ಹುಸೇನಿ ಪದ್ಯಗಳು - 14 · ಹುಸೇನಿ_ಪದ್ಯಗಳು · Honey'ಗವನ

Honey’ಗವನ (ಹುಸೇನಿ ಪದ್ಯಗಳು – 14)


1.
ನಿನ್ನ ಸಾಂಗತ್ಯದಿ
ನನ್ನೊಳಗೆ ಮೂಡುವ
ಸಾವಿರ ಭಾವನೆಯ
ಬಣ್ಣದೋಕುಳಿ
ನನ್ನ ಹೋಳಿ ..
__
2.
ಇಂದೂ ಕಾದು ಕುಳಿತಿದ್ದೇನೆ
ನೀ ಬಿಟ್ಟು ಹೋದ ಈ
ದಡದಿ,
ನನ್ನದು ಓಡೋಡಿ
ಬರುವ ಅಲೆಯ ನಿಯತ್ತು..!
__
3.
ನನ್ನ ಕಪ್ಪು-
ಬಿಳುಪು ಕನಸುಗಳಿಗೆ
ನೀ ಹರವಿಟ್ಟ ಬಣ್ಣ
ಮಾಸಿ ಹೋಗಿದೆ ಗೆಳತೀ ..
__
4.
ನಿನ್ನ ಕಾಲ್ಗೆಜ್ಜೆ
ಮಣಿಗಳಿಗೆ
ನನ್ನ ಕನಸನ್ನು
ಕಟ್ಟಿದ್ದೇನೆ…
ಜೋಪಾನ ಹುಡುಗಿ…
__
5.
ಅಲೆಗೆ ದಡ ಸೇರುವ ತವಕ,
ನಾ ಬರೆದ ನಿನ್ಹೆಸರ
ಅಳಿಸಿತ್ತು….
__
6.
ನೀನರಿಯದೆ ನಿನ್ನ
ಪ್ರೀತಿಸುವುದರಲ್ಲೂ
ಸುಖವಿದೆ;
ಸುರಿಯದ ಮಳೆಯಲ್ಲಿ
ನೆನೆಯುವ ಸುಖ..!


ನಿಮ್ಮ ನಲ್ನುಡಿ