ಅಮ್ಮಂದಿರ ಕಥೆ · ಅಮ್ಮಾ.. · ಅವಳು · ಕಾಡುವ ಹನಿಗಳು · ನೆನಪಿನ ಹನಿ · ಹುಸೇನಿ_ಪದ್ಯಗಳು

ಅವಳು …

ಚಿತ್ರ ಕೃಪೆ : ಹಾರಿಸ್ ಖಾನ್

೧.
ಬಹುಮಹಡಿ ಮನೆಯಲ್ಲಿ
ಕಾಲಿಗೊಂದು ಕಾಲಾಳು,
ಕೋಣೆಗೊಂದು ಸೀಸಿ ಕ್ಯಾಮರಾ
ಅವಳು ಬಿಕ್ಕುವುದು ಮಾತ್ರ
ಗೋಡೆಗಷ್ಟೇ ತಿಳಿಯುತ್ತದೆ.

೨.
ಸೂರ್ಯ ಸರಿದರೂ ಮನೆ ಮುಟ್ಟದ
ಮಗಳು;
ಜಾಗರಣದ ಜಗತ್ತಿನಲ್ಲಿ ಅವಳಿಗೆ
ಸೂರ್ಯನ ಮೇಲೆ ಮುನಿಸು.

೩.
ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;
ಉಸಿರು ನಿಲ್ಲಿಸಿ
ತೊಟ್ಟಿಲಿನ ಉಸಿರನ್ನು ಆಲಿಸಿ
ನಿಟ್ಟುಸಿರಿಟ್ಟಳು ಅವಳು …

ಅಮ್ಮಾ.. · ಮನಸಿನ ಹಾ(ಪಾ)ಡು

ಅಮ್ಮಾ..

                  ಓ ಮಮಕಾರದ ಅಕ್ಷಯ ನಿಧಿಯೇ
                  ನಿನಗೆ ಕೋಟಿ ವಂದನೆ..!
                  ಓ ಸ್ನೇಹದ ಮೂರ್ತ ರೂಪವೇ
                  ನಿನಗೆ ಕೋಟಿ ವಂದನೆ..!

                  ನಡು ರಾತ್ರಿಯಲು ನನ್ನ ಅಳುವಿಗೆ
                  ಎದೆ ಹಾಲಿನ ಸಾಂತ್ವನ ನೀಡಿ..
                  ನನ್ನ ಹಟಕ್ಕೆಲ್ಲ ತಲೆಬಾಗಿ ನಿಂತು..
                  ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ..
                  ಪ್ರೀತಿಯ ಮಳೆ ಸುರಿಸಿ, ಗೆಲುವಿನ ದಾರಿ ತೋರಿಸಿ
                  ಬೆಳೆಸಿದಳು ನನ್ನ ತಾಯಿ…
                  ಓ ಜನನೀ.. ನಿನಗೆ ಕೋಟಿ ವಂದನೆ…!

                  ತೆವಳಿ ಬರಲು ಕೈ ನೀಡಿಡಳು..
                  ತೊದಲು ನುಡಿಯಲು ತಿದ್ದಿ ಹೇಳಿದಳು..
                  ಚಂದ ಮಾಮನ ತೋರಿಸಿ ತುತ್ತು ಕೊಟ್ಟು
                  ಹಸಿವ ನೀಗಿಸಿದಳು..
                  ತನ್ನ ಬಸಿರೊಳಗೂ ನನಗೆ ಉಸಿರಾದಳು..
                  ಓ ದಿವ್ಯ ಚೇತನವೇ.. ನಿನಗೆ ಕೋಟಿ ವಂದನೆ..!

                  ತನ್ನ ಬೇಸರವ ಮರೆತು ನನಗೆ
                  ಸಾಂತ್ವನವಾದಳು..
                  ನನ್ನ ಸಂತೋಷದಲಿ ನಗೆಯ ಕಂಡಳು..
                  ಗೆಲುವಿಗೆ ಸ್ಪೂರ್ತಿಯಾದಳು…
                  ಬದುಕಿದೆ ದಾರಿದೀಪವಾದಳು..
                  ಓ ಸ್ಪೂರ್ತಿಯ ಚಿಲುಮೆಯೇ.. ನಿನಗೆ ಕೋಟಿ ವಂದನೆ..!

                  ಪದಗಳು ಸಾಕಾಗದು ನಿನ್ನ ಬಣ್ಣಿಸಲು..
                  ಈ ಜನ್ಮವು ಸಾಕಾಗದು ನಿನ್ನ ಋಣವ ತೀರಿಸಲು..
                  ನವಮಾಸ ನೀ ಹೊತ್ತ ಈ ಜೀವ
                  ನಿನಗಷ್ಟೇ ಮೀಸಲು..
                  ಹೊತ್ತು ಹೆತ್ತ ಹೆತ್ತವಳು ನೀನು.
                  ನನ್ನ ಉಸಿರಿನ ಒಡತಿ ನೀನು.. .
                  ಅಮ್ಮಾ… ನಿನಗೆ ಕೋಟಿ ಕೋಟಿ ವಂದನೆ….!