ನೆನಪಿನ ಹನಿ · ಮತ್ತೊಮ್ಮೆ _ಬಾ_ಬಾಲಿಕಾ.. · ಹುಸೇನಿ_ಪದ್ಯಗಳು

ಮತ್ತೊಮ್ಮೆ _ಬಾ_ಬಾಲಿಕಾ..

balike

೧)
ರುಂಡ ಕಡಿಯಿರಿ
ಎಂದವಳ ಮೊಗದ ಜೀವಸೆಲೆ
ಬದುಕಿನೋತ್ಸಾಹ ಕೊಟ್ಟದ್ದು ಸುಳ್ಳಲ್ಲ..

೨)
ಶಾಂತಿ ಬೇಡ ಇನ್ನೂ ಶಾಂತಿ ಬೇಡ
ಎಂದು ಕೂಗುವ ಹೊತ್ತಿಗೆ
ಪೂರ್ಣಚಂದ್ರನು ನಾಚಿಸುವ
ಅವಳ ಮೊಗದ ಪ್ರಖರ ಮುಗ್ಧತೆಗೆ ಬೆರಗಾಗಿ
ನಾನು ಶಾಂತಚಿತ್ತನಾಗಿದ್ದೆ..

೩)
ಹೊಂಬಿಸಿಲ ಸೂರ್ಯಕಿರಣ
ಮೊಗವ ಚುಂಬಿಸಲು
ಅವಳು ಹೊಳೆಯುತ್ತಲೇ ಹೋದಳು..
ಕಾಗೆ ಬಂಗಾರ ನುರಿನುರಿದು
ಮೈಗೆಲ್ಲಾ ಮೆತ್ತಿ ಸಂಭ್ರಮಿಸಿದ ದಿನಗಳು
ಸುಮ್ಮನೆ ನೆನಪಾದವು..

~ಹುಸೇನಿ

Leave a comment