ಮನಸಿನ ಹಾ(ಪಾ)ಡು · ಮರಳಿ ಮತ್ತೆ ಬಾ ನೀನು ..

ಮರಳಿ ಮತ್ತೆ ಬಾ ನೀನು ..

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ಕನಸೆಂಬ ಕುದುರೆಗೆ ನಿನ್ನ
ಒಲವಿನ ತೇಪೆಯ ಹಚ್ಚಿ..
ಮನಸ್ಸನ್ನು ಎಲ್ಲೆ ಮೀರಲು ಬಿಟ್ಟು..
ಸಂತಸದ ಅಲೆಯಲ್ಲಿ ತೇಲುತ್ತಿದ್ದ
ಆ ಕಾಲದ ನೆನಪಿದೆಯಾ ಗೆಳತಿ…?

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ಬೀಸುವ ಗಾಳಿಗೆ ತಂಪಿಲ್ಲ..
ನೇಸರನ ರಶ್ಮಿಯಲ್ಲೂ ಹೊಳಪಿಲ್ಲ..
ಮೊದಲ ಮಳೆಗೆ ತೊಯ್ದ ಮಣ್ಣಿಗೆ
ಸುಗಂಧವೇ ಇಲ್ಲ…

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ಹೋದ ದಾರಿಯಲಿ, ನಿಂತ ತೀರದಲಿ..
ಬರೀ ನಿನ್ನದೇ ನೆನಪು…
ಬಿದಿಗೆ ಚಂದ್ರಮನಿಗೂ ಇಲ್ಲ
ಮೊದಲಿನ ಹೊಳಪು…

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ನೀನು ಹೋದ ನಂತರ ವಸಂತ ಕಾಲ
ಬಂದಿಲ್ಲ..ಹೂವು ಚಿಗುರೊಡೆದು,
ಕಾಯಿಯಾಗಿಲ್ಲ!
ಕಾನನದ ಸುಮವು ಕಂಪನ್ನು
ಸೂಸಿಲ್ಲ…

ಎಲ್ಲಿ ಕಳೆದು ಹೋದೆ ನೀನು…
ಮರಳಿ ಮತ್ತೆ ಬರಬಾರದೇ ನೀನು…?

ನಿನ್ನದಲ್ಲದ ನಲಿವು ನನಗೆ ಬೇಡ…
ನಿನ್ನದಲ್ಲದ ನೋವು ಕೂಡ..
ಒಡೆದ ಹೃದಯದಲಿ, ಬಿಚ್ಚಿಟ್ಟ ಭಾವನೆಯಲಿ
ಕಾಯುತ್ತಿರುವೆ ನಾನು…
ನಿರಾಶೆ ಮಾಡಬೇಡ…

ಎಲ್ಲೋ ಕಳೆದು ಹೋದೆ ನೀನು…
ಮರಳಿ ಮತ್ತೆ ಬಾ ನೀನು…