ನೆನಪಿನ ನಲ್ಲೆಯೊಡನೆ ಪಿಸುಮಾತು · ಹುಸೇನಿ ಪದ್ಯಗಳು - 16 · ಹುಸೇನಿ_ಪದ್ಯಗಳು

ನೆನಪಿನ ನಲ್ಲೆಯೊಡನೆ ಪಿಸುಮಾತು… (ಹುಸೇನಿ ಪದ್ಯಗಳು – 16)


ನಿನ್ನ ಮೌನ
ದೊಳಗಿನ ಮಾತಿನ
ಅರ್ಥ ಹುಡುಕುವುದರಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ…
__

ಇನ್ನೂ ಒಂದು ಜನ್ಮ
-ವಿರುವುದಾದರೆ
ಹಗಲಿರುಳೆನ್ನದೆ
ನಿನ್ನ ಕೆನ್ನೆಯ ಚುಂಬಿಸೋ
ಮುಂಗುರಳಾಗಿ
ಹುಟ್ಟಬೇಕೆಂಬ ಆಸೆ ಕಣೇ..!
__

ಹೂತು ಹಾಕಿದ್ದ
ಆ ನಿನ್ನ ಬೇಡದ
ನೆನಪುಗಳು
ನಿನ್ನೆಯ ಮಳೆಗೆ
ಟಿಸಿಲೊಡೆಡಿವೆ…
__

ಹೇಯ್ ಮಾತಿನಮಲ್ಲಿ,
ಆ ನಿನ್ನ ಕಣ್ಣಂಚಿನ ಕುಡಿ
ನೋಟಕು , ಗಾಢ ಮೌನಕೂ
ಏನೋ ಹೇಳಕ್ಕಿದೆಯಂತೆ
ಕೊಂಚ ಅವಕ್ಕೂ ಮಾತು
ಕಲಿಸಬಾರದೇ …?
__

ನಿನ್ನ ಕಣ್-ಸನ್ನೆಯ
ಭಾಷೆಯ ಮೀರಿಸದ
ಹೊರತು
ಭಾವನೆಗಳಿಗೆ ಅಕ್ಷರದ(ಭಾಷೆಯ, ಮಾತಿನ)
ರೂಪ ಕೊಡುವವರ
ಬಗ್ಗೆ ನನಗೆ
ಪರಿತಾಪವಿದೆ…
__

ಮಳೆ ನಿಂತರೂ
ತೊಟ್ಟಿಕ್ಕುವ
ಹನಿ,
ನೀನು..

Leave a comment

13 thoughts on “ನೆನಪಿನ ನಲ್ಲೆಯೊಡನೆ ಪಿಸುಮಾತು… (ಹುಸೇನಿ ಪದ್ಯಗಳು – 16)

  1. ಹೂತು ಹಾಕಿದ್ದ
    ಆ ನಿನ್ನ ಬೇಡದ
    ನೆನಪುಗಳು
    ನಿನ್ನೆಯ ಮಳೆಗೆ
    ಟಿಸಿಲೊಡೆಡಿವೆ ಕಣೇ…

    Yava nenapugalannu Hutu Haakabedi…..Preetisidavara nenapu sihiyaagirli or Kahiyaagirali…
    Adara anubhava aa samayakke maatra meesalu alla alva….

    Like

  2. ಎಲ್ಲ ಬಿಡಿ ಕವಿತೆಗಳೂ ತುಂಬಾ ಸೊಗಸಾಗಿವೆ.
    Ultimate: ಮಳೆ ಹನಿಯದು.

    Like

  3. ಮಾತು ಮೌನ ಹೃದಯದ ನೋವು ಹೇಳಲು ತುಟಿ ವಳಗಿನ ನಾಲಿಗೆ ಮಾತಡುತ್ತಿಲ್ಲ.

    Like

Leave a comment