ಕಾಡುವ ಹನಿಗಳು

ಬಾಶೋನ ಶರತ್ಕಾಲದ ಹಾಯ್ಕುಗಳು

haykugalu
1)
ನಾನು ಸತ್ತಿಲ್ಲ!
ಪ್ರಯಾಣದ ಕೊನೆಯು
ಶರತ್ಕಾಲದ ಸಂಜೆಯ ಮಬ್ಬು.

2)
ನನ್ನತ್ತ ಮುಖ ಮಾಡುವೆಯಾ ?
ನಾನೂ ಒಬ್ಬಂಟಿ,
ಈ ಶರತ್ಕಾಲದ ಇಳಿ ಸಂಜೆಯಲಿ.

3)
ಯಾರೂ ಪಯಣಿಸದ
ಈ ದಾರಿಯಲ್ಲಿಂದು
ಶರತ್ಕಾಲದ ಸಂಜೆಯ ಮಬ್ಬು.

ಇದು ಬಾಶೋನ ಹಾಯ್ಕುಗಳ ಅನುವಾದ ಪ್ರಯತ್ನ … ಎಷ್ಟರಮಟ್ಟಿಗೆ ನಿಮಗೆ ಇಷ್ಟವಾಗಬಹುದೆಂಬ ಹೆದರಿಕೆ ನನ್ನದು 😦

ಇಷ್ಟವಾದರೆ ಹೇಳಿ

ಹಂಗಿನ ಹನಿಗಳು

ಹಂಗಿನ ಹನಿಗಳು

nenapina sanchi
1)
ನಿನ್ನ ಹಂಗಿಲ್ಲದೆ ಕವಿತೆಯೊಂದ
ಬರೆಯಬೇಕೆಂದು ಹೊರಟೆ;
ಕವಿತೆಗೊಂದು ಶೀರ್ಷಿಕೆಯೂ
ಬರೆಯಲಾಗದೆ
ಚಡಪಡಿಸುತ್ತಿದ್ದೇನೆ…

2)
ನಿನ್ನ ನೆನಪಿನ ಹಂಗಿಲ್ಲದೆ
ಒಂದು ಕವಿತೆಯನ್ನೂ ಕಟ್ಟಲಾಗದ
ನನ್ನ ಅಸಹಾಯಕತೆಗೆ
ಸಂತಸಪಡಲೋ …?
ಮರುಗಲೋ…?

3)
ನೀನಿರದ ರಾತ್ರಿಗಳಲ್ಲಿ
ನಕ್ಷತ್ರಗಳು ಕವಿತೆ ಹೇಳುತ್ತಿತ್ತು;
ನನ್ನ ಮುಖದಲ್ಲಿರುವ ನಿನ್ನ ಕಣ್ಣುಗಳು
ತುಂಬಿಕೊಂಡ ಆ ಚಂದಿರನ ಮುಖದಲ್ಲಿ
ಸೂತಕದ ಛಾಯೆ.

4)
ಎಲ್ಲವೂ ಸರ್ವನಾಶವಾದ
ನಂತರವೂ ಒಮ್ಮೆ
ನೆನಪಾಗು;
ಬದುಕು ಮುಂದುವರೆಯಬೇಕು..

ಇಷ್ಟವಾದರೆ ಹೇಳಿ