ಕಾಡುವ ಹನಿಗಳು · ನೆನಪಿನ ಹನಿ · ಸಾವಿನ ಹನಿಗಳು

ಸಾವಿನ ಹನಿಗಳು

images
1.
ಸಾಸಿವೆಯ ನೆಪ ಹೇಳಿ
ಉತ್ತರವಿಲ್ಲದೆ
ಬುದ್ದನೂ ನುಣುಚಿಕೊಂಡ
ಮೊದಲ ಪ್ರಶ್ನೆ –
ಸಾವು

2.
ಅಗಲುವಿಕೆ ಮಾತ್ರ
ವಿಧಿಸಲ್ಪಟ್ಟ ನಶ್ವರ
ಜಗತ್ತಿನಲ್ಲಿ
ನನ್ನ ಹುಡುಕಿ ಬಂದೇ ಬರುವ
ಸತ್ಯ ಪ್ರಣಯಿನಿ-
ಸಾವು

3.
ಜಗವ ಗೆದ್ದು ಬೀಗಿದ
ಅರಸನೂ
ಬೇಷರತ್ ಶರಣಾದ,
ಶತ್ರು-
ಸಾವು

Leave a Comment