ಅನಾಥ ಶವಗಳು... · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 40


nenapina-hani

ಈ ತೀರದಲೆಗಳಿಗೂ ನಿನ್ನದೇ
ಖಯಾಲಿ,
ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಸೋಕಿ
ಮುದ್ದಿಸಿ ಮುಗುಳ್ನಗುತ್ತದೆ ..~

ಅಪ್ಪಿಬಿಡು ಒಮ್ಮೆ
ಈ ಲೋಕವೇ ನನ್ನೊಳ ಮೂಡುವಂತೆ;
ಪ್ರತಿ ಅಣುರೇಣು
ಛಿದ್ರಗೊಂಡು
ಬ್ರಹ್ಮಾಂಡ ಮರುಹುಟ್ಟು ಪಡೆವಂತೆ …

~

ಇಷ್ಟಿಷ್ಟೇ ಕಾಪಿಟ್ಟ
ನಿನ್ನ ನೆನಪಿನ ಓಜಸ್ಸ ಒಟ್ಟು ಮಾಡಿ
ಚಂದಮಾಮನಿಗೆ ಕಡ ಕೊಟ್ಟಿದ್ದೇನೆ
ಹುಡುಗಿ,
ಸಂಶಯವಿದ್ದರೆ ನಿನ್ನ
ಮನೆಯಂಗಳದ ಅಕಾಶವ ನೋಡು….

~

ಮತ್ತೆ ನೀರವ ಮುಸ್ಸಂಜೆ,
ಆಕಾಶದಲ್ಲೇ ಉಳಿದ ಮೋಡದ ತುಂಡು,
ಖಾಲಿ ಬೆರೆಳ ಸಂಧಿ,
ಚಂದ್ರನಿಗೆ ಪ್ರೀತಿ ಕಲಿಸಬೇಕು
ಬಂದುಬಿಡೇ

ಹುಸೇನಿ ~

Leave a comment

5 thoughts on “ಹುಸೇನಿ ಪದ್ಯಗಳು – 40

  1. ನಂಗೆ ಕನ್ನಡಾ ಬರೆಯೊ ಚಟಾ
    ನನ್ನವಳಿಗೆ ಅದನಾ ಬಿಡಿಸೊ ಹಟಾ
    ನನ್ನ ಚಟ್ಟಾ ಕಟ್ಟಿದರು ಬಿಡಲಾ ನನ್ನ ಚಟಾ ನನ್ನ ಉಸಿರು ಹೋದರು ನನ್ನ ಎದೆಯಲಿ ಹಾರಲಿ ಕನ್ನಡದ ಬಾವುಟಾ
    Image may contain: 1 person, text

    Like

Leave a comment