ಹುಸೇನಿ ಪದ್ಯಗಳು - 14 · ಹುಸೇನಿ_ಪದ್ಯಗಳು · Honey'ಗವನ

Honey’ಗವನ (ಹುಸೇನಿ ಪದ್ಯಗಳು – 14)



1.
ನಿನ್ನ ಸಾಂಗತ್ಯದಿ
ನನ್ನೊಳಗೆ ಮೂಡುವ
ಸಾವಿರ ಭಾವನೆಯ
ಬಣ್ಣದೋಕುಳಿ
ನನ್ನ ಹೋಳಿ ..
__
2.
ಇಂದೂ ಕಾದು ಕುಳಿತಿದ್ದೇನೆ
ನೀ ಬಿಟ್ಟು ಹೋದ ಈ
ದಡದಿ,
ನನ್ನದು ಓಡೋಡಿ
ಬರುವ ಅಲೆಯ ನಿಯತ್ತು..!
__
3.
ನನ್ನ ಕಪ್ಪು-
ಬಿಳುಪು ಕನಸುಗಳಿಗೆ
ನೀ ಹರವಿಟ್ಟ ಬಣ್ಣ
ಮಾಸಿ ಹೋಗಿದೆ ಗೆಳತೀ ..
__
4.
ನಿನ್ನ ಕಾಲ್ಗೆಜ್ಜೆ
ಮಣಿಗಳಿಗೆ
ನನ್ನ ಕನಸನ್ನು
ಕಟ್ಟಿದ್ದೇನೆ…
ಜೋಪಾನ ಹುಡುಗಿ…
__
5.
ಅಲೆಗೆ ದಡ ಸೇರುವ ತವಕ,
ನಾ ಬರೆದ ನಿನ್ಹೆಸರ
ಅಳಿಸಿತ್ತು….
__
6.
ನೀನರಿಯದೆ ನಿನ್ನ
ಪ್ರೀತಿಸುವುದರಲ್ಲೂ
ಸುಖವಿದೆ;
ಸುರಿಯದ ಮಳೆಯಲ್ಲಿ
ನೆನೆಯುವ ಸುಖ..!


ನಿಮ್ಮ ನಲ್ನುಡಿ

9 thoughts on “Honey’ಗವನ (ಹುಸೇನಿ ಪದ್ಯಗಳು – 14)

  1. ಎಲ್ಲ ಹನಿಗಳು ಹೂವಿನ ಮೇಲಿನ ಮಂಜಿನ ಹನಿಯಷ್ಟೇ ಸೊಗಸಾಗಿದೆ

    (ತುಂಬಾ ಇಷ್ಟವಾದ ಸಾಲುಗಳು.
    ಇಂದೂ ಕಾದು ಕುಳಿತಿದ್ದೇನೆ
    ನೀ ಬಿಟ್ಟು ಹೋದ ಈ
    ದಡದಿ,
    ನನ್ನದು ಓಡೋಡಿ
    ಬರುವ ಅಲೆಯ ನಿಯತ್ತು..!)

    Like

  2. Dear,

    I saw all your nenapina sanchi quotes, it’s really super, great & i asked one thing dear…. are you lover failure boy!!!….. plz clarify my doubt bcoz so many quotes related this matter…. i am waiting … don’t neglect dear pls…..

    Enthi
    Nimmavalu

    Like

    1. Nowadays there is no place for Kannada especially in Bangalore. So many people they will think in Kannada but they will express their feelings in English. you are great hussain!!!!!!…………..

      Like

Leave a comment