ನ್ಯಾನೋ ಕಥೆಗಳು

ಅಮರ ಪ್ರೇಮ

ಆಕೆ ಆತನನ್ನು ತೊರೆದು ಶ್ರೀಮಂತನೋಬ್ಬನನ್ನು ಮದುವೆಯಾಗಿದ್ದಳು. ಆಕಸ್ಮಿಕವಾಗಿ ಆತ ಎದುರಿಗೆ ಸಿಕ್ಕ. ‘ನಾನು ಸಿಗದಿದ್ದರೆ ಬದುಕಿರಲಾರೆ ಅಂತಿದ್ದೆ .. ಆದ್ರೆ ಆಗಲೂ ಬದುಕಿದ್ಯಾ? ಆಕೆ ಕುಟುಕಿದಳು. ‘ಎಲ್ಲಿ ಬದುಕಿದ್ದೇನೆ.. ನೀನು ಜೀವ ತೆಗೆದ ಶವವನ್ನು ಹೊತ್ತು ತಿರುಗಾದುತ್ತಿದ್ದೇನೆ ‘ ಆತ ನಿರ್ಲಿಪ್ತನಾಗಿ ಉತ್ತರಿಸಿ ಮುನ್ನಡೆದ.


Leave a Comment

ನ್ಯಾನೋ ಕಥೆಗಳು

ಶವಪೆಟ್ಟಿಗೆ

ಆತ ಶವಪೆಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ. “ಈ ಮಳೆಗಾಲದಲ್ಲಿ ಯಾರೂ ಸತ್ತಿಲ್ಲ” ಆತ ಮಾತು ಮುಗಿಸುವಷ್ಟರಲ್ಲಿ ‘ನಮ್ಮೂರಿಗೆ ಬರುವ ಬಸ್ಸು ಸೇತುವೆ ಕೆಳಗೆ ಬಿದ್ದು ಅದರಲ್ಲಿದ್ದವ್ರೆಲ್ಲರೂ ಸತ್ತರಂತೆ ‘ ಓಡಿ ಬಂದ ಅವನ ಸಹಾಯಕ ಹೇಳಿದ.ಆತನಿಗೆ ಒಳಗೊಳಗೇ ಸಂಭ್ರಮ. ಕೂಡಲೇ ಕಾರ್ಯ ಪ್ರವೃತ್ತನಾದ. ಕೆಲ ಸಮಯದ ಬಳಿಕ ಮೊಬೈಲ್ ರಿಂಗಣಿಸಿತು.. “ರೀ.. ರೀ ನಮ್ .. ನಮ್ಮಗಳು ಬ.. ಬ ಬಸ್ಸು ಸೇ .. ಸೇತುವೆ ” ಆತ ಅಲ್ಲೇ ಕುಸಿದು ಬಿದ್ದ.