ಕಾಡುವ ಹನಿಗಳು · ನಿನ್ನ ನೆನಪು · ನೆನಪಿನ ಹನಿ

ನಿನ್ನ ನೆನಪು

ಒಂಟಿ ಕಾಗೆಯ ಕೂಗು,
ಸಾಯಂ ಸಂಧ್ಯೆಯ ಏಕಾಂತ
ಹುಣ್ಣಿಮೆಯ ರಾತ್ರಿಯಲ್ಲೂ
ವಿಷಾದ ನೀರವ,
ಕತ್ತಲೊಳಗೆ ಮತ್ತಷ್ಟು ಕತ್ತಲು
ವಿಭಾಕರ ಕಿರಣಗಳಲ್ಲೂ ವಿರಹ
ಗೆಳತೀ .. ನಿನ್ನ ನೆನಪು
ಯಾಕಿಷ್ಟು ಯಾತನಾಮಯ?

Leave a comment