ಕಾಡುವ ಹನಿಗಳು -೧೧, ಹುಸೇನಿ ಪದ್ಯಗಳು - 13, ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 13

Roses-for-a-lost-love-a29108270

೧.
ನೆನಪಿನ ಪುಟಗಳಲ್ಲಿ ಅಡರಿ ಬಿದ್ದ
ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ
ನಿನ್ನ ರೂಪವಿತ್ತು..
ಇಂದು ನನ್ನ ವಿರಹಕ್ಕೂ…!
೨.
ದುಃಖ ಸತ್ಯಗಳು
ನನ್ನ ನೋಡಿ
ನಗುತಿದೆ;
ದುಃಖ ಮರೆಯಲು
ನಾನೂ..! 

೩.
‘ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?’
ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ.
‘ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!’
ಉತ್ತರಿಸಿತು ಕಣ್ಣು.

೪.
ಎಲೆಗಳು ಪರಸ್ಪರ ತಾಕದಿರಲು
ದೂರ ದೂರದಲಿ ನೆಟ್ಟ
ಮರದ ಬೇರುಗಳು
ಭೂಗರ್ಭದಲಿ ಬಿಗಿದಪ್ಪಿದವು..!


ಹೇಗಿದೆ ಹೇಳಿ