ಸರಳ ರೇಖೆಗಳು

ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – IV

ರೇಖೆ -೧೬
ದೇವರು ನಮ್ಮನ್ನು ಕೈ ಬಿಡಲಾರ ನಿಜ, ಹಾಗೆಂದು ಈಜು ಬಾರದೆ ಸಮುದ್ರಕ್ಕೆ ಧುಮುಕುವುದು ಮೂರ್ಖತನದ ಪರಮಾವಧಿ …

ರೇಖೆ -೧೭
ಸಹನೆ ಅಂದ್ರೆ ಮೌನವಾಗಿರುವುದಲ್ಲ. ಮೌನ ಅಂದ್ರೆ ಎಲ್ಲವನೂ ಸಹಿಸಿಕೊಳ್ಳುವುದಲ್ಲ…

ರೇಖೆ -೧೮
ಕಣ್ಣಿಗೆ ನೂರು ಮುಖ …! , ಮನಸಿಗೆ ಒಂದೇ ಮುಖ ..

ರೇಖೆ -೧೯
ದ್ವೇಷವನ್ನು ಪ್ರೀತಿಯಿಂದ ಗೆಲ್ಲೋಣ… ಮುಳ್ಳನ್ನು ಮುಳ್ಳಿನಿಂದ ತೆಗೆದರೆ ನೋವು ಹೆಚ್ಚಾಗುತ್ತೆ..

ರೇಖೆ -೨೦
ಹೌದು.. ನಾನು ಹೆಜ್ಜೆ ಹಿಂದಿಟ್ಟದ್ದು ನಿಜ.. ಸಿಂಹ ನಾಲ್ಕು ಹೆಜ್ಜೆ ಹಿಂದಿಟ್ಟಿದೆ ಅಂದರೆ ಮುಂದೆ ದೊಡ್ಡ ದಾಳಿಗೆ ಸಿದ್ದವಾಗಿದೆ ಎಂದರ್ಥ…

Leave a comment

ಸರಳ ರೇಖೆಗಳು · ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – III

ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – III

ರೇಖೆ -೧೧
ಇನ್ನೊಬ್ಬರ ಸಂತೋಷವನ್ನು ಬರೆಯುವ ‘ಪೆನ್ಸಿಲ್ ‘ ಆಗುವುದಕ್ಕಿಂತ.. ಮತ್ತೊಬ್ಬರ ನೋವನ್ನು ಅಳಿಸೋ ‘ರಬ್ಬರ್’ ಆಗೋಣ..

ರೇಖೆ -೧೨
ಮಾತಿನೊಳಗಿನ ಮೌನವನ್ನೂ .. ನಗೆಯ ಹಿಂದಿನ ನೋವನ್ನು ತಿಳಿಯುವುದೇ ನಿಜವಾದ ಗೆಳೆತನ…

ರೇಖೆ -೧೩
ಕಳೆದುಕೊಂಡಿದ್ದನ್ನೆಲ್ಲ ನೆನಪಿಸಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ.. ಅದೆಂದೂ ವಾಪಾಸ್ ಬರುವುದಿಲ್ಲ .. ಆದರೆ ಭವಿಷ್ಯದಲ್ಲಿ ನಂಬಿಕೆ ಇಟ್ಟು ಕಾರ್ಯಪ್ರವೃತ್ತವಾದರೆ ಕಳೆದುಕೊಂಡಿದ್ದಕ್ಕಿಂತ ದೊಡ್ಡದನ್ನು ಪಡೆಯಬಹುದು.. ಏನಂತೀರ ಗೆಳೆಯರೇ ?

ರೇಖೆ -೧೪
ಬದುಕು ಕಲಿಸಿದ ತಾಯಿಗಿಂತ “ಅವಳು” ಇಷ್ಟವಾಗುವ ಹುಚ್ಚುತನಕ್ಕೆ ಪ್ರೀತಿ ಅನ್ನಲಾರೆ…

ರೇಖೆ -೧೫
ಸೌಂದರ್ಯದ ಕನಸುಕಂಡು .. ಜೀವನ ಹಾಳು ಮಾಡುವುದಕ್ಕಿಂತ ಜೀವನದ ಬಗ್ಗೆ ಕನಸು ಕಂಡು ಜೀವನಕ್ಕೆ ಸೌಂದರ್ಯ ತುಂಬೋಣ.. ಏನಂತೀರ?

Leave a comment

ಸರಳ ರೇಖೆಗಳು

ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – II

ರೇಖೆ -೬

ಗಗನದಿ ಹಾರುವ ಹಕ್ಕಿಯ ಏಣಿ ಹಾಕಿ ಹಿಡಿಯಲು ಹೋರಟ ನಾನೊಬ್ಬ ಮೂರ್ಖ…!

ರೇಖೆ -೭

ತಪ್ಪಿನ ವಿರುದ್ದ ಬೆರಳು ತೋರಿಸುವುದು ಧಿಕ್ಕಾರವಾದರೆ ನಾನು ಧಿಕ್ಕಾರಿಗಳ ಹಿಂಬಾಲಕ..

ರೇಖೆ -೮

ಸಂತಸಕ್ಕೆ ಹತ್ತು ಕಾರಣಗಳಿದ್ದರೂ ಒಂದೇ ಒಂದು ಕಾರಣಕ್ಕೆ ದುಃಖಿತರಾಗುವ ಬದಲು ದುಃಖಕ್ಕೆ ಹತ್ತು ಕಾರಣಗಳಿದ್ದರೂ ಒಂದೇ ಒಂದು ಕಾರಣಕ್ಕೆ ಸಂತಸ ಪಡುವ “ನಮ್ಮತನ”ವನ್ನು ಬೆಳೆಸೋಣ …

ರೇಖೆ -೯

ನಮ್ಮ “ಕಡಿಮೆ ತೂಕ”ದ ಮಾತು ಮತ್ತೊಬ್ಬರ ಹೃದಯವನ್ನು “ಭಾರ” ಮಾಡಬಹುದು .. ಅಂತಹ ಮಾತಿಗೆ ಕಡಿವಾಣ ಹಾಕೋಣ…

ರೇಖೆ -೧೦

ಪರಿಚಿತರಾಗಲು, ಬೆರೆಯಲು, ಅರಿಯಲು, ಕೊನೆಗೆ ಅಗಲಲು ಮಾತ್ರ ವಿಧಿಸಲ್ಪಟ್ಟ ಈ ಜಗದ ನಿಯಮವನ್ನು ನಾನು ಎಲ್ಲದಕ್ಕಿಂತ ಹೆಚ್ಚಾಗಿ ದ್ವೇಷಿಸುತ್ತೇನೆ …

(ಇವೆಲ್ಲವೂ ಯಾವುದೊ ಮೂಡಿನಲ್ಲಿ ಫೇಸ್ಬುಕ್ ನಲ್ಲಿ ಹಾಕಿದ ಸ್ಟೇಟಸ್ಗಳು… 🙂 )

Leave a comment

ಸರಳ ರೇಖೆಗಳು

ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – I

ರೇಖೆ -೧

ಕನಸುಗಳೆಲ್ಲ ನನಸಾಗದು ನಿಜ..,ಆದರೆ ಕೆಲವು ಕನಸುಗಳು ಜೀವ ಚೈತನ್ಯವಾಗಬಹುದು.. ಅಂತಹ ಕನಸುಗಳ ಜಾಡು ಹಿಡಿದು ಬದುಕು ಕಟ್ಟೋಣ ..

ರೇಖೆ -೨

ಗಂಟೆಗಟ್ಟಲೆ ಫೋನಲ್ಲಿ ಮಾತನಾಡುವುದು ,ಮೆಸ್ಸಜಲ್ಲಿ ಹರಟುವುದು ಮುಂತಾದವು ಸಂಭಂದವನ್ನು ಗಟ್ಟಿಗೊಳಿಸುವುದಿಲ್ಲ, ನಮ್ಮೊಳಗಿನ ಭಾವ ತೀವ್ರತೆ ಮತ್ತು ಭಾವ ಸ್ವಚ್ಛತೆಯಲ್ಲದೆ…

ರೇಖೆ -೩

ಕಣ್ಣು ತೆರೆದಾಗ ಕಾಣುವ ಪರಿಮಿತ ಜಗತ್ತಿಗಿಂತ ಕಣ್ಣು ಮುಚ್ಚಿದಾಗ ಅನುಭವಿಸುವ ಅಪರಿಮಿತ ಜಗತ್ತನ್ನು ನಾನು ಹೆಚ್ಚು ಇಷ್ಟಪಡುತ್ತೇನೆ…!

ರೇಖೆ -೪

ಒಂದೇ ಒಂದು ದಡವನಪ್ಪಲು ಭೋರ್ಗೆರೆದು ಬರುವ, ಅನಂತ ಸಾಗರದಲೆಗಳಿಗೂ ದಡಕ್ಕೂ ಅದೇನು ಅವಿನಾಭಾವ ಸಂಬಂಧವೋ ತಿಳಿಯೆ…..

ರೇಖೆ -೫

ಕೆಲವೊಮ್ಮೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವುದು ಕೂಡ ಒಳ್ಳೆಯದೇ … ಮೈಲಾರಕ್ಕಿರುವ ಗರಿಷ್ಟ ದೂರವನ್ನಾದರೂ ತಿಳಿಯಬಹುದು …!

(ಇವೆಲ್ಲವೂ ಯಾವುದೊ ಮೂಡಿನಲ್ಲಿ ಫೇಸ್ಬುಕ್ ನಲ್ಲಿ ಹಾಕಿದ ಸ್ಟೇಟಸ್ಗಳು… :))