ಮನಸಿನ ಹಾ(ಪಾ)ಡು · ವ್ಯಸನ ವ್ಯೂಹ

ವ್ಯಸನ ವ್ಯೂಹ

The India of My Dreams1

‘ನನ್ನ ದೇಶ, ನನ್ನ ಜನ,
ಜಾತ್ಯಾತೀತತೆ, ಕೋಮುವಾದ,
ಸುಧಾರಿತ ಭಾರತ’ದ ಬಗ್ಗೆ ಮಾತನಾಡುವ
ಅವನು ಅದಾಗಲೇ ಒಂದು ಪ್ಯಾಕೆಟ್ ಸಿಗರೆಟ್ ಸುಟ್ಟಿದ್ದ;
ಭವಿಷ್ಯದ ಭಾರತದ ಶ್ವಾಸಕೋಶ ಕಪ್ಪಾಗಿತ್ತು.

‘ಇಂಡಿಯಾ ದ ಸೂಪರ್ ಪವರ್’
ನಕ್ಷತ್ರ ಹೋಟೆಲಿನಲ್ಲೊಂದು ವಿಐಪಿ ಮೀಟಿಂಗು
ಸ್ವದೇಶೀ ಭಕ್ಷ್ಯಗಳ ಜೊತೆ ಠಣಗುಟ್ಟಿದ ಗ್ಲಾಸಿನೊಳಗೆ
ವಿದೇಶಿ ಮಧ್ಯಗಳು; ಭ್ರಮನಿರಸ ಕನಸಿನ ಭಾರತ
ನಶೆಯಲ್ಲಿ ತೂರಾಡುತ್ತಿತ್ತು.

ಮಧ್ಯ ರಾತ್ರಿ, ಬಸ್ಸಿನೊಳಗೆ ಹೊಕ್ಕ ಒಂಟಿ
ಹುಡುಗಿ, ಹಸಿ ಮಾಂಸ ತಿಂದು ತೇಗಿ ಕೊನೆಗೆ
ಕಬ್ಬಿಣದ ರೋಡಿನಿಂದ ಆ ಭಾಗವನ್ನೇ ತಿವಿದ
ಕಂಭೂತ ನರಭಕ್ಷಕರು;
ರಾಮರಾಜ್ಯ ಭಾರತದ ಪುರುಷತ್ವ
ಸ್ತ್ರೀ ಕುಲಕ್ಕೆ ಮತ್ತಷ್ಟು ಮಾರಿಯಾಗಿತ್ತು.

ವ್ಯಸನ ವ್ಯೂಹವ ತೊಡೆಯಬೇಕು, ನಮ್ಮೊಳಗಿನ
ಭಾರತ ಜಾಗೃತವಾಗಬೇಕು, ನೆಮ್ಮದಿಯ ನಾಳೆಗೆ;
ಹುಟ್ಟಬೇಕು ಮತ್ತೆ ಭಗತ, ಅಝಾದರು
ಮೊದಲು ನನ್ನೊಳಗೆ ಮತ್ತೆ ನಿಮ್ಮೊಳಗೆ…

-ಹುಸೇನಿ

Leave a comment