ಬಿರಿಯದ ಮೊಗ್ಗು · ಬಿರಿಯದ ಮೊಗ್ಗು - 16

ಬಿರಿಯದ ಮೊಗ್ಗು – 16

ಆ ಮುರಿದ ಕೊಳಲು, ಒಡೆದ ತಂತಿ
ಗೋರಿಯೊಳಗಿನ ಕನಸು, ಆ ತೀರದಲ್ಲಿ
ಇಂಗಿದ ಕಣ್ಣ ಹನಿ ..
ಕಳೆದ ನಿನ್ನೆ, ಇನ್ನೂ ಬಾರದ ನಾಳೆ,
ನಿನ್ನ ನೆನಪು ಕೈಬೀಸಿ ಕರೆದಾಗೆಲ್ಲ
ನೀರಾಗಿ, ನದಿಯಾಗಿ ಹರಿಯುತ್ತದೆ ನಿನ್ನೆಡೆಗೆಯೇ,
ಬದುಕಿನ ಎಲ್ಲ ಜಂಜಡವ ಮರೆತು..

ಹುಸೇನಿ ~

ಕಾಡುವ ಹನಿಗಳು · ನೆನಪಿನ ಹನಿ · ಬಿರಿಯದ ಮೊಗ್ಗು · ಬಿರಿಯದ ಮೊಗ್ಗು - 15

ಬಿರಿಯದ ಮೊಗ್ಗು – 15

ಆ ಮೋಟು ಜಡೆ, ನಿಚ್ಚಳ
ಕಣ್ಣುಗಳು..
ನಿಷ್ಕರುಣಿ ಕಾಲ ಯಾವುದನ್ನು
ಮರೆಸುತ್ತಿಲ್ಲ..
ಎಣ್ಣೆ ತೀರಿದ ಬತ್ತಿಯ ಕಮಟು
ಇನ್ನೂ
ಗಾಳಿಯಿಂದ ಆರಿಲ್ಲ..

ಹುಸೇನಿ ~

Leave a comment

ಬಿರಿಯದ ಮೊಗ್ಗು · ಬಿರಿಯದ ಮೊಗ್ಗು -9

ಬಿರಿಯದ ಮೊಗ್ಗು -9

ಕಡಲ ತಡಿ ನೀನು ,
ಭೋರ್ಗರೆದು ಮೊರೆದು,
ಸಿಡಿದು, ಹಾಲ್ನೊರೆಗೆರೆದು,
ನಿನ್ನ ಭೇಟಿಯಲ್ಲಿ
ಶಾಂತ – ಅಲೆ ನಾನು..!

Leave a comment

ನೆನಪಿನ ಹನಿ

ಬಿರಿಯದ ಮೊಗ್ಗು-6

ಕತ್ತಲಿನಲ್ಲಿ ಬೆಳಕ
ತಂದುಕೊಳ್ಳುವುದ ಧ್ಯಾನವೆಂದರು,
ನಾನು ಮತಿಗೇಡಿ;
ನಿನ್ನಡೆಗಿನ ಪ್ರೀತಿಯ
ಔನ್ಯತ್ಯವೆಂದೆ…

Leave a comment

ಬಿರಿಯದ ಮೊಗ್ಗು · ಬಿರಿಯದ ಮೊಗ್ಗು -2

ಬಿರಿಯದ ಮೊಗ್ಗು -2

ಕೊನೆ ಮಾಡು ಎಂದರೆ
ಹೇಗೆ ?
ನೀಲ್ಗಡಲ ಅಲೆಯ ತಡೆಯಬಹುದು;
ಪರಧಿಯಾಚೆಗೂ ಹರಹು ಚಾಚಿದ
ಪ್ರೀತಿ ನನ್ನದು.