ನೆನಪಿಗೆ ಜೊತೆ

ನೆನಪಿಗೆ ಜೊತೆ..

ಅಂದು
ಧಗೆಯಾಗಿ ,ವರ್ಷಧಾರೆಯಾಗಿ ಪ್ರಕೃತಿಯು
ಬಣ್ಣ ಬದಲಾಯಿಸಲು, ಅವರಿಬ್ಬರೂ
ಪ್ರಣಯೋತ್ಸವದಲ್ಲಿ ಮೈ ಮರೆತಿದ್ದರು!

ಇಂದು
ಹೇಳದೆ ಹೋದ ಮಾತನ್ನೂ,
ನನಸಾಗದ ಕನಸನ್ನೂ
ತನ್ನ ತೆಕ್ಕೆಗೆ ತೆಗೆದುಕೊಂಡ ಕಾಲ
ಅವರಿಗಿಂತ ಮುಂದೆ ಕ್ರಮಿಸಲು,
ಸುಂದರವಾದ ಪ್ರಣಯಕಾಲವೂ
ನೆನಪಿಗೆ ಜೊತೆಯಾಯಿತು..!!