"ಹನಿ" ಮತ್ತು "ಮುತ್ತು"ಗಳು · ಹುಸೇನಿ ಪದ್ಯಗಳು - 31 · ಹುಸೇನಿ_ಪದ್ಯಗಳು

“ಹನಿ” ಮತ್ತು “ಮುತ್ತು”ಗಳು (ಹುಸೇನಿ ಪದ್ಯಗಳು – 31)


dewDrop

ಕವಿತೆಯಾಗದ ನನ್ನ
“ಹನಿ”ಗಳು ನಿನ್ನೊಡಲು
ಸೇರಿದಾಗ ಮುತ್ತಾಗುವ
ಗುಟ್ಟೇನು ಗೆಳತೀ … ?

ಸಾಗರಕ್ಕೆ ಬಿದ್ದ “ಹನಿ”
ಅಸ್ತಿತ್ವ ಕಳಕೊಂಡಿತು.
ಹೂವಿನ ಎಸಳ ಮೇಲೆ
ಬಿದ್ದವು, ಮುತ್ತಾಗಿ ಹೊಳೆಯಿತು.

ನಿನ್ನ ನೆನಪುಗಳ
ಪೋಣಿಸಿ ಬರೆದ
“ಹನಿ”ಯ ನೀ ಮೆಚ್ಚಿ ಮುತ್ತಿಟ್ಟೆ
ನೋಡು, ಅದಕ್ಕೀಗ ವಯ್ಯಾರ…!

~ಹುಸೇನಿ

4 thoughts on ““ಹನಿ” ಮತ್ತು “ಮುತ್ತು”ಗಳು (ಹುಸೇನಿ ಪದ್ಯಗಳು – 31)

  1. ಕವಿತೆ ಯೆಂದರೆ ಹಾಗೆ. . . .
    ಕಳೆದುಹೋಗುವ ಕನವರಿಕೆಗಳ ಕಡಲು. . .
    ಕವಿತೆ ಯೆಂದರೆ ಹಾಗೆ. . . .
    ಮನದರಸಿಯ ಮುತ್ತುಗಳ ಅಮಲು…

    Like

Leave a comment