ಇಬ್ಬನಿ · ಇಬ್ಬನಿ ಹಾಯ್ಕು -೧ · ಕಾಡುವ ಹನಿಗಳು

ಇಬ್ಬನಿ ಹಾಯ್ಕು -೧

ಇಂದಿನವರೆಗೂ
ನನಗೆ ತಪ್ಪಿದ ದಾರಿಗಳು
ನಿನ್ನೆಡೆಗಾಗಿತ್ತು

*
ಅನ್ನ ಸುತ್ತಿಟ್ಟ
ಎಲೆ ತೆರೆದಾಗ
ಅಮ್ಮನ ಪರಿಮಳ

*
ಮರಳುಗಾಳಿ
ಆಕಾಶ ನೀಲಿಮೆಯಲ್ಲಿ
ವಿಳಾಸ ಹುಡುಕುತಿದೆ

*
ನೆನಪಿನ
ಬೆರಳಚ್ಚುಗಳೊಂದಿಗೆ
ಮೂಲೆಯಲ್ಲಿ ಪುರಾತನ ಪಿಯಾನೊ

*
ಮೂಲೆಯಲ್ಲಿ ಅನಾಥ
ಚರಕ
ಗಾಂಧಿ ತಾತನ ನೆನಪು

( ಕೆಲವೊಂದು ಪ್ರೇರಿತ ಮತ್ತು ಅನುವಾದಿತ )
ಇಷ್ಟವಾದರೆ ಹೇಳಿ