ಹುಸೇನಿ ಪದ್ಯಗಳು - 9 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 9

ಬತ್ತಿದ ನನ್ನೆದೆಯೊಳು
ಬಿಕ್ಕಳಿಸುತಿವೆ
ನಿನ್ನ ನೆನಪುಗಳು …!

ಸಾವಿರ ಕೋಟಿ ನಕ್ಷತ್ರಗಳಿದ್ದರೂ
ರಾತ್ರಿಯ ಸೊಬಗು
ಚಂದ್ರನಲ್ಲವೇ….?

ನಾ ನಿನ್ನ ಕಂಡಾಗಲೇ
ಹೃದಯ ಜಾರಿದ್ದು ,ಮನಸು ಮಗುವಾಗಿ
ನಿನ್ನನೇ ಬೇಡಿದ್ದು…!

ನಿನ್ನ ನೆನಪನ್ನು
ಓಲೆ ಮೇಲೆ ಚೆಲ್ಲ ಹೊರಟಾಗಲೇ
ಅಕ್ಷರಗಳು ಪದವಾಗದೆ ಪ್ರತಿಭಟಿಸಿದ್ದು!

ನೀನಿತ್ತ ನೋವ ನೆನೆದು
ಮರುಗಿದಾಗಲೇ
ನನ್ನೆದೆ ನಿನ್ನ ಹೆಗಲ ಬಯಸಿದ್ದು..!


Leave a Comment

ಕನ್ನಡ ಬ್ಲಾಗಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಹುಸೇನಿ ಪದ್ಯಗಳು - 7 · ಹುಸೇನಿ_ಪದ್ಯಗಳು

ಮೂರೇ ಮೂರು (ಹುಸೇನಿ ಪದ್ಯಗಳು – 7)


ನಿನ್ನ ಮಾತಿಗಿಂತ
ಮೌನವೇ ಎನಗಿಷ್ಟ..
ಮೌನದೊಳು ನೀನಾಡದ
ಅದೆಷ್ಟು ಮಾತುಗಳು…!!೨
ಗೆಳತೀ ..
ಅದೋ ಅಲ್ಲಿ ನೋಡು..
ಚಂದಿರ..!
ಬೆಳದಿಂಗಳಿರಬಹುದು!
ಅವನಲ್ಲೂ ನಿನ್ನ ಅದೇ ಕಾಂತಿ..!


ಪ್ರೀತಿ ನನಗೆ ಎಲ್ಲವನ್ನೂ
ಕೊಟ್ಟಿತು
ನಿನ್ನ ಹೊರತಾಗಿ…!


Leave a Comment

ಹುಸೇನಿ ಪದ್ಯಗಳು - 6 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 6

ನಿನ್ನ ನೆನಪಿನಿಂದ
ಹುಟ್ಟಿದ ಈ
ಕವನ
ನಿನ್ನದೋ
ನನ್ನದೋ ..
ಗೊಂದಲವಿದೆ!
———
ನಿನ್ನ ಎದೆಯಾಳದ
ಹಂದರಕ್ಕೆ
ಈಜು ಬಾರದೆ
ಇಳಿದು
ದಿಕ್ಕಾಪಾಲಾದ
ನನ್ನ ಸ್ಥಿತಿಗೆ
ಪರಿಭ್ರಮಿಸುತ್ತೇನೆ…
ಕೆಲವೊಮ್ಮೆ
ಸಂಭ್ರಮಿಸುತ್ತೇನೆ..!
———
ನೀ ನನಗೆ
ನಷ್ಟವಾಗಬಹುದು ..
ಎಂದಲ್ಲ..
ನಾನಿನಗೆ
ನಷ್ಟವಾದರೆ
ನನ್ನಷ್ಟು ನಿನ್ನ
ಯಾರು ತಾನೇ
ಪ್ರೀತಿ ಮಾಡಿಯಾರು
ಎಂಬ ಭಯವಿದೆ….!
———
ನಿನ್ನೊಲುಮೆಯ
ರಾಗವನ್ನು
ಪದಗಳಲ್ಲಿ
ಕಟ್ಟಿ ಹಾಕುವ
ವ್ಯರ್ಥ ಪ್ರಯತ್ನ
ಈ ಕವನ
———
ನಿನ್ನ ಕಾಡುವ
ನೆನಪುಗಳಿಗೆ
ಲಗಾಮು ಹಾಕುವ
ಪ್ರಯತ್ನದಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ..
———


Leave a Comment

ಕೊಲ್ಲುತಿದೆ..

ಕೊಲ್ಲುತಿದೆ..

ನೀ ಕೊಟ್ಟ ನೋವನ್ನು
ಎದೆಯಾಳದಲ್ಲಿ
ಅಡಗಿಸಿದ್ದೆ..
ಅದು ನಿನ್ನ ಕೊನೆಯ
ಉಡುಗೊರೆಯೆಂದು
ಸಂಭ್ರಮಿಸಿದ್ದೆ..
ಈಗ ನೋಡು
ಅವು ಕೊಳೆತು
ಕೊಲ್ಲುತ್ತಿವೆ …


Leave a Comment

ಹಿಂಬಾಲಿಸದೆ ಬಿಟ್ಟಿತೇ?

ಹಿಂಬಾಲಿಸದೆ ಬಿಟ್ಟಿತೇ?

ಇನ್ನು ನನ್ನ ಜೀವನ ದಾರಿಯಲ್ಲಿ
ನಿನ್ನ ಹೆಜ್ಜೆ ಗುರುತುಗಳು ಕಾಣದು!

ಆದರೆ
ನನ್ನ ಮನಸ್ಸಿನ ಹಾದಿಯಲ್ಲಿ
ಆಳಕ್ಕಿಳಿದು ಹೋದ ಕನಸುಗಳ
ನೋವು ..ನನ್ನನ್ನು
ಹಿಂಬಾಲಿಸದೆ
ಬಿಟ್ಟಿತೇ?


Leave a Comment

ಉಳಿಸು ಕಣೆ.. ನನ್ನ ಪ್ರೀತಿಯ.. · ಮನಸಿನ ಹಾ(ಪಾ)ಡು

ಉಳಿಸು ಕಣೆ.. ನನ್ನ ಪ್ರೀತಿಯ..

ಗೆಳತೀ.. ಮರೆಯಾದೆ ನೀನು..
ಮರಳಿ ಬರಬಾರದೇ…?

ತುಡಿತದೆದೆಯ ಬಡಿತದಲೂ
ತಡವರಿಸುವ ಕನಸಲೂ
ದೇಹದ ಸಕಲ ನರ ನಾಡಿಯಲೂ
ತುಂಬಿರುವೆ ನೀನು

ಹೆಸರಿಲ್ಲದೆ ಅಳಿದು ಹೋದ ಬಂಧವಿದು
ಹೊಸ ಹೆಸರ ಕೊಡಬೇಕು..
ಆ ಹೆಸರ ನಾ ಕೂಗಿ ಕರೆಯಲು
ಓ ಎನುತ ನೀನೋಡಿ ಬರಬೇಕು

ನಿನ್ನ ಸೆಳೆತವಿರದ ಕ್ಷಣವಿಲ್ಲ
ನಿನ್ನ ನೆನಪಿರದ ದಿನವಿಲ್ಲ..
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ

ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಉಳಿಸು ಕಣೆ.. ನನ್ನ ಪ್ರೀತಿಯ
ಅಲ್ಲ ನನ್ನ ಜೀವವ.. ಜೀವನವ..!

ಮನಸಿನ ಹಾ(ಪಾ)ಡು · ಶುಭವಾಗಲಿ ನಿನಗೀದಿನ..!

ಶುಭವಾಗಲಿ ನಿನಗೀದಿನ..!


                         ಸೂರ್ಯನ ಪ್ರೀತಿಗೆ ಸೋತು
                         ಅರಳಿನಿಂತ ಸೂರ್ಯಕಾಂತಿಯ ಘಮೆ..
                         ಜೊತೆಗೆ ಮಳೆ ಹನಿಯ ತುಂತುರು…
                         ಹಕ್ಕಿಗಳ ಕಲರವ..ಜಿಗಿ ಹುಳಗಳ ಝೇಂಕಾರ..
                         ಆಯಿತು ಹೊಸ ಕನಸುಗಳ ಶುಭೋದಯ…!

                         ಮತ್ತೆ ಬಂದಿದೆ ಹೊಸ ಚೈತನ್ಯದ ನವ ದಿನ
                         ಹೊಸ ಬಯಕೆ ಹೊಸ ಕನಸುಗಳ ನವ ಜೀವನ..!
                         ಮುಂಜಾನೆಯ ಸವಿಯಲಿ ಮುಪ್ಪೂ ಯವ್ವನ!
                         ಹೊರಡು ನೀನು,ಶುಭವಾಗಲಿ ನಿನಗೀದಿನ..!

                         ಕಂಡ ಕನಸುಗಳ ನನಸಾಗಿಸೋ ಛಲ
                         ನಿನ್ನೆಗಳು ಕೊಟ್ಟ ನೋವನು ಮರೆಯುವ ಬಲ
                         ಸಾಧನೆಯ ಹಾದಿಯಲಿ ಮುನ್ನೇರುವ ಹಂಬಲ
                         ಕೊಡಲಿ ಈ ಹೊಸ ದಿನದ ರಾಶಿ ಫಲ!

                         ಹೊಸ ಕನಸ ಹೊತ್ತು ಸೂರ್ಯ ಏರಿದ್ದಾನೆ ಮೂಡಣ..
                         ಸಾಧನೆಯ ಎವರೆಸ್ಟ್ ಏರಬೇಕು.. ತೊಡು ನೀ ಪಣ!
                         ಗುರಿಯತ್ತ ಸಾಗಲಿ ನಿನ್ನ ಮುಂದಿನ ಪಯಣ..
                         ಸೋಲಿದೆ.. ಆದರೆ ಗೆಲ್ಲಬೇಕಿದೆ.. ಅದುವೇ ಜೀವನ..!
                         ಹೊರಡು ನೀನು,ಶುಭವಾಗಲಿ ನಿನಗೀದಿನ..!

ನೀ ನೆನಪಾಗಲು... · ಮನಸಿನ ಹಾ(ಪಾ)ಡು

ನೀ ನೆನಪಾಗಲು…

ಮತ್ತೆ ಯಾಕೋ ನೀ ನೆನಪಾಗಲು..

ಕಮರಿ ಹೋದ  ಕನಸುಗಳು
ಮತ್ತೆ ಬಂದು ಅಣಕಿಸಿದಂತಾಯಿತು…

ಬತ್ತಿ ಹೋದ ಕಣ್ಣ ಗುಡ್ಡೆಗಳಲ್ಲಿ
ಮತ್ತೆ ನೀರಿನ ಆರ್ದ್ರತೆ ಪುಟಿದಂತಾಯಿತು..

ಅರ್ಧ ಕಟ್ಟಿದ್ದ ಕನಸೀಗ
ಕೈ ಬೀಸಿ ಕರೆದಂತಾಯಿತು…

ಅರ್ಧಕ್ಕೆ ನಿಲ್ಲಿಸಿದ್ದ ಕವನವೀಗ
ಮತ್ತೆ ಸೆಳೆದಂತಾಯಿತು

ಒಡೆದು ಚೂರಾದ ಹೃದಯಕ್ಕೆ
ಮತ್ತೆ ಈಟಿಯಿಂದ ತಿವಿದಂತಾಯಿತು…

ಬಯಕೆಗಳೇ ಇಲ್ಲದ ಜೀವಕೆ
ಮತ್ತೆ ಸಾವಿನ ಆಸೆ ಮೂಡಿಸಿದಂತಾಯಿತು…!


ಹೇಗಿದೆ ಹೇಳಿ

ಜಡ ಮಾತ್ರ ನನ್ನದು...! · ಮನಸಿನ ಹಾ(ಪಾ)ಡು

ಜಡ ಮಾತ್ರ ನನ್ನದು…!

ಕಣ್ಣು ನನ್ನದೇ…
ಆದರೆ.. ಆಕ್ಷಿಪಟದಲ್ಲಿ ಮೂಡುವ
ಚಿತ್ರ ನಿನ್ನದು, ಕಣ್ಣೀರು ನನ್ನದು..

ಹೃದಯ ನನ್ನದೇ…
ಆದರೆ.. ಉಚ್ವಾಸ ನಿಶ್ವಾಸದ
ಸಂವೇದನೆ ನಿನ್ನದು, ನೋವು ನನ್ನದು..

ದೇಹ ನನ್ನದೇ…
ಆದರೆ.. ಅಂತರ್ ದೇಹದ
ಆತ್ಮ ನಿನ್ನದು.. ಜಡ ಮಾತ್ರ ನನ್ನದು!

ಕದ ತೆರೆದಿದೆ .. · ನೆನಪಿನ ಹನಿ

ಕದ ತೆರೆದಿದೆ ..

ಅರಳದ ಕನಸಿಗೆ ಭಾವವು ನೊಂದಿದೆ ..
ಸಿಗದ ಪ್ರೀತಿಗೆ ಹೃದಯವು ಹೊಡೆದಿದೆ..

ಕಂಡ ಕನಸಿಗೆ ಮತ್ತೆ ಜೀವ ತುಂಬಬೇಕಿದೆ..
ಕದವು ತೆರೆದಿದೆ..
ಮರಳಿ ಬರುವೆಯಾ ನೀನು ಹೋದ ದಾರಿಯಲ್ಲಿ…