ನ್ಯಾನೋ ಕಥೆಗಳು

ಬೆನ್ನಲುಬು

ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ  ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್  ನಡೆಸಿತ್ತು.


Leave a Comment

ನ್ಯಾನೋ ಕಥೆಗಳು

ನೆನಪು

ತುಂಬಾ ವರ್ಷಗಳ ನಂತರ ಶಾಪಿಂಗ್ ಮಾಲಲ್ಲಿ ಆತ ಅಚಾನಕ್ಕಾಗಿ ಸಿಕ್ಕಿದ .”ರ್ರೀ ಇವರು ನಮ್ ಕ್ಲಾಸ್ ಮೇಟು .. ಡಿಗ್ರೀಲಿ ನಾವು ಒಟ್ಟಿಗಿದ್ದೆವು ” ಆಕೆ ಆತನನ್ನು ತನ್ನ ಗಂಡನಿಗೆ ಪರಿಚಯಿಸಿದಳು.. ಅಂದು ರಾತ್ರಿ ಆಕೆಗೆ ನಿದ್ದೆ ಬರದಾಗಿ, ಆತನನ್ನು ನೆನಪಿಸಿ ನಿದ್ದೆಯಿಲ್ಲದೆ ಕಳೆಯುತ್ತಿದ್ದ ಕಾಲೇಜ್ ದಿನಗಳು ಸುಮ್ಮನೆ ನೆನಪಾದವು.


Leave a Comment

ನ್ಯಾನೋ ಕಥೆಗಳು

ನರ ಭಕ್ಷಣೆ

ಅದು ಸಮಾಜ ಕ್ಲಾಸ್. ಮೇಷ್ಟ್ರು ನಾಗರಿಕತೆ ಬಗ್ಗೆ ಪಾಠ ಮಾಡುತ್ತಿದ್ದರು. ನಾಗರೀಕತೆ ಬರುವ ಮೊದಲು ಜನರು ನರ ಭಕ್ಷಣೆ ಮಾಡುತ್ತಿದ್ದರು ಮೇಷ್ಟು ಹೇಳಿದರು.. “ಅಮೆರಿಕ ಅಫ್ಘಾನಿಸ್ತಾನ ಮತ್ತು ಇರಾಕಲ್ಲಿ ಮಾಡುತ್ತಿರುವುದೇನು ?” ವಿದ್ಯಾರ್ಥಿ ತಟ್ಟನೆ ಕೇಳಿದ .

ನ್ಯಾನೋ ಕಥೆಗಳು

ಜಂಭ

ಒಂದು ದಿನ ಸೂರ್ಯ – ಚಂದ್ರರು ಎದುರಾದರು. ಎಲ್ಲರೂ ನನ್ನ ಬೆಳದಿಂಗಳಿಗೆ ಕಾಯುತ್ತಾರೆ. ಕವಿಗಳ ಕವಿತೆಯಲ್ಲಿ ಎಲ್ಲದಕ್ಕೂ ನಾನೇ ಉಪಮೆ. ಪ್ರೇಮಿಗಳಿಗೆ ಹುಣ್ಣಿಮೆಯ ಬೆಳಕೆಂದರೆ ಹಬ್ಬ.. ಚಂದ್ರ ಸೂರ್ಯನೆದುರು ಕೊಚ್ಚಿ ಕೊಂಡಿತು. ಅವರು ಕಾಯುವುದು ನಿನ್ನನ್ನು ನೋಡಲಲ್ಲ.. ನೀನು ನನ್ನಿಂದ ಎರವಲು ಪಡೆದಿರುವ ಬೆಳಕನ್ನು ನೋಡಲು.. ಸೂರ್ಯ ನಕ್ಕು ಹೇಳಿತು.

ನ್ಯಾನೋ ಕಥೆಗಳು

ಪರಿಶುದ್ದಿ

ಅದು ಶುಕ್ರವಾರ .ಮಸೀದಿಗೆ ಬಂದವರನ್ನೆಲ್ಲಾ ಸೆಂಟ್ ಪೂಸಿ ಒಳಗೆ ಬಿಡಲಾಗುತ್ತಿತ್ತು. ಹರಕಲು ಬಟ್ಟೆ ಹಾಕಿದ ಚಿಂದಿ ಹಾಯುವನೂ ಬಂದಿದ್ದ .ನೋಡಿದರೆ ಅಸಹ್ಯ ಎಣಿಸುವಂತ, ನೀರು ಕಾಣದ ದೇಹ.. ನಾಲ್ಕೈದು ಮಂದಿ ಸೇರಿ ಅವನನ್ನು ಹೊರಗೆ ದಬ್ಬಿದರು. ಹೋಗುವಾಗ ಅವನು ಏನೋ ಬರೆದಿಟ್ಟಿದ್ದ.. ನಮಾಜು ಮುಗಿಸಿ ಬಂದು ಅವರು ನೋಡಿದರು . ಅದು ಖುರಾನಿನ ಸೂಕ್ತವಾಗಿತ್ತು “ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಬಾಹ್ಯ ಸೌಂದರ್ಯವನ್ನು ನೋಡುವುದಿಲ್ಲ. ಅವನು ನೋಡುವುದು ಅಂತರಂಗದ ಪರಿಶುದ್ದಿಯನ್ನು ಮಾತ್ರ! “

ನ್ಯಾನೋ ಕಥೆಗಳು

ಹೋರಾಟ – ಭವಿಷ್ಯ

ಆತ ಕನ್ನಡ ಹೋರಾಟಗಾರ . ಕನ್ನಡದ ರಕ್ಷಣೆಗಾಗಿ ಅದ್ಯಾವುದೋ ವೇದಿಕೆಯನ್ನೂ ಕಟ್ಟಿದ್ದ. ಆದರೆ ಮಗನನ್ನು ಮಾತ್ರ ಹೆಚ್ಚು ಫೀಸ್ ಪಡೆಯುವ ಕಾನ್ವೆಂಟ್ ಸ್ಕೂಲ್ಗೆ ಸೇರಿಸಿದ್ದ. ‘ಕನ್ನಡ ಹೋರಾಟಗಾರರಾಗಿ ನೀವು ಹೀಗೆ ಮಾಡಬಹುದೇ ? ‘ ಯಾರೋ ಕೇಳಿದರು. “ನನ್ನದು ಹೋರಾಟದ ದಾರಿ.. ಮಗನಿಗದು ಭವಿಷ್ಯದ ದಾರಿ..” ಆತ ಉತ್ತರಿಸಿದ .

ನ್ಯಾನೋ ಕಥೆಗಳು

ಜಂಭ

ಅವನು ಊರಿನ ಜಮೀನ್ದಾರರ ಮಗ.. ವಿದೇಶದಿಂದ ಪದವಿ ಮುಗಿಸಿ ಹಿಂದಿರುಗಿ ಬರುತ್ತಿದ್ದ.. ಆ ಹಳ್ಳಿಯಿಂದ ವಿದೇಶಕ್ಕೆ ಹೋದವರಲ್ಲಿ ಅವನೇ ಮೊದಲಿಗ.. ಆ ದೋಣಿಯಲ್ಲಿ ಇದ್ದವರೆಲ್ಲ ಹಳ್ಳಿಗರಲ್ಲಿ ತನ್ನ ಹಿರಿಮೆಯನ್ನು ತೋರಿಸಲು ತಾನು ಕಲಿತ History , geography ಬಗ್ಗೆ ಕೊರೆಯುತ್ತಿದ್ದ. ಅದನ್ನು ಕಲಿಯದವರ ಜನ್ಮ ನಿರರ್ಥಕವೆಂದು ಜಂಭ ಕೊಚ್ಚಿದ. ಒಮ್ಮೆಲೇ ಬೀಸಿದ ಸುಂಟರಗಾಳಿ ದೋಣಿಯನ್ನು ಅಲ್ಲೋಲ ಕಲ್ಲೋಲ ಮಾಡಿತು. ಅದರಲ್ಲಿ ಇದ್ದ ಹಳ್ಳಿಗರೆಲ್ಲರೂ ನದಿಗೆ ಹಾರಲು ಅಣಿಯಾದರು. ಬೆದರಿ ನಿಂತ ಈತನನ್ನು ಕಂಡು ಈಜು ಬರಲ್ವೆ? ಅಂತ ಹಳ್ಳಿಗನೊಬ್ಬ ಕೇಳಿದ.. ಆತ ಇಲ್ಲ ಎನ್ನಲು ನೀವು ಕಲಿತ History,geography ಯನ್ನು ಸಹಾಯಕ್ಕೆ ಕರೆ, ಇಲ್ಲದಿದ್ದರೆ ನಿಮ್ಮ ಬಾಳು ನಿರರ್ಥಕವಾಗುತ್ತೆ , ಎಂದು ಹೇಳಿ ಆತ ನದಿಗೆ ಹಾರಿದ..