ಅನುಸಂಧಾನ · ಹುಸೇನಿ ಪದ್ಯಗಳು - 32 · ಹುಸೇನಿ_ಪದ್ಯಗಳು

ಅನುಸಂಧಾನ (ಹುಸೇನಿ ಪದ್ಯಗಳು – 32)

ಅನುಸಂಧಾನ -2

ನನ್ನ ಮೌನಗಳ ತುದಿಗೆ
ಬೆರಗು ಮೂಡಿ ಮಾತು ಕಲಿತಿವೆ .
ಎಷ್ಟೋಂದು ಕಟ್ಟಿಟ್ಟ ಮಾತುಗಳು
ಹಾಗೇ ಉಳಿದಿವೆ .
ನಾಳೆಗಿಷ್ಟು ಬಿಚ್ಚಿಡುವ
ಮಲಗು
ಮಾತು ಮಾತಾಡಲಿ ಮೌನಗಳೊಂದಿಗೆ..

ಅನುಸಂಧಾನ-1

ನಿನ್ನ ಮುಗಿಯದ ಮಾತಿನ ತುದಿಯ
ಮೌನದೊಳಗಿಂದ
ಕವಿತೆಯೊಂದು ಇಣುಕುತ್ತಿತ್ತು;
ಅದ ನೋಡಿದ ನನ್ನ ಸಮಸ್ತ ಕವಿತೆಗಳು
ಅಪಮಾನ ತಾಳಲಾರದೆ
ಅಸುನೀಗಿದವು …

Leave a comment

ನಷ್ಟಗಳು.. · ನೆನಪಿನ ಹನಿ

ನಷ್ಟಗಳು..

ಪ್ರೀತಿಯು ನನ್ನ ಜೀವನವಾಗಿದೆ..

ಕೇಳಲು ಮರೆತ ಪ್ರಶ್ನೆಗಳು..
ಹೇಳಲು ಮರೆತ ಉತ್ತರಗಳು..
ದನಿಗೂಡಿಸಲು ಮರೆತ ಮಾತುಗಳು ..
ಇದೇ ನನ್ನ “ಜೀವನದ” ನಷ್ಟಗಳು..