ಹ್ಯಾಪಿ ಬರ್ತ್ ಡೇ ನೆನಪಿನ ಸಂಚಿ

ಹ್ಯಾಪಿ ಬರ್ತ್ ಡೇ ನೆನಪಿನ ಸಂಚಿ

ಇವತ್ತು ಬೆಳ್ಳಂಬೆಳಿಗ್ಗೆ  ವರ್ಡ್ಪ್ರೆಸ್ ನನಗೆ ಶುಭಾಶಯವನ್ನು ಕೋರಿತ್ತು , ನನ್ನ  “ನೆನಪಿನ ಸಂಚಿ” ಬ್ಲಾಗಿಗೆ ಮೂರನೇ ವರ್ಷದ ವರ್ಷ ತುಂಬಿದೆ ಅಂತೆ.. ಅಬ್ಬಾ ಮೂರು ವರ್ಷ!,  ಎದ್ದು ಬಿದ್ದು ಅಂಬೆಗಾಲಿನ ಸಮಯ ದಾಟಿದೆ ಎಂದರ್ಥ!

ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ, ಡೈರಿಯ ಪುಟಗಳಲ್ಲಿ, ಸ್ಟಡಿ ಡೆಸ್ಕಿನ ತುಂಬೆಲ್ಲಾ ಹರಡಿಕೊಂಡಿದ್ದ ನನ್ನ ಒಂದಿಷ್ಟು ಅಸಂಬದ್ದ ಅಲಾಪಗಳನ್ನು ಇಲ್ಲಿ ತುಂಬಿಸಿ ಇಟ್ಟಿದ್ದೇನೆ. ನೀವು ಅದನ್ನ ತಿದ್ದಿ ತೀಡಿ ಮನಸಾರೆ ಸ್ವೀಕರಿಸಿಕೊಂಡಿದ್ದೀರಿ ಎಂಬುದಕ್ಕೆ ಬರೋಬ್ಬರಿ         “4 0 0 0 0 0 ” ಹಿಟ್ಸ್ಗಳೇ ಸಾಕ್ಷಿ.  ನಾಲ್ಕು ಲಕ್ಷ ಹಿಟ್ಸ್  ಕ್ಲಬ್ ಗೆ ಕೆಲವೇ ಸೇರಿದ ಬೆರಳೆಣಿಕೆಯ ಕನ್ನಡ ಬ್ಲಾಗಿನಲ್ಲಿ ನಂದೂ ಒಂದು ಅಂತ ಅಭಿಮಾನದಿಂದ ಹೇಳಿಕೊಳ್ಳುತ್ತೇನೆ. ನನ್ನ ಬ್ಲಾಗನ್ನು ಈ ಮಟ್ಟಕ್ಕೆ ಬೆಳೆಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು .

ನಾನು ಬ್ಲಾಗ್ ತೆರೆಯಲು ಕಾರಣವಾದ  “ಕನ್ನಡ ಬ್ಲಾಗ್” ಎಂಬ ಸಾಹಿತ್ಯ ಗುಂಪಿಗೆ ನನ್ನ ಮೊದಲ ಧನ್ಯವಾದ. ನಾನು ಅಕ್ಷರ ಸಾಂಗತ್ಯ ಬೆಳೆಸಿಕೊಂಡದ್ದು ಆ ಗುಂಪಿನಿಂದ. ಈ ಬ್ಲಾಗ್ ಲೋಕ ನನಗೆ  ಹಲವಾರು ಅತ್ಮೀಯರನ್ನು ನೀಡಿತು. ಅವರ ಸ್ಪೂರ್ತಿಯ ಮಾತುಗಳು ನನಗೆಂದೂ ಪ್ರೇರಕ ಶಕ್ತಿ, ಎಲ್ಲದ್ದಕ್ಕಿ೦ತಲೂ ಹೆಚ್ಚಾಗಿ ನನ್ನಲ್ಲಿನ ಬರಹಗಾರನನ್ನು ಹೊರ ತ೦ದಿದ್ದೇ ಅವರು. ಅವರ ಪ್ರೋತ್ಸಾಹ ನನ್ನಲ್ಲಿ ನಾನೂ ಬರೆಯಬಲ್ಲೆನೆ೦ಬ ವಿಶ್ವಾಸವನ್ನು ಹೆಚ್ಚಿಸಿತು. ಎಲ್ಲರ ಹೆಸರು ಎತ್ತುವುದು ಕಷ್ಟದ ಕೆಲಸ, ಆದರೂ,ಪ್ರಸಾದ್ ವಿ ಮೂರ್ತಿ ಅಬ್ದುಲ್ ಸತ್ತಾರ್ ಕೊಡಗು ಬನವಾಸಿ ಸೋಮಶೇಖರ್, ಪುಷ್ಪರಾಜ ಚೌಟ, ಪ್ರಮೋದ್ ಪಮ್ಮಿ, ಶಿವಣ್ಣ ಅಂತ ಆತ್ಮೀಯವಾಗಿ ನಾನು ಕರೆಯುವ ಹೃದಯ ಶಿವ, ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ದಿವಂಗತ ರವಿ ಮೂರ್ನಾಡು, ಪ್ರಕಾಶ್ ಶ್ರೀನಿವಾಸ್,ಪ್ರವರ ಕೊಟ್ಟೂರ್ , ಸತೀಶ್ ರಾಮನಗರ, ಕಂಚೀಮನೆ, ಸುಷ್ಮಾ ಮೂದಬಿದಿರ, ಕೃಷ್ಣಣ್ಣ, ನಟರಾಜು ಸೀಗೆಕೋಟೆ ಮಾರಿಯಪ್ಪ, ಗಣೇಶ ಗಣಿ, ಬದರಿನಾಥ ಪಳವಲ್ಲಿ, ಶಂಕರಣ್ಣ ಕೆಂಚನೂರು ,ಬಂಡೆ ಕವಿ, ಅಬ್ದುಲ್ ಭದ್ರಾವತಿ ಹೀಗೆ ಹತ್ತು ಹಲವು ಮುಖಗಳು ನನಗೆ ಬೆನ್ನೆಲುಬಾಗಿ ನಿಂತವರು,ಸ್ಫೂರ್ತಿ ತುಂಬಿದವರು.. ಎಲ್ಲರನ್ನೂ ನೆನೆಸಲಾಗುತ್ತಿಲ್ಲ… ಕ್ಷಮೆಯಿರಲಿ.. ಆದರೆ “ನೆನಪಿನ ಸಂಚಿಯ ಪ್ರತೀ ಪುಟಕ್ಕೂ ನಿಮ್ಮ ನೆನಪಿದೆ. ಎಲ್ಲರಿಗೂ ಒಂದೇ ಮಾತಿನಲ್ಲಿ ಧನ್ಯವಾದಗಳು ಹೇಳುತ್ತಿದ್ದೇನೆ.

ಮಗದೊಮ್ಮೆ ನಿಮ್ಮ ಪ್ರೀತಿ ವಿಶ್ವಾಸವನ್ನು ನೆನೆಯುತ್ತಾ…

“ನೆನಪಿನ ಸಂಚಿ” ಮೇಲೆ ಸದಾ ನಿಮ್ಮ ಒಲವು, ಹಾರೈಕೆ ಇರಲಿ! … ತಪ್ಪನ್ನು ತಿದ್ದಿ,ಸರಿಯಾದುದನ್ನು ಮೆಚ್ಚಿ ನನ್ನ ಅಕ್ಷರ ಸಾಂಗತ್ಯದ ಪ್ರತೀ ಹೆಜ್ಜೆಯಲ್ಲಿ  ಬೆಳಕಾಗಿ ನೀವು ಜೊತೆ ಇರಬೇಕೆಂಬ ಅಧಮ್ಯ ಬಯಕೆ ನನ್ನದು… ಪೂರೈಸುವಿರೇ?

Add Comments