ಬಿಂದು-23

ಪತಂಗದ ಕನಲಿಕೆ
ದೀಪದ ತಟಸ್ಥ ಭಾವ
ಗಾಳಿಯ ಆಟೋಪಾಟ
ಪ್ರೀತಿಯೆಂದರೆ ತಣ್ಣನೆಯ ಕ್ರೌರ್ಯ….

~ ಹುಸೇನಿ

ಬಿಂದು – 20

ಬಂದೂಕುಗಳನ್ನೇ
ಆಟಿಕೆಯಾಗಿಸಿದ ಮಾರುಕಟ್ಟೆ;
ಮತ್ತದರಲ್ಲೇ ಆಡಿ ಬೆಳೆದ ಮಕ್ಕಳು;
ಇಲ್ಲಿ ಯುದ್ಧವೆಂದರೆ ಮತ್ತೊಂದು
ಆಟ ಅಷ್ಟೇ ….

ಹುಸೇನಿ ~

ಹುಸೇನಿ ಪದ್ಯಗಳು – 24

lamp

೧)
ಗೆಳೆಯನೊಬ್ಬನ ಒಡಲೊಳಗಿನ
ಹಸಿ ಹಸಿ ನೋವು
ಕವಿತೆಯಾಗಿ ಬರುತ್ತದೆ;
ಓದಿದವರು ಭಲೇ ಭಲೇ
ಅಂತ ಬೆನ್ನು ತಟ್ಟುತ್ತಿದ್ದಾರೆ..
೨)
ನನಗ್ಯಾರೂ ಇಲ್ಲವೆಂದು
ಆಕಾಶದೆಡೆಗೆ ದೃಷ್ಟಿಯಿಟ್ಟೆ
ಅಗಣಿತ ತಾರೆಗಳು ಕೈಬೀಸಿದವು.
ಅಪ್ಪ ನೆನಪಾದ,
ಅಪ್ಪ ಅಂದರೆ ಆಕಾಶ..

೩)
ಕವಿತೆಯನ್ನು ಮಾರಿಕೊಂಡವನು
ಮತ್ತಷ್ಟು ಬಡವನಾದ,
ಹಂಚಿಕೊಂಡವನು
ಮತ್ತಷ್ಟು ಶ್ರೀಮಂತ !

೪)
ಬತ್ತಿ ಸುಟ್ಟು ಹೋಯಿತು
ಎಣ್ಣೆಯೂ ಕರಗಿತು
ಹರಡಿದ್ದ ಬೆಳಕು ಮಾತ್ರ
ಸತ್ಯ..

_ಹುಸೇನಿ

Blog at WordPress.com.

Up ↑

%d bloggers like this: