ನ್ಯಾನೋ ಕಥೆಗಳು

ಜಗದ ವಿ’ಚಿತ್ರಗಳು

ವಿಧಿ
ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ.
ಅಂದ ಹಾಗೆ ಆತ ಮಾವನ ಮನೆಗೆ ತಲುಪಿಲ್ಲವಂತೆ . ದಾರಿ ಮಧ್ಯೆ ಸಂಭವಿಸಿದ ಆಕ್ಸಿಡೆಂಟಲ್ಲಿ ಸತ್ತುಹೋದನಂತೆ.

ಅಭಿಪ್ರಾಯ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕನ್ನಡಿ ಹಿಡಿಯುವ ಟಿ .ವಿ ನೇರಪ್ರಸಾರ ಕಾರ್ಯಕ್ರಮವದು. ಪತ್ರಕರ್ತ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಜನರ ಅಭಿಪ್ರಾಯವನ್ನು ಕೇಳುತ್ತಿದ್ದನು.ಮುಂದಿನಿಂದ ಬಂದ ಐಶಾರಾಮಿ ಕಾರನ್ನು ತಡೆದು ನಿಲ್ಲಿಸಿ ಅಭಿಪ್ರಾಯ ಪಡೆಯಲು ಮುಂದಾದ. “ನಾವು ಸಾರ್ವಜನಿಕ ಬಸ್ಸುಗಳನ್ನು ಉಪಯೋಗಿಸಬೇಕು , ಸ್ವಂತ ವಾಹನವಿದ್ದರೆ ಶೇರಿಂಗ್ ವ್ಯವಸ್ಥೆ ಯನ್ನು ಪಾಲಿಸಬೇಕು” ಆತ ಮಾತು ಮುಂದುವರೆಸುತ್ತಿದ್ದಂತೆ ಪತ್ರಕರ್ತ ಕಾರಿನ ಒಳಗೆ ಇಣುಕಿದ. ಉಳಿದ ಸೀಟ್ ಗಳೆಲ್ಲ ಖಾಲಿಯಾಗಿತ್ತು…

ಬೆಲೆ
ಆತ ಆಗರ್ಭ ಶ್ರೀಮಂತ. ಬಡವರನ್ನು ಎಂದೂ ತನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.. ಅದರಿಂದ ತನ್ನ ‘ಬೆಲೆ’ ಕಡಿಮೆಯಾಗುತ್ತದೆ ಅಂತ ಹೇಳುತ್ತಿದ್ದ. ತನ್ನ ೪ ಅಂತಸ್ತಿನ ಮನೆಯ ‘ಗೃಹಪ್ರವೇಶ’ಕ್ಕೂ ಮೊನ್ನೆ ಮೊನ್ನೆ ನಡೆದ ಮಗಳ ಅದ್ದೂರಿ ‘ಮದುವೆ’ಗೂ ಊರಿನ ಯಾವುದೇ ಬಡವರನ್ನು ಆತ ಅಮಂತ್ರಿಸಿರಲಿಲ್ಲ.. ಆದರೆ ಪ್ರತೀ ಶುಕ್ರವಾರದ ನಮಾಜಿನಲ್ಲಿ ಆತನ ತಲೆ ಬಡವನೊಬ್ಬನ ಕಾಲ ಬುಡದಲ್ಲಿರುತ್ತಿತ್ತು..

ಬಡವ
ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರ ಮದುವೆಗೆ ಆತನ ಬಡತನ ಅಡ್ಡ ಬಂತು. ಅವಳ ತಂದೆ ಬೇರೊಬ್ಬ ಶ್ರೀಮಂತನಿಗೆ ಕೊಟ್ಟು ಮದುವೆ ಮಾಡಿಸಿದರು. ಮದುವೆ ಆದ ಮರುವರ್ಷವೇ ಆತನ ವ್ಯವಹಾರವೆಲ್ಲ ನೆಲಗಚ್ಚಿದವು.. ನೋಡ ನೋಡುತ್ತಲೇ ಆತ ದರಿದ್ರನಾದ.

ವಿಪರ್ಯಾಸ
ಎಕರೆ ಗಟ್ಟಲೆ ಭೂಮಿಯಲ್ಲಿ ವಿಸ್ತಾರವಾಗಿ ಹರಡಿರುವ ಗಗನ ಚುಂಬಿ ಕಟ್ಟಡ ಕೊನೆಯ ಅಂತಸ್ತಿನಲ್ಲಿ “ಗೋ ಗ್ರೀನ್ ” ಎಂಬ ಹಸಿರು ಪೋಸ್ಟರ್ ರಾರಾಜಿಸುತ್ತಿತ್ತು ..


Leave a Comment

ಹುಸೇನಿ ಪದ್ಯಗಳು - 3 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 3

ದೂರದಲ್ಲಿ ಅದೆಲ್ಲೋ
ನೀನು ಕಣ್ಣಿಗೆ ಕಾಡಿಗೆ
ತೀಡಿರಬೇಕು …
ಇಲ್ಲಿ ಆಗಸದ
ತುಂಬೆಲ್ಲ
ಕಾರ್ಮೋಡ….**********

ಎಲ್ಲೆಲ್ಲೋ
ಹುಡುಕಿದೆ
ನಿನ್ನ ..
ನೀನು ಮಹಾ ಕಳ್ಳಿ,
ಈ ಕವಿತೆಯಲ್ಲೆ
ಅಡಗಿದಿಯಲ್ಲೇ..?

**********

ಅಬ್ಬಾ…
ಹೊರಗಡೆ
ಚುಮು ಚುಮು ಚಳಿ..
ನಾ ನಿನ್ನ
ನೆನಪ ಹೊದ್ದು
ಬೆಚ್ಚಗೆ ಮಲಗಿದೆ..

**********

ಇಂದು ನನ್ನ ಮೇಲೆ
ನೀನಿತ್ತ
ಗುಲಾಬಿ
ಮಾತ್ರ ಸಾಕು
ನಾನು
ಪುನರ್ಜನ್ಮಿಸಲು….


Leave a Comment

ನ್ಯಾನೋ ಕಥೆಗಳು

ನೆನಪು

ತುಂಬಾ ವರ್ಷಗಳ ನಂತರ ಶಾಪಿಂಗ್ ಮಾಲಲ್ಲಿ ಆತ ಅಚಾನಕ್ಕಾಗಿ ಸಿಕ್ಕಿದ .”ರ್ರೀ ಇವರು ನಮ್ ಕ್ಲಾಸ್ ಮೇಟು .. ಡಿಗ್ರೀಲಿ ನಾವು ಒಟ್ಟಿಗಿದ್ದೆವು ” ಆಕೆ ಆತನನ್ನು ತನ್ನ ಗಂಡನಿಗೆ ಪರಿಚಯಿಸಿದಳು.. ಅಂದು ರಾತ್ರಿ ಆಕೆಗೆ ನಿದ್ದೆ ಬರದಾಗಿ, ಆತನನ್ನು ನೆನಪಿಸಿ ನಿದ್ದೆಯಿಲ್ಲದೆ ಕಳೆಯುತ್ತಿದ್ದ ಕಾಲೇಜ್ ದಿನಗಳು ಸುಮ್ಮನೆ ನೆನಪಾದವು.


Leave a Comment

ಹುಸೇನಿ ಪದ್ಯಗಳು - 2 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 2

ನನ್ನ ಎಷ್ಟು
ಪ್ರೀತಿಸ್ತೀಯ..?ಉತ್ತರಕ್ಕಾಗಿ
ಪದಗಳು
ಸಾಲದೆ
ಆತ
ಮೌನವಾಗಿದ್ದ…

++++++++++

ನಿನಗೆ
ಅವಳು
ಕೊಟ್ಟ
ದುಬಾರಿಯಾದ
ಉಡುಗೊರೆ
ಯಾವುದು
………
ಕಣ್ಣೀರು!!

++++++

ನೀ
ಕೊಟ್ಟ
ನೋವನ್ನು
ನನ್ನ
ಒಡಲಾಳಕ್ಕೆ
ಇಳಿಸಿದ್ದೇನೆ
ಅದು
ಕವಿತೆಯಾಗಿ
ಆವಿಯಾಗುತಿದೆ..

+++++

ಅಚಾನಕ್ಕಾಗಿ
ಸಿಕ್ಕ ಅವನು
ಕೇಳಿದ
ಹೇಗಿದೆ
ನಿನ್ನ ಜೀವನ..
ನಸುನಗುತ್ತ ಆತ
ಉತ್ತರಿಸಿದ
ಅವಳು ಚೆನ್ನಾಗಿದ್ದಾಳೆ!

Leave a Comment

ನ್ಯಾನೋ ಕಥೆಗಳು

ಅಮರ ಪ್ರೇಮ

ಆಕೆ ಆತನನ್ನು ತೊರೆದು ಶ್ರೀಮಂತನೋಬ್ಬನನ್ನು ಮದುವೆಯಾಗಿದ್ದಳು. ಆಕಸ್ಮಿಕವಾಗಿ ಆತ ಎದುರಿಗೆ ಸಿಕ್ಕ. ‘ನಾನು ಸಿಗದಿದ್ದರೆ ಬದುಕಿರಲಾರೆ ಅಂತಿದ್ದೆ .. ಆದ್ರೆ ಆಗಲೂ ಬದುಕಿದ್ಯಾ? ಆಕೆ ಕುಟುಕಿದಳು. ‘ಎಲ್ಲಿ ಬದುಕಿದ್ದೇನೆ.. ನೀನು ಜೀವ ತೆಗೆದ ಶವವನ್ನು ಹೊತ್ತು ತಿರುಗಾದುತ್ತಿದ್ದೇನೆ ‘ ಆತ ನಿರ್ಲಿಪ್ತನಾಗಿ ಉತ್ತರಿಸಿ ಮುನ್ನಡೆದ.


Leave a Comment

ನ್ಯಾನೋ ಕಥೆಗಳು

ಸಾವು

ಅವನೊಬ್ಬ ಸಾಧ್ವಿ . ಬದುಕುವ ಕಲೆಯನ್ನು ಬೋಧಿಸುತ್ತಿದ್ದ.. ದೇಶ ವಿದೇಶದಲ್ಲಿ ಸಾವಿರಾರು ಶಿಷ್ಯಗಣವನ್ನೂ ಹೊಂದಿದ್ದ. ಕೊನೆಗೊಮ್ಮೆ ಆತ ಸತ್ತ. ಅಂದ ಹಾಗೆ ಸಾವು ಸಹಜವಲ್ಲಂತೆ.. ಆತ್ಮಹತ್ಯೆಯಂತೆ..!


Leave a Comment

ನ್ಯಾನೋ ಕಥೆಗಳು

ಸಂಸ್ಕಾರ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಇಲ್ಲದಿದ್ರೆ ಹೀಗೆ ಅಪ್ಪ ಅಮ್ಮನನ್ನು ಬಿಟ್ಟು ಓಡಿ ಹೋಗ್ತಾರೆ. ನನ್ನ ಮಗಳನ್ನು ನೋಡಿ.. ದಿನಕ್ಕೊಂದು ಸಲ ದೇವಸ್ಥಾನಕ್ಕೆ ಹೋಗ್ತಾಳೆ.. ಅವಳನ್ನು ನೋಡಿ ಕಲಿಬೇಕು. ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋದ ಹುಡುಗಿಯ ಮನೆಯಲ್ಲಿ ಸೇರಿದ ಜನರೆದುರು ಆಕೆ ಬಡಬಡಿಸುತ್ತಲೇ ಇದ್ದಳು. ಸ್ವಲ್ಪ ದಿನ ಕಳೆಯಿತು.. ಆಕೆಯ ಮಗಳು ದೇವಸ್ಥಾನದ ಪೂಜಾರಿ ಜೊತೆ ಓಡಿ ಹೋದಳು…


Leave a Comment

ನ್ಯಾನೋ ಕಥೆಗಳು

ಪ್ರೇಮಿ

ಅವನೊಬ್ಬ ಅಮರ ಪ್ರೇಮಿ. ಅವಳ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾದುಕುಳಿತ.. ಅವನ ಮಾತಲ್ಲೂ ಅವಳೇ ಮೌನದಲ್ಲೂ ಅವಳೇ . ಅವಳಾಡಿ ಹೋದ ಮಾತನ್ನು ,ಹಾಡನ್ನೂ ಬಡಬಡಿಸುತ್ತಿದ್ದ.. ಜಗದ ಪಾಲಿಗೆ ಈಗ ಅವನೊಬ್ಬ ಹುಚ್ಚ.


Leave a Comment

ಹುಸೇನಿ ಪದ್ಯಗಳು - 1 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 1

ನಾನು
ಪ್ರೀತಿಸುವುದೇ
ತಪ್ಪಾದರೆ,
ಆ ತಪ್ಪನ್ನೂ
ನಾನು
ತುಂಬಾ
ಪ್ರೀತಿಸುತ್ತೇನೆ!*******ಬಯಕೆಗಲೇ
ಇಲ್ಲದ
ಜೀವಕ್ಕೆ
ಕನಸಾದೆ
ನೀನು..

ಕನಸ್ಸಲ್ಲಿ
ಎಲ್ಲವೂ
ಬಂದು
ಹೋಗುವುದಂತೆ!

*******

ಗೆಳತೀ,
ನೀನಿಲ್ಲದೆ
ಮನದ
ಭಾವವೆಲ್ಲ
ಮಂಜಾಗಿದೆ..
ಒಮ್ಮೆ
ಬಂದು
ನಿನ್ನುಸಿರಿನ
ಬಿಸಿನೀಡು
ಅದು ಕರಗಿ
ನೀರಾಗಿ ಹರಿಯಲಿ..

*******

ನಿನ್ನ
ಕಣ್ಣಿಂದ
ಉದುರುತ್ತಿರುವ
ಹನಿ ಮುತ್ತು..
ಅದನು ಮಾತ್ರ
ನನ್ನದಾಗಿ
ತೆಗೆದುಕೊಳ್ಳಲೇ..?

*******

ನೆನ್ನ ನೆನಪಿನ
ಕಣ್ಣೀರನ್ನು
ಎದೆಯ ಮೇಲೆ
ಇಳಿ ಬಿಟ್ಟಿದ್ದೇನೆ
ಆದರೂ
ಹೊತ್ತಿ ಉರಿದ
ಎದೆಯ ಕಾವು
ನಿಂತಿಲ್ಲ

*******

ಇನ್ನೂ
ಎಸಲೊಡೆದು
ಹೂವು
ಅರಳಬಹುದು..
ಉದುರಿ ಹೋದ
ಹೂವಿನ ಛಾಯೆ
ಮಾತ್ರ ಹೊತ್ತು!

*******

ನೆನಪೇ…
ನನ್ನನ್ನು
ಮಲಗಲು ಬಿಡು
ಕನಸಲ್ಲಾದರೂ
ಅವಳನ್ನೊಮ್ಮೆ
ನೋಡಬೇಕು..!

*******

ಕಣ್ಣೀರು
ಪ್ರೀತಿಯೇ?
ಗೊತ್ತಿಲ್ಲ..
ನಿನ್ನ ನೆನಪು
ಮೂಡಿದಾಗೆಲ್ಲ
ಕಣ್ಣೀರು ಉಕ್ಕಿ ಬರುತಿದೆ..!

*******

ಕನಸಿಲ್ಲದವನಿಗೆ
ಕನಸು ಕಾಣಲು
ಕಲಿಸಿದ ಅವಳನ್ನೇ
ಕಳೆದು ಕೊಳ್ಳಲು
ಏನೂ ಇರದ
ಅವನು ಕಳೆದು ಕೊಂಡದ್ದು!

*******

ಅವರಿಬ್ಬರ
ಕಣ್ಣು ಕಣ್ಣು
ಕಲೆತಾಗ
ಹೊಟ್ಟೆ ಕಿಚ್ಚಾಗಿ
ಮಾತು ನಡುವೆ ಬಂತು!


Leave a Comment

ನೆರಳ ಛಾಯೆ

ನೆರಳ ಛಾಯೆ


ನಿನ್ನ ಪ್ರೀತಿಯ ನೆರಳ
ಛಾಯೆಯನ್ನು ಮಾತ್ರ
ಬಯಸಿದ್ದೆ ನಾನು..

ಆದರೆ ಮತ್ತೆಂದೋ
ಆ ಪ್ರೀತಿಯ ಬಿಸಿಲ ಬೇಗೆಯಲ್ಲಿ
ನನ್ನ ನೆರಳು ಕೂಡ
ಕರಗಿ ಹೋದುದು
ತಿಳಿಯದಾದೆನು..

Leave a Comment