ಪುನರ್ಜನ್ಮ ನೀಡಲು..!

ಪುನರ್ಜನ್ಮ ನೀಡಲು..!

ಒಂದು ದಿನ ನನ್ನನ್ನರಸುತ್ತಾ ನೀನು ಬರಬಹುದು
ಏಕಾಂಗಿಯಾದ ನನ್ನ ಬಳಿ..!
ಅಂದು ನಿನ್ನ ಹೃದಯದಲಿ ಹೂತಿಟ್ಟ ನನ್ನ ನೆನಪುಗಳು
ಮತ್ತೆ ಪುಟಿದೇಳಬಹುದು .. ಕಣ್ಣೀರಾಗಿ !
ನೀ ತಂದ ಕೆಂಪು ಗುಲಾಬಿಯನು ಎದೆಗೊರಗಿಸಿ
ನೆನೆದ ಮಣ್ಣಲ್ಲಿತ್ತು ನೀ ತಿರುಗಿ ನಡೆಯಲು,
ನಿನ್ನ ಕಣ್ಣಿಂದ ಜಾರಿಬಿದ್ದ ಆ ಒಂದು ಹನಿ ಕಣ್ಣೀರು
ಮಾತ್ರ ಸಾಕು ನನಗೆ
ಪುನರ್ಜನ್ಮ ನೀಡಲು..!!