುಗಳಾಗಿ..!

ಅಪರಿಚಿತನಾಗಿ ನಿನ್ನ ಬಳಿ ಬಂದೆ..
ಗೆಳೆತನವಾಗಿ ಬೆರೆತೆ..
ಪ್ರೀತಿಯಾಗಿ ನಿನ್ನ ಅರಿತೆ..
ಕೊನೆಗೆ..
ಮೌನವಾಗಿ ನೀನು ಕಳೆದು ಹೋದೆ..
ಆದರೂ..
ನೆನಪುಗಳಾಗಿ ಕಾಯುತ್ತಿದ್ದೇನೆ..!!