ಹುಸೇನಿ ಪದ್ಯಗಳು‬- 18 · ಹುಸೇನಿ_ಪದ್ಯಗಳು

‎ಹುಸೇನಿ ಪದ್ಯಗಳು‬- 18

dark

೧)
ನನ್ನ ಇರುಳ ಹೆಜ್ಜೆಗೆ
ಬೆಳಕಾಗಬೇಕಿದ್ದ ನಿನ್ನ ಪ್ರೀತಿ
ಮತ್ತಷ್ಟು ತಮವನ್ನು ತುಂಬಿದೆ;
ಗಮ್ಯದ ಕವಲು ದಾರಿಯಲ್ಲಿ
ಕಣ್ಣು ಮಂಜಾಗಿ ಕನಲುತ್ತಿದ್ದೇನೆ .. !
೨)
ನಿನ್ನ ನೆನಹುಗಳು ಕಣ್ಣೀರಾಗಿ
ಒಡಲಾಳವನ್ನು ತೊಯ್ದರೂ
ವಿದಾಯದ ಮುನ್ನ
ಎದೆಯೊಳಗೆ ಮುಖ ಹುದುಗಿಸಿ
ನೀ ತುಂಬಿಕೊಟ್ಟ ನಿಟ್ಟುಸಿರ
ಕಾವು ಇನ್ನೂ ಆರಿಲ್ಲ..
೩)
ನಿನ್ನೆ ನನ್ನೊಡನೆ ಆಗಸದಿಂದ
ಉದುರಿದ ಹನಿಗಳು
ಭೂತಾಯಿ ಒಡಲು ಸೇರಿ
ಆ ಬೀಜ ಮೊಳೆಕೆಯೊಡೆದಿದೆಯಂತೆ.
ನಾಳೆಯ ನಿನ್ನ ಮನೆಯಂಗಳದ
ಚೆಂಡು-ಹೂವುಗಳು
ಬಿಕ್ಕಿದರೆ ನನ್ನ ದೂರದಿರು._ಹುಸೇನಿ

Leave a comment