ಅನುಸಂಧಾನ (ಹುಸೇನಿ ಪದ್ಯಗಳು – 32)

ಅನುಸಂಧಾನ -2

ನನ್ನ ಮೌನಗಳ ತುದಿಗೆ
ಬೆರಗು ಮೂಡಿ ಮಾತು ಕಲಿತಿವೆ .
ಎಷ್ಟೋಂದು ಕಟ್ಟಿಟ್ಟ ಮಾತುಗಳು
ಹಾಗೇ ಉಳಿದಿವೆ .
ನಾಳೆಗಿಷ್ಟು ಬಿಚ್ಚಿಡುವ
ಮಲಗು
ಮಾತು ಮಾತಾಡಲಿ ಮೌನಗಳೊಂದಿಗೆ..

ಅನುಸಂಧಾನ-1

ನಿನ್ನ ಮುಗಿಯದ ಮಾತಿನ ತುದಿಯ
ಮೌನದೊಳಗಿಂದ
ಕವಿತೆಯೊಂದು ಇಣುಕುತ್ತಿತ್ತು;
ಅದ ನೋಡಿದ ನನ್ನ ಸಮಸ್ತ ಕವಿತೆಗಳು
ಅಪಮಾನ ತಾಳಲಾರದೆ
ಅಸುನೀಗಿದವು …

Leave a comment

ಹುಸೇನಿ ಪದ್ಯಗಳು – 9

ಬತ್ತಿದ ನನ್ನೆದೆಯೊಳು
ಬಿಕ್ಕಳಿಸುತಿವೆ
ನಿನ್ನ ನೆನಪುಗಳು …!

ಸಾವಿರ ಕೋಟಿ ನಕ್ಷತ್ರಗಳಿದ್ದರೂ
ರಾತ್ರಿಯ ಸೊಬಗು
ಚಂದ್ರನಲ್ಲವೇ….?

ನಾ ನಿನ್ನ ಕಂಡಾಗಲೇ
ಹೃದಯ ಜಾರಿದ್ದು ,ಮನಸು ಮಗುವಾಗಿ
ನಿನ್ನನೇ ಬೇಡಿದ್ದು…!

ನಿನ್ನ ನೆನಪನ್ನು
ಓಲೆ ಮೇಲೆ ಚೆಲ್ಲ ಹೊರಟಾಗಲೇ
ಅಕ್ಷರಗಳು ಪದವಾಗದೆ ಪ್ರತಿಭಟಿಸಿದ್ದು!

ನೀನಿತ್ತ ನೋವ ನೆನೆದು
ಮರುಗಿದಾಗಲೇ
ನನ್ನೆದೆ ನಿನ್ನ ಹೆಗಲ ಬಯಸಿದ್ದು..!


Leave a Comment

ಕನ್ನಡ ಬ್ಲಾಗಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

Blog at WordPress.com.

Up ↑

%d bloggers like this: