ಮನಸಿನ ಹಾ(ಪಾ)ಡು · ಮೌನದ ಹಾಡು · ಹುಸೇನಿ_ಪದ್ಯಗಳು

ಮೌನದ ಹಾಡು …

night-light-installations-2


ಮಾತಾಗುತ್ತಾಳೆ, ಮಾತಿನಲ್ಲೇ
ಮೌನದ ಹಾಡೊಂದು
ಗುನುಗುತ್ತದೆ,
ತಡೆಯುತ್ತಾಳೆ, ಬಲವಂತವಾಗಿ
ಅಥವಾ, ……
ಮಣ್ಣು ಬೀಜದ
ಕತೆಗೆ ಕೊಪಗೊಳ್ಳುತ್ತಾಳೆ,
ಸೃಷ್ಟಿ ಹಾಡು ಕರ್ಕಶವಂತೆ!
ಪದಗಳಲಿ
ಒಳಗುದಿಗಳನೆಲ್ಲ
ಬಗೆದು ಬಗೆದು
ಬೆತ್ತಲಾಗಿದ್ದು ನಿಜವೇ ಸರಿ.
ಕತ್ತಲಲ್ಲಿ ಬೆತ್ತಲಾಗೋದು
ಸುಲಭ!
ಒಂಟಿತನಗಳು ಅಲ್ಲೇ ತಾನೇ ಗರ್ಭಕಟ್ಟಿ
ಹುಟ್ಟೋದು?!
ದೂರ ನಿಲೀಗಾಸದ ನೀಲಿಮೆ ನಾನು
ಮುಗಿಯುತ್ತೇನೆ, ಮುಂಚೆ ಆಸೆಯೊಂದೇ
ಪರದೆಯೊಳಗೆ ಹನಿವ
ಕಣ್ಣುಗಳ ಮಿಂಚಿನ
ಬೆಳಕಿನ(ಕತ್ತಲಿನ)ಹಾಡು ಗುನುಗಬೇಕು,
ರಾಗ
ಹರಿಯಬೇಕು ಸರಾಗ,
ನದಿಯಾಗಿ, ಸಮುದ್ರವಾಗಿ, ಮತ್ತೆ
ಬದುಕಾಗಿ.. !
ಹೌದು ಬದುಕಾಗಿ…

ಹುಸೇನಿ ~

Leave a comment