ಆಟೋಗ್ರಾಫ್ -೧

ಆಟೋಗ್ರಾಫ್ -೧

ಗೆಳೆಯರೇ , ನನ್ನ ಜೀವನದಲ್ಲಿ ಮರೆಯಲಾರದಂಥಹ ಗೆಳೆಯರನ್ನು ನನಗೆ ಕೊಟ್ಟದ್ದು PUC ಯ ಕಾಲೇಜ್ ದಿನಗಳು. ಆ ದಿನಗಳಲ್ಲಿ ನಾವು ೪ ಆತ್ಮೀಯ ಮಿತ್ರರು ನಮ್ಮ ಗೆಳೆತನಕ್ಕೆ ಸಾಕ್ಷಿಯಾಗಿ ‘MASK ‘ ಎನ್ನುವ ಗುಂಪನ್ನು ಕಟ್ಟಿಕೊಂಡಿದ್ದೆವು .
‘M’uhammad Hussain
‘A’noop
‘S’hiva Prasad
‘K’amalesh

ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ನನ್ನ ಆಟೋಗ್ರಾಫ್ ಬುಕ್ಕಲ್ಲಿ ಬರೆದ ಬರಹಗಳು ಎಂದೂ ನನಗೆ ಬಹಳ ಆತ್ಮೀಯವಾದವು. ಅದನ್ನು ಇಲ್ಲಿ ಹಾಕದಿದ್ರೆ ನನ್ನ ನೆನಪಿನ ಒರತೆಯ ಅಕ್ಷರರೂಪವಾದ “ನೆನಪಿನ ಸಂಚಿ” ಪರಿಪೂರ್ಣವಾಗಲಾರದು.
ಮೊತ್ತ ಮೊದಲಾಗಿ ಆತ್ಮೀಯ ಮಿತ್ರ ಕಮಲೇಶ್ ನ ಬರಹ.

Dear Friend Hussain,

I ‘think’ you are the best friend I have ever met.
ನಾನು ಯಾಕೆ best ನ ನಂತರ ಹಾಗೆ ಮಾಡಿದ್ದೀನೆಂದು ನಿನಗರ್ಥವಾಗಿರಬಹುದು. ಅರ್ಥವಾಗುವುದು doubt . ಆದರೂ ……!!.
ಕಾಲೇಜಿನ ಪ್ರಾರಂಭದ ದಿನಗಳಲ್ಲಿ Philomena ದ normal ಪುಂಡು ಪೋಕರಿಯಂತೆ ಕಂಡು ಬರುತ್ತಿದ್ದ ನೀನು ಸ್ವಲ್ಪ ಸಮಯದ ನಂತರ ‘ಆ ವಿಷಯದಲ್ಲಿ’ (ಯಾವುದು ಅಂತ ದಯವಿಟ್ಟು ಕೇಳಬೇಡಿ !) specialist degree ಮಾಡಿದವನು ಎಂದು ತಿಳಿದ ಮೇಲೆ ನನಗಾದ ಸಂತೋಷ ಅಷ್ಟಿಷ್ಟಲ್ಲ. ಅನೂಪ್ ಹೇಳಿದಂತೆ ಆತ್ಮೀಯ ಗೆಳೆಯರು ಕಾಲೇಜ್ ದಿನಗಳ ಬಳಿಕ ಅಪರಿಚಿತರಂತೆ ವರ್ತಿಸುವುದು ಹೊಸತೇನಲ್ಲ . ನಮ್ಮ ವಿಷಯದಲ್ಲಿ ಹಾಗಾಗುವುದಿಲ್ಲ ಎಂದು ಭಾವಿಸುತ್ತೇನೆ . ಹಾಗೇನಾದ್ರೂ ಆದ್ರೆ…”ಓದ್ರೆ …………!!”.
ನೀನು ಬೇರೆ ಕಾಲೇಜಿಗೆ ಸೇರಿದ ಮೇಲೆ ನಿನ್ನ ‘March fast ‘ ಎಲ್ಲಿಂದ ಎಲ್ಲಿಯವರೆಗೆ ನಡಿತಾ ಉಂಟು ಅಂತ ದಯವಿಟ್ಟು ತಿಳಿಸು. ಹುಡುಗಿಯರೊಡನೆ ಅಧಿಕ ಪ್ರಸಂಗ ಮಾತನಾಡುವ ಕಲೆಯ ಮೇಲಿನ ನಿನ್ನ excellent hold ‘ನ್ನು ನಾನು ಮುಕ್ತ ಕಂಠದಿಂದ ಹೊಗಳುತ್ತೇನೆ. ದಯವಿಟ್ಟು MCA ಮಾಡಿ ದುಬೈಗೆ ಹೋಗುವ ಕನಸನ್ನು ಕಾಣಬೇಡ. ಅಲ್ಲಿ ಒದೆ ತಿಂದು Master of Computer Science ನ್ನು “Monda Crack Aada ” ಎಂದು ನೀನು ಬದಲಿಸಿಕೊಳ್ಳುವುದು ನನಗೆ ಇಷ್ಟವಿಲ್ಲ!. ಮತ್ತೆ ಕೆಲವರು ‘ Do continue Pranks’ ಎಂದು ಹೇಳಿ ನಿನ್ನನ್ನು ಪ್ರೋತ್ಸಾಹಿಸಿದ್ದಾರೆ. ಅದಕ್ಕೆ ಕಾರಣವೂ ಉಂಟು. ಆದರೆ ನಾನು ಹಾಗೆ ಮಾಡಬೇಡ ಎಂದು ಹೇಳುತ್ತೇನೆ.
ಚಿಕ್ಕ ಚಿಕ್ಕ ಭಾವನಾತ್ಮಕ ವಿಷಯಗಳನ್ನು ಮರೆಯಲು 2-3 ದಿನ ತೆಗೆದುಕೊಳ್ಳುವ ನಾನು 2 ವರುಷಗಳ ಕಾಲ ನಾವು ಮೂವರು[+] …’ಸಂಜೆ’ ಕಾಲೇಜ್ – ಬಸ್ ಸ್ಟಾಂಡ್ ನಡುವೆ ಕಳೆದ ಭಾವನಾತ್ಮಕ ರಸ ನಿಮಿಷಗಳನ್ನು ಮರೆಯುವುದು ಸಾಧ್ಯವೇ ಇಲ್ಲ. ನಮ್ಮಿಬ್ಬರ ಅಪೂರ್ವ ಗೆಳೆತನಕ್ಕೆ ನಮ್ಮಲ್ಲಿದ್ದ ಸಮಾನ ‘ಅಭಿರುಚಿ’ಗಳು ಕಾರಣವಿರಬಹುದು. ಸಮಾನತೆಯ ವಿಚಾರದಲ್ಲಿ ನಾವು ತಪ್ಪಿದ್ದರೆ ಅದು ಒಂದು ವಿಷಯದಲ್ಲಿ ಮಾತ್ರ, ಅದೇನೆಂದರೆ –“ಬಿದಿಗೆ ಚಂದ್ರಮ “ನನ್ನು ನೋಡುವುದು, ‘ನಿನಗೆ ಇಷ್ಟ ..ನನಗೆ ಕಷ್ಟ..!!’
ಕೊನೆಯ ಮಾತು:-
ಪುರಸಭೆ ಒಳಚರಂಡಿ ‘Drain’ನಂತಹ ನಿನ್ನ ‘Brain’ನನ್ನು ಪ್ರಿನ್ಸಿಪಾಲ್ ಹೀಯಾಳಿಸಿದಾಗ ಅವರನ್ನು ರೊಚ್ಚಿಗೆದ್ದು ಮಚ್ಚಿನಿಂದ ಕೊಚ್ಚಿ ಹಾಕಬೇಕೆಂದು ಅನ್ನಿಸ್ತು , ಆದ್ರೆ ‘ಸತ್ಯ’ಕ್ಕೆ ಬೆಲೆ ಕೊಡುವ ಅಂತ ಸುಮ್ಮನಾದೆ .
??????????

??????????

??????????

(ಇಲ್ಲಿ ಬರುವ ಪಾತ್ರಗಳು , ಸನ್ನಿವೇಶಗಳು ಕೇವಲ ಕಾಲ್ಪನಿಕ .. !, ನಿಜ ಜೀವನದ ವ್ಯಕ್ತಿ , ಘಟನೆಯೊಡನೆ ಸಾಮಿಪ್ಯವಿದ್ದರೆ ಅದು ಕೇವಲ ಕಾಕತಾಳೀಯ ಮಾತ್ರ !)


ಹೇಗಿದೆ ಹೇಳಿ