ಹುಸೇನಿ ಪದ್ಯಗಳು – 42 · ಹುಸೇನಿ_ಪದ್ಯಗಳು

ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]



ಇಲ್ಲಿ ಎಲ್ಲವೂ ಸಹಜ,
ಇಳಿಸಂಜೆಯಲ್ಲಿ
ಮಣಗುಡುವ ನಿನ್ನ ನೆನಪುಗಳನು
ಬಿಟ್ಟು..

~

ಒಂದಿಷ್ಟು ಪ್ರೀತಿ ಬೀಜಗಳಿವೆ
ನಿನ್ನ ಮನದ ಮಣ್ಣ
ಹದ ಮಾಡಿಕೋ;

~

ಎಲ್ಲಾದಕ್ಕೂ ಕಾರಣ ಹೇಳಲಾಗದು;
ವಸಂತ ಕಾಲದಲ್ಲಿ ಭೂಮಿ
ಮರುಹುಟ್ಟು ಪಡೆಯುವುದು
ಪ್ರಕೃತಿ ನಿಯಮ ..

~

ಮನಸು ತೆರೆದುಕೋ;
ಸಹ್ಯಕೆ ಮುನಿಸು ತೋರುವ
ತಿರುವುಗಳಾಚೆ
ತುಂಬಾ ಖಾಲಿ ಅವಕಾಶ..

~

ಸುಲಭಗೊಳಿಸು;
ಸೋಲು,ಗೆಲುವುಗಳೆರಡೂ
ನಿನ್ನದೇ

~

ಸ್ತ್ರೀ ಪುರುಷನ ರಕ್ಷಣೆಯಲ್ಲಿ ಎಂದ
ಧರ್ಮ ಪಂಡಿತ
ಅವಳ ಬರಿ ನಿಟ್ಟುಸಿರ
ಕಾವಿಗೇ ಬೆಚ್ಚುವನು;

ಹುಸೇನಿ ~

14 thoughts on “ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]

  1. Very nice hussain bro nanu blogge bandadu 2017 rail aga nivu blog nali iralilla thumba bejar aytu mate bandidake dhanyavadagalu anna

    Like

      1. 1 year ninda matadabeku anta ankonde adre niv blog ge barle illa adake thumba bejar patte adake evag matadabeku anta ansatide anna pls sadya adre pls just one miss call athava one msg pls anna nim tamma anta replay madi its my huble request

        Like

  2. ತುಂಬಾ ದಿನಗಳ ನಂತರ ನಿಮ್ಮ ಕವನ👌
    ಬ್ಲಾಗ್ ಬರೆಯೋದು ಬಿಡಬೇಡಿ. ಇದು ಜೀವ ಸಂಜೀವಿನಿ. ಬಹಳ ಖುಷಿ ಆಯಿತು. ಹೀಗೆ ಬರೆಯುತ್ತಿರಿ.

    Like

  3. ನಾನು ಬೇಜಾರ್ ಆದಾಗ…ಜೀವಂತಿಕೆ ಕಳೆದು ಕೊಳ್ಳುತ್ತೇವೆ ಅನ್ನಿಸಿದಾಗ ನಿಮ್ಮ ಬ್ಲಾಗ್ ಕಡೆ ಕಡೆ ಕಣ್ಣು ಹಾಯಿಸಿ ಸಾಂತ್ವನ ಪಡೆಯುತ್ತೇನೆ.

    Like

Leave a comment