ಏನಿದು.. ನೆನೆಪಿನ ಸಂಚಿ ?

ಈ ನೆನಪುಗಳು…
ಸಿಹಿಯಾದರೆ ನನ್ನದೆಯ ಬಾಂದಳದಲಿ ನಗುವಾಗಿ ಚಿಮ್ಮಿದರೆ.. ಕಹಿಯಾದರೆ ಹೃದಯವ ಹಿಂಡಿ ಕಣ್ಣಂಚಲಿ ಅಮೃತಧಾರೆಯಾಗಿ ಹರಿಯುತ್ತದೆ..

ಈ ನೆನಪುಗಳೇ ಹಾಗೆ ಕೆಲವೊಮ್ಮೆ ಹುಣ್ಣಿಮೆ ರಾತ್ರಿಯ ಚಂದ್ರನಂತೆ ಮನಕೆ ಮುದ ನೀಡಿದರೆ ಮತ್ತೊಮ್ಮೆ ಮನಸ್ಸನ್ನು ಅಮಾವಾಸ್ಯೆಯ ಕತ್ತಲ ಕೂಪಕ್ಕೆ ತಳ್ಳಿ ಬಿಟ್ಟು ವಿಕೃತ ಆನಂದವನ್ನು ಪಡೆಯುತ್ತದೆ.
ನೆನಪುಗಳೇ ನೀನೇಕೆ ಹೇಗೆ ? ಮತ್ತೆ ಮತ್ತೆ ಬಂದು ಮನಸ್ಸನ್ನು ಕಾಡಿಸಿ,ಪೀಡಿಸಿ,ಘಾಸಿ ಗೊಳಿಸುವುದೇಕೆ ? ಗಾಯ ಮಾಗಿದರೂ ಕಲೆಯ ಉಳಿಸಿ ಬಿಡುವುದೇಕೆ..?
ಗೊತ್ತಿಲ್ಲ…. ಆದರೂ ಈ ನೆನಪುಗಳನ್ನು ನಾನು ತುಂಬ ಪ್ರೀತಿಸುತ್ತೇನೆ.. ಕಾರಣ ಈ ನೆನಪುಗಳು ಬತ್ತದ ನನ್ನ ಬದುಕಿನ ಸ್ಪೂರ್ತಿ, ನಾಳೆಯೆಂಬ ನಾಗಾಲೋಟದಿಂದ ನಿನ್ನೆಯೆಂಬ ಕಟು ಸತ್ಯಕ್ಕೆ ನನ್ನ ಸೆಳೆಯುವ ಮಾಯಾಮಂತ್ರ, ಜೀವನ ಎಂಬ ಶಿಲಾಯುಗದ ಎಂದೂ ನಿರ್ನಾಮವಾಗದ ಪಳೆಯುಳಿಕೆ..!

ನೆನಪಿನ ಸಂಚಿ
ಇದು ಎಂದೂ ಬತ್ತದ ನನ್ನ ನೆನಪಿನ ಬುತ್ತಿಯಿಂದ ಆರಿಸಿ ತೆಗೆದ ಕಮರಿ ಹೋದ ಕನಸುಗಳ ಅಕ್ಷರ ರೂಪ.. ಅರಳದ ಭಾವಲೋಕದಲ್ಲಿ ಮುದುಡಿದ ಆಸೆಗಳ ಜೊತೆ ಪಯಣ.. ನಿನ್ನೆಯ ಕನಸುಗಳನ್ನು ಇಂದು ಹೂತಿಟ್ಟ ರುದ್ರಭೂಮಿ..!

ಪ್ರೀತಿಸಲು ಅದೆಷ್ಟೂ ನೆನಪುಗಳು..
ನೆನಪಾಗಿ ಅದೆಷ್ಟೋ ನಷ್ಟಗಳು..
ನಷ್ಟಗಳು ಮಾತ್ರ ಕೊಟ್ಟ ಜೀವನ
ಕೊನೆಗೆ ನಷ್ಟಗಳನ್ನೂ ಪ್ರೀತಿಸಿದೆ..
ಕಾರಣ, ಅದೆಲ್ಲ ನನ್ನ ಅತೀ ದೊಡ್ಡ
ಕನಸುಗಳು….!!

ನೆನಪಿನ ಸಂಚಿಯ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕಳುಹಿಸಿ :  touch2hussain@gmail.com

Advertisements

37 comments on “ಏನಿದು.. ನೆನೆಪಿನ ಸಂಚಿ ?

 1. ಒಂದಾನೊಂದು ಕಾಲದಲ್ಲಿ ಇತ್ತೊಂದು ಮರಿ
  ಆ ಪರಿ ಈ ಪರಿ ನಲಿದಾಡುವ ಕುರಿ, ಅಲೆಮಾರಿ
  ಜಿಗಿ-ಜಿಗಿದು ಹಾರುತಲಿ ಮೈ-ಮನವ ಮರೆಯುತಲಿ
  ತಾನಿರದೆನಿನ್ನೆಯ ಚಿಂತೆಯಲಿ ನಾಳೆಯ ಭಯದಲಿ
  ಕಳೆದಂತೆ ಕಾಲ, ಬೆಳೆದಂತೆ ಮತಿ
  ವಯಸ್ಸೆಂಬ ಕುದುರೆಯೇರಿ, ಸಾಗುತಿರೆ ಜೀವ
  ನಾನೆಂಬ ಮದವೇರಿ, ಕುಣಿಯುತಿರೆ ಮತಿ
  ಮರೆತಿತೆ ಬಲಿಗಾಗಿ ಕಾದಿರುವ ಸಾವ

  Like

 2. ಲಂಚ ಕೊರರಿಗಿದೊ ನನ್ನ ಧಿಕ್ಕಾರ!!
  ಬಡವನ ವಂಚಿಸಿ , ಸಂಚು ರೂಪಿಸಿ
  ಬೆಂಚಿನ ಕೆಳಗಡೆ ಲಂಚ ಪಡೆಯುವ
  ವಂಚಕರಿಗಿದೊ ನನ್ನ ದಿಕ್ಕಾರ!!
  ಲಂಚವ ಪಡೆದರೂ ಕೆಲಸವೇ ಮಾಡದೆ
  ಮಂಚವೆರಿ ಮಜಾ ಮಾಡುವ
  ಭ್ರಷ್ಟ ಮಂದಿಗಿದೋ ನನ್ನ ಧಿಕ್ಕಾರ!!
  ಬಡವನ ಹೆಂಚಿನ ಮನೆಯ ಸುಂಚಿನ ಮನೆ ಮಾಡಿ
  ಮಹಡಿಯ ಮೇಲೆ ಮಹಡಿಯ ಕಟ್ಟುವ
  ಗಂಟುಕಳ್ಳರಿಗಿದೊ ನನ್ನ ಧಿಕ್ಕಾರ!!
  ಬಡವನ ಬಸಿದು ಸಾಲದ ಶೂಲಕೆ ಏರಿಸಿ
  ಹೆಂಡತಿ ಮಕ್ಕಳಿಗೊಡವೆಯ ತಂದು ಬಡಿಯುವ
  ಬಂಡುಕೊರರಿಗಿದೊ ನನ್ನ ಧಿಕ್ಕಾರ!!
  ಲಂಚವ ಪಡೆಯದೆ ಕಡತವ ತೆಗೆಯದ
  ಬಡವನ ಪಂಚೆ ಕಳಚಿ ಕಚ್ಚೆಯ ಉಡಿಸಿದ
  ಕೀಚಕಮಂದಿಗಿದೋ ನನ್ನ ಧಿಕ್ಕಾರ!!
  ಹೆಣವನು ಕೊಡಲು ಹಣವನು ಕೇಳುತಾ
  ಬದಿಕ್ಕಿದ್ದವರನ್ನು ಕೊಲ್ಲುತ ಮಾನವೀಯತೆ ಮರೆತ
  ವೈದ್ಯ ಕುಲ ಕೋಟಿಗಿದೋ ನನ್ನ ಧಿಕ್ಕಾರ!!
  ಮೆರಿಟ್ಟು ಬಂದರೂ ಸೀಟು ಕೊಡದೆ
  ದಾನದ ಹೆಸರಲಿ ಲಂಚವ ಪಡೆದು ಹಂಚಿಕೊಳ್ಳುವ
  ಶಿಕ್ಷಕ ರೂಪದ ಭಕ್ಶಕರಿಗಿದೊ ನನ್ನ ಧಿಕ್ಕಾರ!!
  ನೋಟನು ಪಡೆಯದೆ ಒಟನೂ ಹಾಕದ
  ಹೆಂಡಿರು ಮಕ್ಕಳ ಉಪವಾಸ ಕೆಡವುತಾ
  ಮನೆಯನು ಮಾರಿ ಲಂಚವ ಹೊಂಚಿ
  ಕೊಂಚವೂ ಚಿಂತೆ ಮಾಡದೆ
  ನೀಚರ ಜೋಬನು ತುಂಬಿಸುತಿರುವ
  ಬಡವನೆ ನಿನ್ನ ಬುದ್ದಿಗಿದೋ ಇರಲಿ ನನ್ನದೊಂದು ಧಿಕ್ಕಾರ,,!!!!

  Like

 3. ಲಂಚ ಕೊರರಿಗಿದೊ ನನ್ನ ಧಿಕ್ಕಾರ
  ಬಡವನ ವಂಚಿಸಿ , ಸಂಚು ರೂಪಿಸಿ
  ಬೆಂಚಿನ ಕೆಳಗಡೆ ಲಂಚ ಪಡೆಯುವ
  ವಂಚಕರಿಗಿದೊ ನನ್ನ ದಿಕ್ಕಾರ
  ಲಂಚವ ಪಡೆದರೂ ಕೆಲಸವೇ ಮಾಡದೆ
  ಮಂಚವೆರಿ ಮಜಾ ಮಾಡುವ
  ಭ್ರಷ್ಟ ಮಂದಿಗಿದೋ ನನ್ನ ಧಿಕ್ಕಾರ
  ಬಡವನ ಹೆಂಚಿನ ಮನೆಯ ಸುಂಚಿನ ಮನೆ ಮಾಡಿ
  ಮಹಡಿಯ ಮೇಲೆ ಮಹಡಿಯ ಕಟ್ಟುವ
  ಗಂಟುಕಳ್ಳರಿಗಿದೊ ನನ್ನ ಧಿಕ್ಕಾರ
  ಬಡವನ ಬಸಿದು ಸಾಲದ ಶೂಲಕೆ ಏರಿಸಿ
  ಹೆಂಡತಿ ಮಕ್ಕಳಿಗೊಡವೆಯ ತಂದು ಬಡಿಯುವ
  ಬಂಡುಕೊರರಿಗಿದೊ ನನ್ನ ಧಿಕ್ಕಾರ
  ಲಂಚವ ಪಡೆಯದೆ ಕಡತವ ತೆಗೆಯದ
  ಬಡವನ ಪಂಚೆ ಕಳಚಿ ಕಚ್ಚೆಯ ಉಡಿಸಿದ
  ಕೀಚಕಮಂದಿಗಿದೋ ನನ್ನ ಧಿಕ್ಕಾರ
  ಹೆಣವನು ಕೊಡಲು ಹಣವನು ಕೇಳುತಾ
  ಬದಿಕ್ಕಿದ್ದವರನ್ನು ಕೊಲ್ಲುತ ಮಾನವೀಯತೆ ಮರೆತ
  ವೈದ್ಯ ಕುಲ ಕೋಟಿಗಿದೋ ನನ್ನ ಧಿಕ್ಕಾರ
  ಮೆರಿಟ್ಟು ಬಂದರೂ ಸೀಟು ಕೊಡದೆ
  ದಾನದ ಹೆಸರಲಿ ಲಂಚವ ಪಡೆದು ಹಂಚಿಕೊಳ್ಳುವ
  ಶಿಕ್ಷಕ ರೂಪದ ಭಕ್ಶಕರಿಗಿದೊ ನನ್ನ ಧಿಕ್ಕಾರ
  ನೋಟನು ಪಡೆಯದೆ ಒಟನೂ ಹಾಕದ
  ಹೆಂಡಿರು ಮಕ್ಕಳ ಉಪವಾಸ ಕೆಡವುತಾ
  ಮನೆಯನು ಮಾರಿ ಲಂಚವ ಹೊಂಚಿ
  ಕೊಂಚವೂ ಚಿಂತೆ ಮಾಡದೆ
  ನೀಚರ ಜೋಬನು ತುಂಬಿಸುತಿರುವ
  ಬಡವನೆ ನಿನ್ನ ಬುದ್ದಿಗಿದೋ ಇರಲಿ ನನ್ನದೊಂದು ಧಿಕ್ಕಾರ,,

  Like

 4. ಎಲ್ಲವೊ..ನನ್ನದೆಂಬ ಭಾವಎನಗೆ ಮೂಡಿದೆ
  ನನದೆನಿಲ್ಲವೆಂಬ ಅರಿವು ನನಗಿಲ್ಲದೆ ||೨||
  ಒಲವು ನೀಡಿದವಳ ಮಾತುನಾನು ಮರೆತಿರೆ,
  ಛಲವೆ ಇರದ ಬದುಕನಾನು ಬದುಕಿರೆ
  ಮುಂದೆ ಏನೆಂಬುದನಾ ಹೇಗೆ ತಾನೆ ನೆನೆಯಲಿ,
  ನೊಂದು ಬೆಂದಿರುವೆ ನಾ ನನ್ನವಳಾ ಪೀತಿ ಇಲ್ಲದೆ|| ಎಲ್ಲವೊ ||
  ನಿನ್ನ ಬಿಟ್ಟು ಬಾಳು ಇಲ್ಲ ಎನಗೆ
  ನಿನ್ನ ತೊರೆದರೆ ಏಕೆ ಬಾಳು ನನಗೆ,,
  ಬಾಳಲಾರದೆ ಬಳಲಿ ಹೋದೆ ನಾ,,
  ನೀನು ಬಾರದ ನನ್ನ ಬದುಕಲಿ|| ಎಲ್ಲವೊ ||
  ನಿನ್ನ ನೆನಪೆನಗೆ ನೋವತುಂಬಿ ಕಾಡಿದೆ
  ಭಾವ ಮೂಡಿದ ಘಳಿಗೆ ನಿನ್ನ ಕಾಣದೆ ಮನಕೊರಗಿದೆ
  ಮನಕೆ ಮನವರಿಕೆ ಮಾಡಲಾಗದೆ
  ಮೌನ ತುಂಬಿದೆ ಪ್ರತಿಯ ಕ್ಶಣವು ಅವಳಿಗಾಗಿಯೆ ಚಿಂತಿಸಿ|| ಎಲ್ಲವೊ ||
  ಬೇಡ ಎನಗೆ ಮತ್ತೇನು ನಿನ್ನ ಹೊರತು
  ನೆನಪ ಬುತ್ತಿಯ ಹೊತ್ತು ಸಾಗುವೆ ಬದುಕಲು,
  ಎನುತ ಕೊರಗಿದೆ ನನ್ನ ಅಂತರಾಳವು
  ಬಿಡಿಸಿ ಹೇಳಲು ಕೇಳದಾಗಿದೆ ನನ್ನೀ ಮನವು|| ಎಲ್ಲವೊ ||
  -ಷಡಕ್ಷರಿ ಎಮ್,ವಿ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s