ನಿನಗಾಗಿ ಮಾತ್ರವಲ್ಲವೆ.. ?

ನಿನಗಾಗಿ ಮಾತ್ರವಲ್ಲವೆ.. ?

ಇನ್ನೂ ಒಂದು ಜನ್ಮವಿರುವುದಾದರೆ ನಾನು
ನಿನ್ನ ಹೃದಯವಾಗಿ ಜನಿಸುವೆ
ಕಾರಣ
ಅದರ ಬಡಿತವೂ ಮಿಡಿತವೂ ಕೇವಲ
ನಿನಗಾಗಿ ಮಾತ್ರವಲ್ಲವೆ.. ?

ಪ್ರೀತಿ ಎನ್ನಬಹುದು..!

ಪ್ರೀತಿ ಎನ್ನಬಹುದು..!

ಯಾತ್ರೆ ಹೇಳಿ ಹಿಂದಿರುಗಿ ನೋಡದೇ
ಮುನ್ನಡೆಯುವ ವೇಳೆಯೂ
ಹಿಂದಿನಿಂದ ಒಂದು ಕರೆಗಾಗಿ
ಮನಸ್ಸು ಆಶಿಸಿದರೆ
ಅಗಲುವಿಕೆಯ ಆ ಮೂಕ ವೇದನೆಯನ್ನು
ಪ್ರೀತಿ ಎನ್ನಬಹುದು….!
ನನ್ನ ಕಣ್ಣೀರು..!

ನನ್ನ ಕಣ್ಣೀರು..!

ಕೈಯಲ್ಲಿ ಹೂಗುಚ್ಚ, ಕೊರಳಲ್ಲಿ ಹೂಮಾಲೆಯೊಂದಿಗೆ
ಅವಳು ಅವನ ಕೈ ಹಿಡಿದು ಹೊರಟಳು…

ಅವರು ನಿರೀಕ್ಷಿಸದ ಮಳೆಯೊಂದು ಸುರಿಯಿತು..
ನಾನು ಆ ಮಳೆಯ ನಿರೀಕ್ಷಿಸಿದ್ದೆ..!

ಮೊದಲ ಮಳೆಗೆ ಪುಳಕಿತಗೊಂಡ ಅವಳು
ಮಗುವಂತೆ ಕುಣಿದು ಕುಪ್ಪಳಿಸಿದಳು…

ಅವಳ ಸಂತಸ ಇಮ್ಮಡಿಗೊಳಿಸಿದ
ಆ ಮಳೆ ನನ್ನ ಕಣ್ಣೀರೆಂದು ಅವಳಿಗೆ
ಗೊತ್ತಾಗದಿರಲಿ.. ಎಂದಿಗೂ..!!

ಹೆಣ್ಣು.

ಹೆಣ್ಣು


                                      ಶಪಿಸುತ್ತಾ ನಗುವ..
                                      ನಗುತ್ತಾ ಅಳುವ..
                                      ಮೋಹಿಸುತ್ತಾ ದ್ವೇಷಿಸುವ..
                                      ಪ್ರೀತಿಸುತ್ತಾ ವಂಚಿಸುವ..
                                      ದೇವರ ಅತುಲ್ಯ ಸೃಷ್ಟಿಯೇ
                                      ಹೆಣ್ಣು…!!

ಜೀವ ಸ್ಪಂದನವಾಗಿತ್ತು..!

ಜೀವ ಸ್ಪಂದನವಾಗಿತ್ತು..!

ಮೊದಲು ಅವಳು ಕೇಳಿದ್ದು ನನ್ನ ನೋಟವನ್ನಾಗಿತ್ತು..
ನಾನದನ್ನು ಕೊಟ್ಟೆ..
ಮತ್ತೆ ಕೇಳಿದ್ದು ಒಂದು ಮಾತನ್ನಾಗಿತ್ತು..
ಅದನ್ನೂ ನಾನು ಕೊಟ್ಟೆ..
ಕೊನೆಗೆ ಹಣೆಗೆ ಮುತ್ತೊಂದ ನೀಡಿ ಅವಳು ಹೋದಾಗ
ನೋಟ ಮತ್ತು ಮಾತಿನ ಜೊತೆ
ನನಗೆ ನಷ್ಟವಾದದ್ದು
ನನ್ನ ಕನಸುಗಳು ಮತ್ತು ಜೀವ ಸ್ಪಂದನವಾಗಿತ್ತು..!!
ಪ್ರೀತಿಸಿ ಆರಂಭಿಸಬೇಕು..!

ಪ್ರೀತಿಸಿ ಆರಂಭಿಸಬೇಕು..!

ನನಗೆ ದೃಡ ವಿಶ್ವಾಸವಿದೆ.
ಜೀವನದ ಮುಸ್ಸಂಜೆಯಲ್ಲಾದರೂ
ನೀ ನನ್ನ ನೆನೆಯುವೆ ಎಂದು..
ಸವೆದು ಹೋದ ಜೀವನದ ಕವಲು ದಾರಿಯಲ್ಲಿ
ನಾನೂ ಜೊತೆಯಿರುವೆ.. ಒಂದು ಹೂವಿನ ಹಾಗೆ,
ನೀನು ಕಿತ್ತುಹೋದ ಹೃದಯದಿಂದ ಪುಟಿದು ಬಿದ್ದ
ನೆತ್ತರ ವಾಸನೆಯ ಸೂಸಿ…

ಮರಣ  ಸನ್ನಿಹಿತವಾಗಲು ಹೇಳು..!
ನಾವು ಮತ್ತೆ  ಪ್ರೀತಿಸಿ ಆರಂಭಿಸಬೇಕು..!!

ನೆನಪಿನ ಚಿಗುರೆಲೆ

ನೆನಪಿನ ಚಿಗುರೆಲೆ

ಕನಸಿನೂರಿನ ನೆನಪನ್ನೆಲ್ಲಾ
ಮೂಟೆ ಕಟ್ಟಿ ನೀರಿಗೆಸೆದೆ…
ಆವಿಯಾದ ನೀರು ಮೊದಲ ಮಳೆಯಾಗಿ
ಸುರಿದಾಗ ಕನಸಿನೂರಿನಲ್ಲಿ
ಮತ್ತೆ ನೆನಪಿನ ಚಿಗುರೆಲೆ
ಮೊಳಕೆಯೊಡೆಯಿತು….!!