ನೆನಪಿನ ಹನಿ · ಮೂಕ ಮೌನ

ಮೂಕ ಮೌನ ..

ತಿರುಗಿ ನಡೆಯಲು..
ಕೂಗಿ ಕರೆಯುವಳು ಅಂದುಕೊಂಡೆ
ಅಗಲಿ ಹೋಗಲು ..
ನೆಪ ಮಾತ್ರ ಅಂದುಕೊಂಡೆ
ನಗು ಮಾಸಲು ..
ಮಾತು ಮಾಸದು ಅಂದುಕೊಂಡೆ
ಜಾರಿಬಿದ್ದ ಕಣ್ಣ ನೀರು..
ಮಳೆಹನಿ ಅಂದುಕೊಂಡೆ
ಆದರೆ …
ಮರೆವನ್ನು ಪ್ರೀತಿಸಲು ಅವಳು ಹೇಳಿದಾಗ
ಅಂದುಕೊಳ್ಳಲು ಏನೂ ಇರಲಿಲ್ಲ…!

ಅತೀ ದೊಡ್ಡ ಕನಸುಗಳು.. · ನೆನಪಿನ ಹನಿ

ಅತೀ ದೊಡ್ಡ ಕನಸುಗಳು..

ಪ್ರೀತಿಸಲು ಅದೆಷ್ಟೂ ನೆನಪುಗಳು..
ನೆನಪಾಗಿ ಅದೆಷ್ಟೋ ನಷ್ಟಗಳು..
ನಷ್ಟಗಳು ಮಾತ್ರ ಕೊಟ್ಟ ಜೀವನ
ಕೊನೆಗೆ ನಷ್ಟಗಳನ್ನೂ ಪ್ರೀತಿಸಿದೆ..
ಕಾರಣ ಅದೆಲ್ಲ ನನ್ನ ಅತೀ ದೊಡ್ಡ
ಕನಸುಗಳು….!!


Leave a Comment

ಕಣ್ಣೀರನ್ನು ಪ್ರೀತಿಸುತ್ತಿದೆ.. · ನೆನಪಿನ ಹನಿ

ಕಣ್ಣೀರನ್ನು ಪ್ರೀತಿಸುತ್ತಿದೆ..

ಅಂದು ನೀ ನನ್ನ ಬಳಿಯಿರಲು
ಮಂದಹಾಸವನ್ನು ಪ್ರೀತಿಸುತ್ತಿದ್ದ
ನನ್ನ ಅಕ್ಷರಗಳು
ಇಂದು ನೀನು ಅಗಲಿರಲು
ಕಣ್ಣೀರನ್ನು ಮಾತ್ರ ಪ್ರೀತಿಸುತ್ತಿದೆ…
ನೆನಪಿನ ಹನಿ · ಮೌನ ಪ್ರೀತಿಯೇ..?

ಮೌನ ಪ್ರೀತಿಯೇ..?

ಮೌನ ಪ್ರೀತಿಯೇ..?
ಗೊತ್ತಿಲ್ಲ…
ಮನದಲ್ಲಿ ಕಡಲಷ್ಟು ಪ್ರೀತಿ ಇದ್ದರೂ
ಪ್ರೀತಿಸುವುದಿಲ್ಲ ಎನ್ನುವ ಮನಸಿನ
ಮೂಕ ರೋದನೆಯೇ ಮೌನ!!
ಕಣ್ಣೀರು ಪ್ರೀತಿಯೇ..? · ನೆನಪಿನ ಹನಿ

ಕಣ್ಣೀರು ಪ್ರೀತಿಯೇ …?

ಕಣ್ಣೀರು ಪ್ರೀತಿಯೇ …?
ಗೊತ್ತಿಲ್ಲ…
ನಿನ್ನ ನೆನಪು ಮೂಡುವಾಗಲೆಲ್ಲ
ನನ್ನ ಕಣ್ಣು ತುಂಬಿ ಬರುತಿದೆ…
ನಾನು ಜೀವಿಸುತ್ತೇನೆ.. ! · ನೆನಪಿನ ಹನಿ

ನಾನು ಜೀವಿಸುತ್ತೇನೆ.. !

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು…
ಕಾರಣ..
ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ..
ಅಲ್ಲ..!!
ನೀ ನೆನಪಾಗೋ ವೇಳೆ ಮಾತ್ರ
ನಾನು ಜೀವಿಸುತ್ತೇನೆ..!!
ಉಳಿಸು ಕಣೆ.. ನನ್ನ ಪ್ರೀತಿಯ.. · ಮನಸಿನ ಹಾ(ಪಾ)ಡು

ಉಳಿಸು ಕಣೆ.. ನನ್ನ ಪ್ರೀತಿಯ..

ಗೆಳತೀ.. ಮರೆಯಾದೆ ನೀನು..
ಮರಳಿ ಬರಬಾರದೇ…?

ತುಡಿತದೆದೆಯ ಬಡಿತದಲೂ
ತಡವರಿಸುವ ಕನಸಲೂ
ದೇಹದ ಸಕಲ ನರ ನಾಡಿಯಲೂ
ತುಂಬಿರುವೆ ನೀನು

ಹೆಸರಿಲ್ಲದೆ ಅಳಿದು ಹೋದ ಬಂಧವಿದು
ಹೊಸ ಹೆಸರ ಕೊಡಬೇಕು..
ಆ ಹೆಸರ ನಾ ಕೂಗಿ ಕರೆಯಲು
ಓ ಎನುತ ನೀನೋಡಿ ಬರಬೇಕು

ನಿನ್ನ ಸೆಳೆತವಿರದ ಕ್ಷಣವಿಲ್ಲ
ನಿನ್ನ ನೆನಪಿರದ ದಿನವಿಲ್ಲ..
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ

ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಉಳಿಸು ಕಣೆ.. ನನ್ನ ಪ್ರೀತಿಯ
ಅಲ್ಲ ನನ್ನ ಜೀವವ.. ಜೀವನವ..!

ನಷ್ಟಗಳು.. · ನೆನಪಿನ ಹನಿ

ನಷ್ಟಗಳು..

ಪ್ರೀತಿಯು ನನ್ನ ಜೀವನವಾಗಿದೆ..

ಕೇಳಲು ಮರೆತ ಪ್ರಶ್ನೆಗಳು..
ಹೇಳಲು ಮರೆತ ಉತ್ತರಗಳು..
ದನಿಗೂಡಿಸಲು ಮರೆತ ಮಾತುಗಳು ..
ಇದೇ ನನ್ನ “ಜೀವನದ” ನಷ್ಟಗಳು..